ಹೈಕೋರ್ಟ್ ವಿರುದ್ಧ ಹೇಳಿಕೆ: ಸಿ.ಟಿ.ರವಿ, ಸದಾನಂದ ಗೌಡ ವಿರುದ್ಧ ದೂರು ದಾಖಲು - Mahanayaka

ಹೈಕೋರ್ಟ್ ವಿರುದ್ಧ ಹೇಳಿಕೆ: ಸಿ.ಟಿ.ರವಿ, ಸದಾನಂದ ಗೌಡ ವಿರುದ್ಧ ದೂರು ದಾಖಲು

ct ravi and sadananda gowda
14/05/2021

ಬೆಂಗಳೂರು: ಲಸಿಕೆ ಅಭಿಯಾನದಡಿಯಲ್ಲಿ ಹೈಕೋರ್ಟ್  ರಾಜ್ಯ ಸರ್ಕಾರವನ್ನು ತೀವ್ರವಾಗಿ ತರಾಟೆಗೆತ್ತಿಕೊಂಡಿತ್ತು. ಇದರ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹಾಗೂ ಕೇಂದ್ರ ಸಚಿವ ಸದಾನಂದ ಗೌಡ ಹೇಳಿಕೆ ನೀಡಿದ್ದು, ಇದೀಗ ವಿವಾದಕ್ಕೆ ಸಿಲುಕಿದ್ದಾರೆ.

ಹೈಕೋರ್ಟ್ ನ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಸಿ.ಟಿ.ರವಿ, ನ್ಯಾಯಾಧೀಶರು ಸರ್ವಜ್ಞರಲ್ಲ ಎಂದು ಹೇಳಿಕೆ ನೀಡಿದ್ದರು.  ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ಹೈಕೋರ್ಟ್ ತೀರ್ಪು ನೀಡಿದ ಕೂಡಲೇ ಲಸಿಕೆ ಉತ್ಪಾದನೆ ಇಲ್ಲದೇ ನಾವು ನೇಣು ಹಾಕಿಕೊಳ್ಳಬೇಕೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಇದೀಗ ಇವರಿಬ್ಬರ ವಿರುದ್ಧ ವಕೀಲ ಜಿ.ಆರ್. ಮೋಹನ್ ಸ್ವಯಂ ಪ್ರೇರಿತ ಕೇಸು ದಾಖಲಿಸಿಕೊಂಡು ತನಿಖೆ ನಡೆಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ನ್ಯಾಯಾಲಯದ ಹೇಳಿಕೆಯನ್ನು ಹಾಗೂ ನ್ಯಾಯಾಧೀಶರ ಬಗ್ಗೆ ಅವಹೇಳನಾಕಾರಿಯಾಗಿ ಮಾತನಾಡಲಾಗಿದೆ ಎಂದು ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಈ ದೂರು ದಾಖಲಾಗಿದೆ. ಇಬ್ಬರ ಹೇಳಿಕೆಗಳ ತುಣುಕುಗಳ ಸಹಿತ ದೂರು ನೀಡಲಾಗಿದೆ ಎಂದು ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ