ಬಸ್ ನ್ನು ಅಟ್ಟಾಡಿಸಿ ಗಾಜು ಒಡೆದು ಹಾಕಿದ ಆನೆ: ಹೆದರಿ ಕಿರುಚಿಕೊಂಡ ಪ್ರಯಾಣಿಕರು
ಚಾಮರಾಜನಗರ: ತಮಿಳುನಾಡು ಸಾರಿಗೆ ಸಂಸ್ಥೆ ಬಸ್ ಮೇಲೆ ಒಂಟಿ ಸಲಗವೊಂದು ದಾಳಿ ಮಾಡಿರುವ ಘಟನೆ ಚಾಮರಾಜನಗರ ಸಮೀಪದ ತಮಿಳುನಾಡಿನ ಅಸನೂರು ಹತ್ತಿರದ ಗೇರೆಮಾಲ ಬಳಿ ನಡೆದಿದೆ.
ಸತ್ಯಮಂಗಲಂಗೆ ತೆರಳುತ್ತಿದ್ದ ಬಸ್ ನ ಎದುರು ಏಕಾಏಕಿ ಪ್ರತ್ಯಕ್ಷಗೊಂಡ ಆನೆಯೊಂದು ಬಸ್ ನ್ನು ಹಿಮ್ಮೆಟ್ಟಿಸುತ್ತಾ ಬಂದು ಗಾಜನ್ನು ಒಡೆದು ಹಾಕಿದೆ.
ಆನೆ ದಾಳಿಯಿಂದ ಕಂಗೆಟ್ಟ ಪ್ರಯಾಣಿಕರು ಕಿರುಚಾಡಿದ್ದು ಬಳಿಕ ಆನೆ ಕಾಡಿನತ್ತ ತೆರಳಿದೆ. ಘಟನೆ ಬುಧವಾರ ನಡೆದಿದೆ ಎಂದು ತಿಳಿದುಬಂದಿದೆ.
ರಸ್ತೆಯಲ್ಲಿ ಅಡ್ಡ ನಿಲ್ಲುವ ಆನೆಗಳು ಇಲ್ಲಿನ ವಾಹನ ಚಾಲಕರಿಗೆ ಸವಾಲಾಗಿ ಪರಿಣಮಿಸಿದೆ. ಕಾಡು ಪ್ರಾಣಿಗಳ ಹಾವಳಿ ನಿಯಂತ್ರಣಕ್ಕೆ ಈ ಭಾಗಗಳಲ್ಲಿ ರಾಜ್ಯ ಸರ್ಕಾರ ಸರಿಯಾದ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವ ಒತ್ತಾಯಗಳು ಕೇಳಿ ಬಂದಿವೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw