ಬುರ್ಖಾ ಧರಿಸಿದವರಿಗೆ ಥಳಿತ: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದ ಅಸಲಿಯತ್ತು ಬಯಲು - Mahanayaka
5:41 AM Friday 20 - September 2024

ಬುರ್ಖಾ ಧರಿಸಿದವರಿಗೆ ಥಳಿತ: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದ ಅಸಲಿಯತ್ತು ಬಯಲು

hijab
22/02/2022

ಬೆಂಗಳೂರು: ಹಿಜಾಬ್‌ ನಿಷೇಧ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಬುರ್ಖಾ ಧರಿಸಿದ್ದ ಮಹಿಳೆಯರ ಮೇಲೆ ಕಾರ್ನಾಟಕ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ನಕಲಿ ಎಂದು ಕರ್ನಾಟಕ ಪೊಲೀಸ್‌ ಚೆಕ್‌ ಮೂಲಕ ತಿಳಿಸಿದೆ.

ಬುರ್ಖಾ ಧರಿಸಿ ಮಹಿಳಾಯರ ಗುಂಪನ್ನು ಪೊಲೀಸರು ಥಳಿಸುವ ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್‌ ಆಗಿದ್ದು, ಹಿಜಾಬ್‌ ನಿಷೇಧದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಮುಸ್ಲಿಂ ಮಹಿಳೆಯರನ್ನು ಕರ್ನಾಟಕ ಪೊಲೀಸರು ಹೊಡೆದಿದ್ದಾರೆ ಎಂದು ಬಿಂಬಿಸಲಾಗಿದೆ.

ತರಗತಿಗಳಲ್ಲಿ ಹಿಜಾಬ್‌ ಧರಿಸುತ್ತಿವುದನ್ನು ನಿಷೇಧಿಸುವ ಕುರಿತಂತೆ ಪರ ಮತ್ತು ವಿರೋಧಿ ಪ್ರತಿಭಟನೆಗಳ ನಡುವೆ ಈ ವಿಡಿಯೋ ಹಂಚಿಕೊಳ್ಳಲಾಗುತ್ತದೆ.
ಪೊಲೀಸ್‌ ಪರಿಶೀಲನೆಯ ಪ್ರಕಾರ, ಈಗ ಹರಿದಾಡುತ್ತಿರುವ ವಿಡಿಯೋ ವಾಸ್ತವವಾಗಿ ಸೆಷ್ಟಂಬರ್‌ನಲ್ಲಿ ಬೆಂಗಳೂರಿನ ಹೊಸ ಶಿಕ್ಷಣ ನೀತಿ ಅನುಷ್ಠಾನದ ವಿರುದ್ಧ ಕೆಲವು ವಿದ್ಯಾರ್ಥಿಗಳು ಪ್ರತಿಭಟಿಸುತ್ತಿದ್ದ ಸಂದರ್ಭ ಚಿತ್ರೀಕರಿಸಲಾದ ವೀಡಿಯೋ ಆಗಿದೆ. ‘ರಸ್ತಾ ರೋಕೊ’ ನಡೆಸಲು ಯತ್ನಿಸಿ ಸಂಚಾರಕ್ಕೆ ಅಡ್ಡಿ ಉಂಟು ಮಾಡಿದ ಕಾರಣ ಪೊಲೀಸರು ಬಲವಂತವಾಗಿ ಅವರನ್ನು ರಸ್ತೆಯಿಂದ ಹೊರಗ ಕಳುಹಿಸಿ ಸಂಚಾರಕ್ಕೆ ಮುಕ್ತಗೊಳಿಸಿದ್ದರು.


Provided by

ಆದರೆ ಹಿಜಾಬ್‌ ಸಂಬಂಧಿಸಿದ ವಿವಾದಕ್ಕೆ ಮತ್ತು ಹರಿದಾಡುತ್ತಿರುವ ವಿಡಿಯೋಗೆ ಯಾವುದೇ ಸಂಬಂಧ ಇಲ್ಲ. ಕರ್ನಾಟಕ ಪೊಲೀಸರ ಪ್ರತಿಷ್ಠೆಗೆ ಕಳಂಕ ತರಲು ಉದ್ದೇಶಪೂರ್ವಕವಾಗಿ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ ಎಂದು ಪೊಲೀಸ್‌ ಇಲಾಖೆ ಮಾಹಿತಿ ನೀಡಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಪೊಲೀಸ್ ಸಿಬ್ಬಂದಿಗೆ ಚೂರಿ ಇರಿತ: ಪ್ರಕರಣ ದಾಖಲು

ಹಿಜಾಬ್ ವಿವಾದ: ಹೈಕೋರ್ಟ್ ಮೆಟ್ಟಿಲೇರಿದ ವಿದ್ಯಾರ್ಥಿನಿಯ ತಂದೆಯ ರೆಸ್ಟೋರೆಂಟ್ ಮೇಲೆ ತಂಡದಿಂದ ದಾಳಿ

ಮದುವೆ ಮುಗಿಸಿ ಬರುತ್ತಿದ್ದ ವಾಹನ ಕಮರಿಗೆ ಉರುಳಿ ಬಿದ್ದು10 ಮಂದಿ ಸಾವು

ಚಮೋಲಿ ದುರಂತ: ಒಂದು ವರ್ಷದ ನಂತರ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ

ಇತ್ತೀಚಿನ ಸುದ್ದಿ