ಅಪ್ರಾಪ್ತ ಬಾಲಕಿಗೆ ನಂಬರ್ ಕೊಟ್ಟ ಕಂಡೆಕ್ಟರ್ ಗೆ ಹಿಗ್ಗಾಮುಗ್ಗಾ ಥಳಿಸಿದ ಬಾಲಕಿಯ ತಾಯಿ: ವಿಡಿಯೋ ವೈರಲ್ - Mahanayaka
8:21 PM Wednesday 11 - December 2024

ಅಪ್ರಾಪ್ತ ಬಾಲಕಿಗೆ ನಂಬರ್ ಕೊಟ್ಟ ಕಂಡೆಕ್ಟರ್ ಗೆ ಹಿಗ್ಗಾಮುಗ್ಗಾ ಥಳಿಸಿದ ಬಾಲಕಿಯ ತಾಯಿ: ವಿಡಿಯೋ ವೈರಲ್

bus conductor
24/04/2022

ಮಂಗಳೂರು: ಕಂಡೆಕ್ಟರ್ ಒಬ್ಬ ಅಪ್ರಾಪ್ತ ವಯಸ್ಸಿನ ಬಾಲಕಿಗೆ ತನ್ನ ಮೊಬೈಲ್ ನಂಬರ್ ನೀಡಿದ ಘಟನೆ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಬಾಲಕಿಯ ತಾಯಿ ಬಸ್ ನಿರ್ವಾಹಕನಿಗೆ ಹಿಗ್ಗಾಮುಗ್ಗಾ ಥಳಿಸಿರುವ ವಿಡಿಯೋ ವೈರಲ್ ಆಗಿದೆ.

ಮಂಗಳೂರಿನಲ್ಲಿ ಈ ಘಟನೆ ನಡೆದಿದ್ದು, ಅಪ್ರಾಪ್ತ ವಯಸ್ಸಿನ ಬಾಲಕಿಗೆ ಮೊಬೈಲ್ ನಂಬರ್ ನೀಡಿದ್ದಲ್ಲದೇ ಬಾಲಕಿಗೆ ಕರೆ ಮಾಡಿದ್ದಾನೆ ಎನ್ನಲಾಗಿದ್ದು, ಈ ವಿಚಾರ ಬಾಲಕಿಯ ತಾಯಿ ಬಸ್ ಕಂಡೆಕ್ಟರ್ ನ್ನು ಭೇಟಿಯಾಗಿ ಹಿಗ್ಗಾಮುಗ್ಗಾ ಥಳಿಸಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಒಂದು ದಿನ ಬಾಲಕಿ ಬಸ್ ನಲ್ಲಿ ಪ್ರಯಾಣಿಸಿದಾಗಲೇ ಈ ಕಂಡೆಕ್ಟರ್ ಬಾಲಕಿಗೆ ನಂಬರ್ ನೀಡಿದ್ದಾನೆ ಎನ್ನಲಾಗಿದೆ. ಟಿಕೆಟ್ ನಲ್ಲಿ ನಂಬರ್ ಬರೆದು ಬಸ್ಸಿನಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಈತ ನೀಡುತ್ತಿದ್ದ ಎಂದು ಕೆಲವರು ಆರೋಪಿಸುತ್ತಿರುವುದು ವಿಡಿಯೋದಲ್ಲಿ ಕೇಳಿ ಬಂದಿದೆ.

ಮಂಗಳೂರಿನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಸಿಟಿ ಬಸ್ ಗಳು ಕಾರ್ಯ ನಿರ್ವಹಿಸುತ್ತಿವೆ. ಸಾಕಷ್ಟು ಸಂಖ್ಯೆಯಲ್ಲಿ ಮಾನವೀಯತೆ ಹೊಂದಿರುವ ಕಂಡೆಕ್ಟರ್ ಗಳಿದ್ದಾರೆ. ಆದರೆ ಕೆಲವೊಬ್ಬರು ಇಂತಹ ಕೃತ್ಯಗಳನ್ನು ಮಾಡುತ್ತಿದ್ದು, ಕಂಡೆಕ್ಟರ್ ಗಳನ್ನು ಸಾರ್ವಜನಿಕರು ಅನುಮಾನದಿಂದ ನೋಡುವಂತಹ ಪರಿಸ್ಥಿತಿಗಳು ನಿರ್ಮಾಣವಾಗ್ತಿವೆ.

ಇನ್ನೂ ಈ ವಿಡಿಯೋದಲ್ಲಿ ಕಂಡು ಬಂದಿರುವಂತೆ, ಇತರ ಬಸ್ ಗಳ ಸಿಬ್ಬಂದಿ ಕೂಡ ಕಂಡೆಕ್ಟರ್ ನ್ನು ತೀವ್ರವಾಗಿ ತರಾಟೆಗೆತ್ತಿಕೊಳ್ಳುತ್ತಿರುವುದು ಕಂಡು ಬಂದಿದೆ. ಎಲ್ಲಿಂದಲೋ ಬಂದವರಿಗೆಲ್ಲ ಇಲ್ಲಿ ಕೆಲಸ ಕೊಡುತ್ತಾರೆ. ಅವರು ಇಲ್ಲಿ ಬಂದು ಏನೇನೋ ಮಾಡಿ ಎಲ್ಲರಿಗೂ ಕೆಟ್ಟ ಹೆಸರು ತರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿರುವುದು ಕೇಳಿ ಬಂದಿದೆ.

ಈ ಕಂಡೆಕ್ಟರ್ ಈ ಹಿಂದಿಯೂ ಇಂತಹ ದುರ್ವರ್ತನೆ ತೋರಿದ್ದ ಎಂದು ವಿಡಿಯೋದಲ್ಲಿ ಆರೋಪಿಸುತ್ತಿರುವುದು ಕೇಳಿ ಬಂದಿದೆ. ಘಟನೆಯ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿರುವ ಬಗ್ಗೆ ಮಾಹಿತಿ ದೊರೆತಿಲ್ಲ. ಮಹಿಳೆಯರಿಗೆ ಬಸ್ಸಿನಲ್ಲಿ ಕಿರುಕುಳ ನೀಡುತ್ತಿರುವ ಘಟನೆಯನ್ನು ಪೊಲೀಸರು ಹಗುರವಾಗಿ ಪರಿಗಣಿಸಬಾರದು. ತಕ್ಷಣವೇ ಪೊಲೀಸರು ಸ್ವಯಂ ಪ್ರೇರಿತರಾಗಿ ಘಟನೆಯ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕು. ಹಾಗೆಯೇ ಸಿಟಿ ಬಸ್ಸಿನಲ್ಲಿ ಮಹಿಳೆಯರು ಸುರಕ್ಷಿತವಾಗಿ ಪ್ರಯಾಣಿಸುವ ವಾತಾವರಣ ಸೃಷ್ಟಿಸ ಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1duNIQRfXnJcfQKWPzNqD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಪರೀಕ್ಷೆಗೆ ಓದುತ್ತಿದ್ದ ವೇಳೆ ಟೆರೆಸ್ ನಿಂದ ಬಿದ್ದು ವಿದ್ಯಾರ್ಥಿ ಸಾವು

ಇನ್ನೆಷ್ಟು ದಿನ ಇರಲಿದೆ ಅಕಾಲಿಕ ಮಳೆ? | ಹವಾಮಾನ ಇಲಾಖೆ ಹೇಳಿದ್ದೇನು?

ಒಂದೇ ಮನೆಯ ಐವರನ್ನು ಹತ್ಯೆ ಮಾಡಿ ಮನೆಗೆ ಬೆಂಕಿ ಇಟ್ಟ ಪಾಪಿಗಳು!

ಯಾವ ಅಪರಾಧಕ್ಕಾಗಿ ಬೆದರಿಕೆ ಹಾಕುತ್ತಿದ್ದೀರಿ?: ಶಾಸಕ ರಘುಪತಿ ಭಟ್ ಗೆ ಹಿಜಾಬ್ ಪರ ವಿದ್ಯಾರ್ಥಿನಿ ಪ್ರಶ್ನೆ

ಜಾಲಿ ರೈಡ್:  ಬೈಕ್ ಸಹಿತ ಯುವಕನನ್ನು ವಶಕ್ಕೆ ಪಡೆದ ಪೊಲೀಸರು!

ಇತ್ತೀಚಿನ ಸುದ್ದಿ