ಸುಗ್ಗಿ ಹಬ್ಬದಲ್ಲಿ ದೇವರ ಅಡ್ಡೆ ಹೊತ್ತು ಕುಣಿದ ಸಿ.ಟಿ.ರವಿ
ಚಿಕ್ಕಮಗಳೂರು: ಸುಗ್ಗಿ ಹಬ್ಬದಲ್ಲಿ ದೇವರ ಅಡ್ಡೆ ಹೊತ್ತು ಸಿ.ಟಿ.ರವಿ ಕುಣಿದಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸ್ವಗ್ರಾಮ ಚಿಕ್ಕಮಗಳೂರು ತಾಲೂಕಿನ ದೊಡ್ಡಮಾಗರವಹಳ್ಳಿಯ ಸುಗ್ಗಿ ಹಬ್ಬದಲ್ಲಿ ಸಿ.ಟಿ.ರವಿ ಅವರು ದೇವರ ಅಡ್ಡೆ ಹೊತ್ತು ಕುಣಿದರು. ಹಬ್ಬದ ಕೊನೆಯ ದಿನ ಸುಗ್ಗಿ ಹಬ್ಬದ ಆಚರಣೆ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ದೇವರ ಅಡ್ಡೆ ಹೊತ್ತು ಕೆಲ ಕಾಲ ಸಿ.ಟಿ.ರವಿ ಕುಣಿದು ಗಮನ ಸೆಳೆದರು.
12 ದಿನ ಅಚರಣೆಯ ಮೂಲಕ ನಡೆದ ದೊಡ್ಡಮಾಗರವಳ್ಳಿಯ ಸುಗ್ಗಿ ಹಬ್ಬ ನಡೆಯುತ್ತದೆ. ತಮ್ಮ ಹುಟ್ಟೂರಿನ ಸುಗ್ಗಿ ಹಬ್ಬದಲ್ಲಿ ಭಾಗವಹಿಸಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಜನರೊಂದಿಗೆ ಬೆರೆತರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw