ಹತ್ತು ರೂಪಾಯಿ ವಿಚಾರಕ್ಕಾಗಿ ನಡೀತು ಗಲಾಟೆ: ನಿವೃತ್ತ ಐಎಎಸ್ ಅಧಿಕಾರಿ ಮೇಲೆ ಬಸ್ ಕಂಡಕ್ಟರ್ ನಿಂದ ಹಲ್ಲೆ

13/01/2025

10 ರೂಪಾಯಿ ಹೆಚ್ಚುವರಿ ಶುಲ್ಕ ನೀಡಲು ನಿರಾಕರಿಸಿದ್ದಕ್ಕಾಗಿ ನಿವೃತ್ತ ಐಎಎಸ್ ಅಧಿಕಾರಿಯ ಮೇಲೆ ಬಸ್ ಕಂಡಕ್ಟರ್ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.

ಪೊಲೀಸರ ಪ್ರಕಾರ, ಜನವರಿ 10 ರಂದು ಈ ಘಟನೆ ನಡೆದಿದ್ದು, ನಿವೃತ್ತ ಐಎಎಸ್ ಅಧಿಕಾರಿ ಆರ್ ಎಲ್ ಮೀನಾ (75) ಅವರನ್ನು ಸೂಚಿತ ಬಸ್ ನಿಲ್ದಾಣದಲ್ಲಿ ಬಿಡಲಿಲ್ಲ. ಹೀಗಾಗಿ ಅವರು ಹೆಚ್ಚುವರಿ ಶುಲ್ಕವನ್ನು ಪಾವತಿಸಲು ನಿರಾಕರಿಸಿದರು.

ಆಗ್ರಾ ರಸ್ತೆಯ ಕನೋಟಾ ಬಸ್ ನಿಲ್ದಾಣದಲ್ಲಿ ಮೀನಾ ಬಸ್ಸಿನಿಂದ ಇಳಿಯಬೇಕಿತ್ತು. ಆದರೆ ಕಂಡಕ್ಟರ್ ಘನಶ್ಯಾಮ್ ಶರ್ಮಾ ನಿಲ್ದಾಣ ಬಂದಾಗ ಅವರಿಗೆ ಮಾಹಿತಿ ನೀಡಲಿಲ್ಲ.

ಬಸ್ ನೈಲಾದಲ್ಲಿ ಮುಂದಿನ ನಿಲ್ದಾಣವನ್ನು ತಲುಪಿದಾಗ ಶರ್ಮಾ ಮೀನಾ ಅವರನ್ನು 10 ರೂ.ಗಳ ಹೆಚ್ಚುವರಿ ಶುಲ್ಕವನ್ನು ಪಾವತಿಸುವಂತೆ ಕೇಳಿದಾಗ ಅಧಿಕಾರಿ ನೀಡಲು ನಿರಾಕರಿಸಿದರು. ಹೀಗಾಗಿ ಕಂಡಕ್ಟರ್ ಮತ್ತು ಮೀನಾ ನಡುವೆ ವಾಗ್ವಾದ ನಡೆಯಿತು. ಈ ಸಮಯದಲ್ಲಿ ಘನಶ್ಯಾಮ್ ಮೀನಾ ಅವರನ್ನು ತಳ್ಳಿದರು. ಇದಕ್ಕೆ ಪ್ರತಿಕ್ರಿಯೆಯಾಗಿ, ನಿವೃತ್ತ ಐಎಎಸ್ ಅಧಿಕಾರಿ ಶರ್ಮಾಗೆ ಹೊಡೆದಿದ್ದಾರೆ‌. ನಂತರ ಮೀನಾ ಬಸ್ಸಿನಿಂದ ಇಳಿಯುವವರೆಗೂ ಕಂಡಕ್ಟರ್ ಪದೇ ಪದೇ ಹಲ್ಲೆ ನಡೆಸಿದ್ದಾರೆ.

ಈ ಘಟನೆಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದ್ದು, ನಂತರ ಘನಶ್ಯಾಮ್ ವಿರುದ್ಧ ಕನೋಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ದುರ್ನಡತೆಗಾಗಿ ಜೈಪುರ ಸಿಟಿ ಟ್ರಾನ್ಸ್ ಪೋರ್ಟ್ ಸರ್ವೀಸಸ್ ಲಿಮಿಟೆಡ್ ಅವರನ್ನು ಅಮಾನತುಗೊಳಿಸಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ

Exit mobile version