ವಾಂತಿ ಮಾಡಲು ಬಸ್ ನಿಂದ ಹೊರಗೆ ಇಣುಕಿದ ಬಾಲಕಿಯ ತಲೆಯೇ ತುಂಡು
ಭೋಪಾಲ್: ಯಾವಾಗಲೂ ಬಸ್ ನಲ್ಲಿ ಚಾಲಕನ ಬದಿಯಲ್ಲಿರುವ ಸೈಡ್ ಸೀಟ್ ನಲ್ಲಿ ಕುಳಿತು ತಲೆ ಹೊರಗೆ ಹಾಕುವವರು ಈ ಸುದ್ದಿಯನ್ನು ಓದಲೇ ಬೇಕಿದೆ. ಸಾಮಾನ್ಯವಾಗಿ ಉಗುಳಲು, ಬಸ್ ನಲ್ಲಿ ವಾಂತಿ ಬಂದಾಗ ಪ್ರಯಾಣಿಕರು ಬಸ್ ನ ಕಿಟಕಿ ಮೂಲಕ ತಲೆ ಹೊರ ಹಾಕುತ್ತಾರೆ. ಆದರೆ ಇದರಿಂದ ಪ್ರಾಣವೇ ಹೋಗುವ ಅಪಾಯ ಸಂಭವಿಸುತ್ತದೆ.
ಮಧ್ಯಪ್ರದೇಶದ ಖಾಂದ್ವಾ ಪ್ರದೇಶದಲ್ಲಿ ನಡೆದ ಘಟನೆಯೊಂದರಲ್ಲಿ, ಬಾಲಕಿಯೋರ್ವಳು ವಾಂತಿ ಮಾಡಲೆಂದು ಬಸ್ ನಿಂದ ತಲೆ ಹೊರಗೆ ಹಾಕಿದ್ದು, ಈ ವೇಳೆ ಮುಂದಿನಿಂದ ಬಂದ ಟ್ರಕ್ ವೊಂದು ಬಾಲಕಿಯ ತಲೆಗೆ ಅಪ್ಪಳಿಸಿದ್ದು, ತಲೆಯನ್ನೇ ಕತ್ತರಿಸಿ ಹಾಕಿದೆ.
ರೊಸಿಯಾ ಫತಾ ಗ್ರಾಮದಲ್ಲಿ ತಮನ್ನಾ ಎಂಬ ಬಾಲಕಿಯು ಬರ್ವಾಗೆ ಮದುವೆ ಸಮಾರಂಭಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಕುಟುಂಬಸ್ಥರ ಕಣ್ಣೆದುರೇ ಈ ಘಟನೆ ನಡೆದಿದೆ.
ಇನ್ನೂ ಬಾಲಕಿಯ ತಲೆಗೆ ಅಪ್ಪಳಿಸಿದ ಬಳಿಕ ಟ್ರಕ್ ಅಲ್ಲಿ ನಿಲ್ಲದೇ ಸ್ಥಳದಿಂದ ಪರಾರಿಯಾಗಿದೆ. ಸದ್ಯ ಘಟನೆಯ ಬಗ್ಗೆ ಮಾಹಿತಿ ಸಂಗ್ರಹಿಸಿರುವ ಪೊಲೀಸರು ಟ್ರಕ್ ಚಾಲಕನ ಪತ್ತೆ ಮುಂದಾಗಿದೆ.
ಕಾರು ಮಗುಚಿ ಬಿದ್ದು, ಪತಿ ಮತ್ತು ಮೂವರು ಮಕ್ಕಳ ಕಣ್ಣೆದುರೇ ಸಾವಿಗೀಡಾದ ಮಹಿಳೆ!