ಜೆಸಿಐ ಆಲೂಮ್ನಿ ಕ್ಲಬ್ ವಲಯಾಧ್ಯಕ್ಷರಾಗಿ ಉದ್ಯಮಿ ಯೋಗೇಶ್ ಹೆಚ್.ಕೆ. ಅಧಿಕಾರ ಸ್ವೀಕಾರ
ಚಿಕ್ಕಮಗಳೂರು: ಮೂಡಿಗೆರೆಯ ಉದ್ಯಮಿ ಯೋಗೇಶ್ ಹೆಚ್.ಕೆ. ಅವರು ಜೆಸಿಐ ಆಲೂಮ್ನಿ ಕ್ಲಬ್ ವಲಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ಮೈಸೂರಿನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಕಾರ್ಯಕ್ರಮದ ಸಾಂಸ್ಕೃತಿಕ ಸಂಗಮದಲ್ಲಿ ಜೆಸಿಐ ಫ್ಯಾಮಿಲಿ ಹೆಡ್ ರವಿಶಂಕರ್ ಅವರ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಈ ವಿಶಿಷ್ಟ ಕ್ಷಣವು ಯೋಗೇಶ್ ಹೆಚ್.ಕೆ. ಅವರ ಶಾಂತ ಸ್ವಭಾವ ಮತ್ತು ನಾಯಕತ್ವ ಕೌಶಲಗಳಿಂದ ವಲಯಕ್ಕೆ ಹೊಸ ದಿಕ್ಕನ್ನು ತರುತ್ತಾರೆ ಎಂಬ ನಿರೀಕ್ಷೆ ಹುಟ್ಟಿಸಿದೆ. ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ, ಅವರು ಹೊಸ ಯೋಜನೆಗಳು ಮತ್ತು ಸೇವಾ ಕಾರ್ಯಕ್ರಮಗಳನ್ನು ವ್ಯಾಪಕವಾಗಿ ಜಾರಿ ಮಾಡಲು ಸಜ್ಜುಗೊಂಡಿದ್ದಾರೆ. ಯೋಗೇಶ್ ರವರು ಈ ಹಿಂದೆ, 2019ರಲ್ಲಿ ಜೆಸಿಐ ಮೂಡಿಗೆರೆಯ ಅಧ್ಯಕ್ಷರಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದರು. ಅವರ ನೇತೃತ್ವದಲ್ಲಿ ಸಂಘವು ಹಲವು ಉಲ್ಲೇಖನೀಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಂಘಟನೆಯ ಬೆಳವಣಿಗೆಗೆ ಪ್ರಮುಖ ಪಾತ್ರವಹಿಸಿತ್ತು.
ಮೈಸೂರಿನ ನಾರ್ತ್ ಅವೆನ್ಯೂ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೆಸಿಐ ಆಲೂಮ್ನಿ ಕ್ಲಬ್ ನ್ಯಾಷನಲ್ ಚೈರ್ಮನ್ ಅನಬಘಾನ್, ನ್ಯಾಷನಲ್ ವೈಸ್ ಚೈರ್ಮನ್ ಕುಮಾರ್ ಕೆ.ಎಸ್., ಇಂಟರ್ ನ್ಯಾಷನಲ್ ಕಮಿಷನ್ ಚೈರ್ಮನ್ ಭರತ್ ಎನ್. ಆಚಾರ್ಯ, ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ ದೇವರಾಜ್ ಟಿ.ಎನ್., ವಲಯಾಧ್ಯಕ್ಷ-ಚುನಾಯಿತ ವಿಜಯ್ ಕುಮಾರ್, ಪೂರ್ವ ನ್ಯಾಷನಲ್ ವೈಸ್ ಚೈರ್ಮನ್ ನರೇನ್ ಕಾರಿಯಪ್ಪ ಹಾಗೂ ಆಶಾ ಜೈನ್ ಭಾಗವಹಿಸಿದ್ದರು.
ಚೈರ್ಮನ್ ರಂಗನಾಥ್ ಅವರು ನೂತನ ಅಧ್ಯಕ್ಷ ಯೋಗೇಶ್ ಹೆಚ್.ಕೆ. ಅವರಿಗೆ ಪ್ರಮಾಣವಚನ ಬೋಧಿಸಿದರು. ಈ ಕಾರ್ಯಕ್ರಮದಲ್ಲಿ ದೇಶದ ವಿಭಿನ್ನ ಭಾಗಗಳಿಂದ 500 ಕ್ಕೂ ಹೆಚ್ಚು ಆಲೂಮ್ನಿ ಕ್ಲಬ್ ಸದಸ್ಯರು ಭಾಗವಹಿಸಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: