ಬಸ್ ನಿಲ್ದಾಣದಲ್ಲಿ ನಡೆಯಿತು ಬರ್ಬರ ಹತ್ಯೆ | ಹೆದರಿ ಚೆಲ್ಲಾಪಿಲ್ಲಿಯಾಗಿ ಓಡಿದ ಸಾರ್ವಜನಿಕರು!
ಕಲಬುರ್ಗಿ: ಕಾನ್ ಸ್ಟೇಬಲ್ ವೋರ್ವರ ಪುತ್ರನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕಲಬುರ್ಗಿ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಗುರುವಾರ ನಡೆದಿದ್ದು, ಘಟನೆಯಿಂದ ಬೆಚ್ಚಿ ಬಿದ್ದ ಜನರು ದಿಕ್ಕಾಪಾಲಾಗಿ ಓಡುತ್ತಿರುವ ದೃಶ್ಯ ಕಂಡು ಬಂದಿದೆ.
ವಿದ್ಯಾಸಾಗರ ನಿವಾಸಿ 27 ವರ್ಷ ವಯಸ್ಸಿನ ಅಭಿಷೇಕ ಚಂದ್ರಕಾಂತ ಹತ್ಯೆಗೀಡಾದ ಯುವಕ ಎಂದು ಗುರುತಿಸಲಾಗಿದೆ. ಗುರುವಾರ ಬೆಳಗ್ಗೆ ಮನೆಯಿಂದ ಜಿಮ್ ಗೆ ಹೊರಟಿದ್ದ ಚಂದ್ರಕಾಂತ್ ನನ್ನು ದುಷ್ಕರ್ಮಿಗಳ ತಂಡ ಅಟ್ಟಾಡಿಸಿಕೊಂಡು ಬಂದಿದೆ ಎನ್ನಲಾಗಿದೆ.
ದುಷ್ಕರ್ಮಿಗಳಿಂದ ತಪ್ಪಿಸಿಕೊಳ್ಳಲು ಬೇರೆ ದಾರಿ ಕಾಣದೇ ಅಭಿಷೇಕ್ ತನ್ನ ಬೈಕ್ ನ್ನು ಬಸ್ ನಿಲ್ದಾಣದ ಬಳಿ ನಿಲ್ಲಿಸಿ ಅಲ್ಲಿಂದ ತಪ್ಪಿಸಿಕೊಂಡು ಹೋಗಲು ಯತ್ನಿಸಿದ್ದು, ಜನರ ನಡುವೆ ನುಗ್ಗಿದರೆ ಸಹಾಯ ಸಿಗಬಹುದು ಎಂದು ಅಂದು ಕೊಂಡಿದ್ದಾನೆ. ಆದರೆ, ದುಷ್ಕರ್ಮಿಗಳು ಜನರ ನಡುವೆ ಸೇರಿಕೊಂಡು ಬಂದು ಅಭಿಷೇಕ್ ನ ಕತ್ತು ಕೊಯ್ದು ಹತ್ಯೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾರೆ. ಕಣ್ಣೆದುರೇ ಯುವಕನ ಹತ್ಯೆಯನ್ನು ನೋಡಿ ಬೆಚ್ಚಿ ಬಿದ್ದ ಪ್ರಯಾಣಿಕರು ಹಾಗೂ ವ್ಯಾಪಾರಿಗಳು ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ ಎಂದು ವರದಿಯಾಗಿದೆ.
ಕೊಲೆಗೆ ಸ್ಪಷ್ಟ ಕಾರಣಗಳೇನು ಎನ್ನುವುದು ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಎಸಿಪಿ ಅಂಶಕುಮಾರ್, ಇನ್ ಸ್ಪೆಕ್ಟರ್ ಪಂಡಿತ್ ಸಗರ ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಅಶೋಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka