ಮುಸ್ಲಿಮ್ ಮಹಿಳೆಯರ ಧಾರ್ಮಿಕ ವಸ್ತ್ರ ಬುರ್ಖಾ ಧರಿಸಿ ಅಸಭ್ಯ ನೃತ್ಯ!
ಮಡಿಕೇರಿ: ಮುಸ್ಲಿಮ್ ಸಮುದಾಯದ ಧಾರ್ಮಿಕ ವಸ್ತ್ರ ಬುರ್ಖಾ ಧರಿಸಿ ಕೆಲವರು ಆಕ್ಷೇಪಾರ್ಹವಾಗಿ ನೃತ್ಯ ಮಾಡಿರುವ ವಿಡಿಯೋ ವೈರಲ್ ಆದ ಬೆನ್ನಲ್ಲೇ ಕೊಡಿಗಿನ ಮುಸ್ಲಿಮ್ ಮುಖಂಡರು ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ವರದಿಗಳ ಪ್ರಕಾರ ಮಡಿಕೇರಿ ತಾಲೂಕಿನ ಕೊಳಕೇರಿ ಗ್ರಾಮದಲ್ಲಿ ಮೇ 28ರಂದು ಮತ್ತು ಮೇ 29ರಂದು ಪಶ್ಚಿಮ ಕೊಳಕೇರಿ ಗ್ರಾಮಾಭಿವೃದ್ಧಿ ಸಂಘದ ವಜ್ರಮಹೋತ್ಸವದ ವೇದಿಕೆಯಲ್ಲಿ ಮುಸ್ಲಿಮ್ ಮಹಿಳೆಯರ ಧಾರ್ಮಿಕ ವಸ್ತ್ರ ಬುರ್ಖಾ ಧರಿಸಿ, ಕೊಡವ ವಾಲಗಕ್ಕೆ ಅಸಭ್ಯವಾಗಿ ನೃತ್ಯ ಮಾಡಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಆಕ್ರೋಶ ವ್ಯಕ್ತಪಡಿಸಿರುವ ಮುಸ್ಲಿಮ್ ಮುಖಂಡರು, ಮುಸ್ಲಿಮ್ ಧಾರ್ಮಿಕ ಉಡುಪುಗಳಿಗೆ ಅವಮಾನ ಮಾಡಲಾಗಿದೆ. ಇದರಿಂದಾಗಿ ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಲೈಂಗಿಕ ಕ್ರಿಯೆಯ ಬಳಿಕ ನೆನಪಿನ ಶಕ್ತಿ ಕಳೆದುಕೊಂಡ ವೃದ್ಧ!
ಬೊಮ್ಮಾಯಿಯವರೇ ನೆನಪಿರಲಿ, ಮಸಿ ಬಳಿದದ್ದು ರಾಜ್ಯ ಸರ್ಕಾರದ ಮುಖಕ್ಕೆ: ಸಿದ್ದರಾಮಯ್ಯ ಕಿಡಿ
ನೆಟ್‌ಫ್ಲಿಕ್ಸ್ ರಷ್ಯಾದಲ್ಲಿ ಪ್ರಸಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ
ನವಜಾತ ಶಿಶುವಿನ ಹೊಟ್ಟೆಯಲ್ಲಿ ಭ್ರೂಣ ಪತ್ತೆ!: ವೈದ್ಯರಿಗೇ ಶಾಕ್
ರಣರಂಗವಾದ ರೈತ ಮುಖಂಡರ ಸಭೆ: ರೈತ ಮುಖಂಡ ಟಿಕಾಯತ್ ಮೇಲೆ ಹಲ್ಲೆ, ಮಸಿ ಎರಚಿದ ಕಿಡಿಗೇಡಿ