ಕೇಂದ್ರ ಸರ್ಕಾರದ ಇಲಾಖೆಯಲ್ಲಿ ಭರ್ಜರಿ 946 ಹುದ್ದೆಗಳ ಭರ್ತಿ : ಕೊನೆಯ ದಿನಾಂಕ ಯಾವಾಗ? - Mahanayaka
8:54 PM Thursday 26 - December 2024

ಕೇಂದ್ರ ಸರ್ಕಾರದ ಇಲಾಖೆಯಲ್ಲಿ ಭರ್ಜರಿ 946 ಹುದ್ದೆಗಳ ಭರ್ತಿ : ಕೊನೆಯ ದಿನಾಂಕ ಯಾವಾಗ?

c-dac recruitment
23/11/2024

C–DAC Recruitment 2024 – ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವಂತಹ “ಸೆಂಟರ್ ಫಾರ್ ಡೆವಲಪ್ಮೆಂಟ್ ಆಫ್ ಅಡ್ವಾನ್ಸ್ ಡ್ ಕಂಪ್ಯೂಟಿಂಗ್” (C-DAC) ನಲ್ಲಿ ಖಾಲಿ ಇರುವಂತಹ ವಿವಿಧ 946 ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.

ಸೈಬರ್ ಸೆಕ್ಯೂರಿಟಿ, ಕಂಟ್ರೋಲ್ ಹಾರ್ಡ್ವೇರ್, ಫರ್ಮ್ ವೇರ್ ಡೆವಲಪ್ಮೆಂಟ್, ಪೋಸ್ಟ್ ಕ್ವಾಂಟಮ್ ಕ್ರಿಪ್ಟೋಗ್ರಾಫಿ ಹಾಗೂ ವಿವಿಧ ವಿಭಾಗಗಳಲ್ಲಿ ಈ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.

ಏನೆಲ್ಲಾ ಅರ್ಹತೆ ಹೊಂದಿರಬೇಕು?

ಈ ನೇಮಕಾತಿಯ ಹುದ್ದೆಗಳಿಗಾಗಿ ಅರ್ಜಿ ಸಲ್ಲಿಸುವಂಥವರು ಆಯಾ ವಿಭಾಗಕ್ಕೆ ಸಂಬಂಧಿಸಿದ ವಿಷಯದಲ್ಲಿ ಇಂಜಿನಿಯರಿಂಗ್ ಪದವಿ ಅಥವಾ ಸ್ನಾತಕೋತ್ತರ ಪದವಿ ಮುಗಿಸಿರಬೇಕು. ಈ ಶೈಕ್ಷಣಿಕ ಅರ್ಹತೆಯಲ್ಲಿ ಅಭ್ಯರ್ಥಿಗಳು ಕನಿಷ್ಠ 60% ಅಂಕಗಳೊಂದಿಗೆ ಪಾಸಾಗಿರಬೇಕು.

ವಯೋಮಿತಿ ಅರ್ಹತೆ ನೋಡುವುದಾದರೆ ಅಭ್ಯರ್ಥಿಗಳು 35 ವರ್ಷದ ಒಳಗಿರಬೇಕು.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ — ಡಿಸೆಂಬರ್ 5, 2024.

ಅಭ್ಯರ್ಥಿಗಳನ್ನು ಹೇಗೆ ಆಯ್ಕೆ ಮಾಡಿಕೊಳ್ಳಲಾಗುವುದು?

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಸಂದರ್ಶನ ನಡೆಸಿ ನಂತರ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಅರ್ಜಿ ಸಲ್ಲಿಸುವ ಮತ್ತು  ಹೆಚ್ಚಿನ ವಿವರದ ಮಾಹಿತಿಗಾಗಿ ಈ ಕೆಳಗಿನ ಜಾಲತಾಣಕ್ಕೆ ಭೇಟಿ ನೀಡಿ: https://careers.cdac.in


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ