ಬಸ್ ರಿಪೇರಿ ಮಾಡುತ್ತಿದ್ದ ವೇಳೆ ಮೆಕಾನಿಕ್ ನ ದಾರುಣ ಸಾವು
ಬಳ್ಳಾರಿ: ಬಸ್ ಕೆಳಗೆ ತುಂಡಾಗಿದ್ದ ಬುಷ್ ರಾಡ್ ಸರಿಪಡಿಸುತ್ತಿದ್ದ ವೇಳೆ ನಡೆದ ಅವಘಡದಲ್ಲಿ KSTRC ಮೆಕಾನಿಕ್ ವೊಬ್ಬರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಇಲ್ಲಿನ ಕುರುಗೋಡು KSTRC ಡಿಪೋದಲ್ಲಿ ನಡೆದಿದೆ.
ಟಿ ಮಂಜುನಾಥ್ ಮೃತಪಟ್ಟ ಮೆಕಾನಿಕ್ ಎಂದು ಗುರುತಿಸಲಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ರ್ಯಾಂಪ್ ವ್ಯವಸ್ಥೆ ಕಲ್ಪಿಸದೇ ಮೆಕಾನಿಕ್ ಗೆ ರಿಪೇರಿ ಮಾಡಲು ಹೇಳಿದ್ದರಿಂದ ಈ ದುರಂತ ಸಂಭವಿಸಿದೆ ಎನ್ನಲಾಗುತ್ತಿದೆ.
ಬಸ್ ನ ಬುಷ್ ರಾಡ್ ಸರಿಪಡಿಸುತ್ತಿದ್ದ ವೇಳೆ ರಾಡ್ ತುಂಡಾಗಿ ಕಾರ್ಮಿಕನ ಗಂಟಲಿಗೆ ಸಿಲುಕಿದ್ದು, ಪರಿಣಾಮವಾಗಿ ಅವರು ಸ್ಥಳದಲ್ಲೇ ಆತ ಸಾವನ್ನಪ್ಪಿದ್ದಾರೆ.
ಇನ್ನೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಘಟನೆ ಸಂಭವಿಸಿದೆ ಎಂದು ಮೃತರ ಪೋಷಕರು ಆರೋಪಿಸಿದ್ದಾರೆ. ಘಟನೆ ಸಂಬಂಧ ಕುರುಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಏಕಲವ್ಯಪ್ರಶಸ್ತಿ ಪುರಸ್ಕೃತ, ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ ಉದಯ ಚೌಟ ಇನ್ನಿಲ್ಲ
ಬಾತ್ ರೂಮ್ ನಲ್ಲಿ ಪತ್ತೆಯಾಯ್ತು 60 ಹಾವುಗಳು!
ಬೆಳ್ಳಂಬೆಳಗ್ಗೆ ಭೀಕರ ಅಪಘಾತ: 7 ಮಂದಿ ಸ್ಥಳದಲ್ಲೇ ಸಾವು
ಪಠ್ಯ ಪುಸ್ತಕದಿಂದ ನಾರಾಯಣ ಗುರು ಹೊರಗೆ: “ಬಿಲ್ಲವ ಸಚಿವರು ರಾಜೀನಾಮೆ ನೀಡಲಿ”