ಬಸ್ ನಿಲ್ದಾಣದಲ್ಲಿಯೇ ಅಪ್ಪಿಕೊಂಡು ಪರಸ್ಪರ ಮುತ್ತಿಟ್ಟ ಪ್ರೇಮಿಗಳು ! | ಮಂಡ್ಯದ ಬಳಿಕ ಮತ್ತೊಂದು ಬಸ್ ನಿಲ್ದಾಣದಲ್ಲಿ ಮುತ್ತಿನ ಮಳೆ! - Mahanayaka

ಬಸ್ ನಿಲ್ದಾಣದಲ್ಲಿಯೇ ಅಪ್ಪಿಕೊಂಡು ಪರಸ್ಪರ ಮುತ್ತಿಟ್ಟ ಪ್ರೇಮಿಗಳು ! | ಮಂಡ್ಯದ ಬಳಿಕ ಮತ್ತೊಂದು ಬಸ್ ನಿಲ್ದಾಣದಲ್ಲಿ ಮುತ್ತಿನ ಮಳೆ!

25/02/2021

ರಾಯಚೂರು: ಇತ್ತೀಚೆಗಷ್ಟೇ ಮಂಡ್ಯದ ಕೆ.ಆರ್.ಪೇಟೆ ಪಟ್ಟಣದ ಬಸ್ ನಿಲ್ದಾಣದಲ್ಲಿ ಪ್ರೇಮಿಗಳಿಬ್ಬರು ಸಾರ್ವಜನಿಕ ಪ್ರದೇಶಎಂದೂ ನೋಡದೇ ಪರಸ್ಪರ ಅಪ್ಪಿಕೊಂಡು ಮುತ್ತಿನ್ನ ಮಳೆಗರೆದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದೀಗ ಇಂತಹದ್ದೇ ಘಟನೆಯೊಂದು  ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ನಡೆದಿದೆ.


Provided by

ಯುವ ಜೋಡಿಯೊಂದು ಬಸ್ ನಿಲ್ದಾಣದಲ್ಲಿ ಸಿನಿಮಾ ಮಾದರಿಯಲ್ಲಿಯೇ  ಪರಸ್ಪರ ಅಪ್ಪಿಕೊಂಡು ಚುಂಬಿಸಿದ್ದು, ಈ ವೇಳೆ ಸ್ಥಳದಲ್ಲಿದ್ದ ಸಾರ್ವಜನಿಕರು ಬಿಟ್ಟಿ ಶೋ ಎಂಬಂತೆ, ಫೋಟೋ, ವಿಡಿಯೋ ತೆಗೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ.

ಸಿಂಧನೂರು ಪಟ್ಟಣದ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ತಮ್ಮ ಸುತ್ತ ಮುತ್ತ ಜನರಿದ್ದಾರೆ ಎನ್ನುವ ಪರಿವೇ ಇಲ್ಲದೇ ಪ್ರೇಮಿಗಳಿಬ್ಬರು ಪರಸ್ಪರ ಚುಂಬಿಸಿದ್ದಾರೆ. ಬಸ್ ನಿಲ್ದಾಣದಲ್ಲಿದ್ದ ಕೆಲವರು ಜೋಡಿಗಳನ್ನುಕೆಂಗಣ್ಣಿನಿಂದ ನೋಡಿದರೆ, ಇನ್ನಿತರರು ಬಿಟ್ಟಿ ಮಜಾ ಎಂಬಂತೆ ನೋಡುತ್ತಾ ನಿಂತ ಘಟನೆ ನಡೆದಿದೆ.

ಇತ್ತೀಚಿನ ಸುದ್ದಿ