ಬಸ್ ನಿಲ್ದಾಣದಲ್ಲಿಯೇ ಬಿಟ್ಟು ಬಂದಿದ್ದಕ್ಕೆ ಕೆಎಸ್ಸಾರ್ಟಿಸಿಗೆ ಬಿಸಿ ಮುಟ್ಟಿಸಿದ ಹಿರಿಯ ನಾಗರಿಕ!
ಬೆಂಗಳೂರು: ಹಿರಿಯ ನಾಯಕರಿಕರೊಬ್ಬರನ್ನು ನಿಗದಿತ ಬಸ್ ನಿಲ್ದಾಣದಿಂದ ಹತ್ತಿಸಿಕೊಳ್ಳದೆ ಬಿಟ್ಟು ಬಂದಿದ್ದಕ್ಕೆ 1 ಸಾವಿರ ರೂಪಾಯಿ ಪರಿಹಾರ ನೀಡುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(KSRTC)ಕ್ಕೆ ಗ್ರಾಹಕರ ನ್ಯಾಯಾಲಯ ಆದೇಶಿಸಿದೆ.
ಟಿಕೆಟ್ ಕಾಯ್ದಿರಿಸಿದರೂ ನನ್ನನ್ನು ಬಸ್ ನಿಲ್ದಾಣದಲ್ಲೇ ಬಿಟ್ಟು ಹೋಗಲಾಗಿದೆ ಎಂದು ಹಿರಿಯ ನಾಗರಿಕರೊಬ್ಬರು ಗ್ರಾಹಕರ ನ್ಯಾಯಾಲಯಕ್ಕೆ ದೂರು ನೀಡಿದ್ದರು. ಈ ದೂರಿನ ವಿಚಾರಣೆ ನಡೆಸಿದ ಗ್ರಾಹಕರ ನ್ಯಾಯಾಲಯ, ದೂರುದಾರರಿಗೆ ಆದ ಅನಾನುಕೂಲಕ್ಕೆ 1 ಸಾವಿರ ರೂಪಾಯಿ ಪರಿಹಾರ ಪಾವತಿಸುವಂತೆ ನಿಗಮಕ್ಕೆ ಆದೇಶ ನೀಡಿದೆ.
ದೂರುದಾರ ಎಸ್.ಸಂಗಮೇಶ್ವರನ್ ಅವರು ಬೆಂಗಳೂರಿನಿಂದ ತಮಿಳುನಾಡಿನ ತಿರುವಣ್ಣಾಮಲೈಗೆ ಹೋಗಿ ಬರಲು ಕೆಎಸ್ಸಾರ್ಟಿಸಿ ಐರಾವತ ಬಸ್ ಗೆ ಆನ್ ಲೈನ್ ನಲ್ಲಿ ಟಿಕೆಟ್ ಬುಕ್ ಮಾಡಿದ್ದರು. ಅದರಂತೆ 2019ರ ಅಕ್ಟೋಬರ್ 12ರಂದು ಬೆಂಗಳೂರಿನಿಂದ ಹೊರಟು ಮರುದಿನ ನಗರಕ್ಕೆ ಹಿಂದಿರುಗಬೇಕಾಗಿತ್ತು. ಗೊತ್ತುಪಡಿಸಿದ ಸಮಯಕ್ಕೆ ಬಸ್ ನಿಲ್ದಾಣಕ್ಕೆ ತಲುಪಿದರೂ ಬಸ್ ಬಂದಿರಲಿಲ್ಲ, ಗಂಟೆವರೆಗೆ ಕಾದರೂ ಬಸ್ ಬರಲಿಲ್ಲ. ಕಂಡೆಕ್ಟರ್ ಗೆ ಕರೆ ಮಾಡಿದಾಗ ಪಿಕಪ್ ಪಾಯಿಂಟ್ ಬದಲಾದ ಕಾರಣ ಬಸ್ ತಿರುವಣ್ಣಾಮಲೈ ನಿಲ್ದಾಣಕ್ಕೆ ಬಂದಿಲ್ಲ, ಬಸ್ ಬೆಂಗಳೂರಿಗೆ ಹೊರಟಾಗಿದೆ ಎಂದು ಉತ್ತರ ನೀಡಿದ್ದರು.
ಇನ್ನೂ ಸಂಗಮೇಶ್ವರನ್ ದೂರಿಗೆ ಕೆಎಸ್ಸಾರ್ಟಿಸಿ ಕೋರ್ಟ್ ಉತ್ತರಿಸಿದ್ದು, ಹುಣ್ಣಿಮ ಸಮಯದಲ್ಲಿ ಜನಸಂದಣಿ ನಿಯಂತ್ರಿಸಲು ಸ್ಥಳೀಯ ಪೊಲೀಸರು ಬಸ್ ನಿಲ್ದಾಣವನ್ನು ತಾತ್ಕಾಲಿಕವಾಗಿ ಹೊರ ವಲಯಕ್ಕೆ ಸ್ಥಳಾಂತರಿಸಿದ್ದರು. ಈ ಬಗ್ಗೆ ದೂರುದಾರರಿಗೆ ಎಸ್ ಎಂಎಸ್ ಕೂಡ ಕಳುಹಿಸಲಾಗಿತ್ತು. ಉಳಿದೆಲ್ಲ 23 ಪ್ರಯಾಣಿಕರು ಬಸ್ ಹತ್ತಿದ್ದರು. ದೂರುದಾರರು ಬಂದಿಲ್ಲ. ಇದು ಅವರದ್ದೇ ತಪ್ಪು ಎಂದು ವಾದಿಸಿತು. ಆದರೆ ಇದನ್ನು ಒಪ್ಪದ ನ್ಯಾಯಾಲಯ, ಹಿರಿಯ ನಾಗರಿಕರೊಬ್ಬರು ತೊಂದರೆ ಅನುಭವಿಸಿದ್ದಕ್ಕೆ 1 ಸಾವಿರ ರೂ. ಪರಿಹಾರವನ್ನು ಒಂದು ತಿಂಗಳಲ್ಲಿ ಪಾವತಿಸಬೇಕು ಎಂದು ನಿಗಮಕ್ಕೆ ಆದೇಶಿಸಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BRIYGgDbk8oI4UQjEMqwIG
ಇನ್ನಷ್ಟು ಸುದ್ದಿಗಳು
ಇಂದು ಪುನೀತ್ ನಮನ: ಸ್ಟಾರ್ ನಟರು ಭಾಗಿಯಾಗುವ ಸಾಧ್ಯತೆ | ಪಾಸ್ ಇದ್ದವರಿಗೆ ಮಾತ್ರ ಎಂಟ್ರಿ!
ಕಂಗನಾ ಹೇಳಿದ್ದನ್ನು ಮುಸ್ಲಿಮ್ ವ್ಯಕ್ತಿ ಹೇಳಿದ್ದರೆ, ಮೊಣಕಾಲಿಗೆ ಗುಂಡಿಟ್ಟು ಜೈಲಿಗಟ್ಟಲಾಗುತ್ತಿತ್ತು | ಓವೈಸಿ
ಸತ್ಯದಪ್ಪೆ ಬೊಲ್ಲೆಯ ನೀರ ಮದುವೆ: ತುಳುನಾಡಿನ ಅವಳಿ ವೀರರು ಕಾನದ-ಕಟದರು | ಸಂಚಿಕೆ: 06
ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಕಾರು: ದಂಪತಿಯ ದಾರುಣ ಸಾವು
ಸಿನಿಮಾ ಮಂದಿರದ ಹೊರಗಡೆ ಅಭಿಮಾನಿಗಳಿಗೆ ಅನ್ನ ಸಂತರ್ಪಣೆ ನಡೆಸಿದ ಶಿವರಾಜ್ ಕುಮಾರ್