ಶೂ ಒಳಗೆ ಸೇರಿಕೊಂಡ ಬೃಹತ್ ಹಾವು: ಬುಡುಗುಟ್ಟುವ ಶಬ್ಧ ಕೇಳಿ ಬೆಚ್ಚಿ ಬಿದ್ದ ಮನೆ ಮಾಲಿಕ
ಮೈಸೂರು: ಮನೆಯ ಹೊರಗೆ ಇಟ್ಟಿದ್ದ ಶೂನಲ್ಲಿ ಹಾವು ಸೇರಿಕೊಂಡ ಘಟನೆ ಮೈಸೂರಿನ ಗೋಕುಲಂ ಬಡಾವಣೆಯಲ್ಲಿ ನಡೆದಿದ್ದು, ಹಾವನ್ನು ರಕ್ಷಿಸಿ ಕಾಡಿಗೆ ಬಿಡಲಾಗಿದೆ.
ಸತ್ಯನಾರಾಯಣ್ ಎಂಬವರ ಮನೆಯ ಹೊರಗಡೆ ಚಪ್ಪಲಿ ಸ್ಟ್ಯಾಂಡ್ ನಲ್ಲಿ ಇಟ್ಟಿದ್ದ ಶೂ ಒಳಗೆ ದೊಡ್ಡ ಗಾತ್ರದ ಹಾವು ಸೇರಿಕೊಂಡಿದೆ. ಬೆಳಗ್ಗೆ ಸತ್ಯನಾರಾಯಣ್ ಅವರು ಚಪ್ಪಲಿ ಹಾಕಲೆಂದು ಸ್ಟ್ಯಾಂಡ್ ಗೆ ಕೈ ಹಾಕಲು ಯತ್ನಿಸಿದಾಗ ಹಾವಿನ ಬುಸುಗುಟ್ಟುವಿಕೆ ಕೇಳಿ ಬೆಚ್ಚಿ ಬಿದ್ದಿದ್ದಾರೆ.
ತಕ್ಷಣವೇ ಉರಗ ತಜ್ಞ ಸ್ನೇಕ್ ಶ್ಯಾಮ್ ಅವರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದು, ಸ್ಥಳಕ್ಕೆ ಬಂದ ಶ್ಯಾಮ್ ಅವರು ಹಾವನ್ನು ರಕ್ಷಣ ಮಾಡಿ ಕಾಡಿಗೆ ಬಿಟ್ಟಿದ್ದಾರೆ.
ನಿರಂತರ ಮಳೆ ಹಾಗೂ ಚಳಿಯ ವಾತಾವರಣದಲ್ಲಿ ವಿಷ ಜಂತುಗಳು ಬೆಚ್ಚನೆಯ ಪ್ರದೇಶಗಳಿಗೆ ಸೇರಿಕೊಳ್ಳುತ್ತದೆ. ಯಾವುದೇ ಕಾಲದಲ್ಲಿ ಶೂ ಅಥವಾ ಶೂ ರೀತಿಯ ಚಪ್ಪಲಿಗಳನ್ನು ಧರಿಸುವ ಮೊದಲು ಸರಿಯಾಗಿ ಪರಿಶೀಲನೆ ನಡೆಸಿ ಧರಿಸಬೇಕು. ನಮ್ಮ ಆತುರ ಪ್ರಾಣಕ್ಕೆ ಕುತ್ತು ತರಬಹುದು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka