ಕೇಕ್ ಅಂದು ಕೊಂಡು ಬೆರಣಿ ತಿಂದ | ರುಚಿ ಚೆನ್ನಾಗಿಲ್ಲ ಅಂತ ಕಮೆಂಟ್ ಮಾಡಿ ಕಾಮಿಡಿ ಪೀಸ್ ಆದ!
ಬೆಂಗಳೂರು: 12 ಕೇಕ್ ಗಳಿಗೆ ಬರಿ 199 ರೂಪಾಯಿ, ಅದೂ ಫ್ರೀ ಡೆಲಿವರಿ ಎಂಬ ವಿವರಣೆಗಳನ್ನು ವೆಬ್ ಸೈಟ್ ನೋಡಿದ ತಕ್ಷಣವೇ ಆತ ಕೇಕ್ ಆರ್ಡರ್ ಮಾಡಿದ. ಕೇಕ್ ಮನೆಗೆ ಬಂತು. ಕೇಕ್ ತಿಂದ ಬಳಿಕ ಆತ ಅದರ ಟೇಸ್ಟ್ ನೋಡಿ ಸಿಕ್ಕಪಟ್ಟೆ ಕೋಪಗೊಂಡಿದ್ದಾನೆ.
ಕೇಕ್ ನ ಟೇಸ್ಟ್ ಸ್ವಲ್ಪವೂ ಚೆನ್ನಾಗಿರಲಿಲ್ಲ ಇದರಿಂದ ಆಕ್ರೋಶಗೊಂಡ ಆತ ಆಕ್ರೋಶ ತಡೆದುಕೊಳ್ಳಲಾರದೇ ತಾನು ಆರ್ಡರ್ ಮಾಡಿ ಕೇಕ್ ನ ರುಚಿ ಚೆನ್ನಾಗಿಲ್ಲ, ಕೆಸರಿನಂತೆ ಇದೆ. ತುಂಬಾ ಕೆಟ್ಟದಾಗಿದೆ. ಇದನ್ನು ತಯಾರು ಮಾಡುವ ಸ್ಥಳದಲ್ಲಿ ಸ್ವಲ್ಪ ಹೈಜೀನಿಕರ್ ಮೆಂಟೇನ್ ಮಾಡಿ ಎಂದು ಬರೆದಿದ್ದಾನೆ.
ಈತ ವೆಬ್ ಸೈಟ್ ನಲ್ಲಿ ಕಮೆಂಟ್ ಹಾಕುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಈತ ಹಾಸ್ಯದ ವಸ್ತುವಾಗಿ ಬಿಟ್ಟಿದ್ದಾನೆ. ಈತನ ಕಮೆಂಟ್ ನ ಸ್ಟ್ರೀನ್ ಶಾಟ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲು ಆರಂಭವಾಗಿದೆ.
ಅಷ್ಟಕ್ಕೂ ಈ ವ್ಯಕ್ತಿ ಆರ್ಡರ್ ಮಾಡಿರುವುದು “ಕೌಡಂಗ್ ಕೇಕ್”. ಕೌಡಂಗ್ ಕೇಕ್ ಎಂದರೆ, ಸೆಗಣಿಯಿಂದ ಮಾಡಿದ ಕೇಕ್. ಹಳ್ಳಿಯಲ್ಲಿ ಈ ಕೇಕ್ ನ್ನು ಬೆರಣಿ ಅಂತ ಕರೆಯುತ್ತಾರೆ. ಈತ ಕೇವಲ ಕೇಕ್ ಅನ್ನೋ ಶಬ್ದವನ್ನು ಮಾತ್ರ ನೋಡಿ ಆರ್ಡರ್ ಮಾಡಿದ್ದಾನೆ. ಇದಲ್ಲದೇ ಈತನಿಗೆ ಬೆರಣಿ ಅಂದ್ರೆ ಏನು ಅನ್ನೋದು ಗೊತ್ತಿಲ್ಲ. ಹಾಗಾಗಿ ಸೆಗಣಿಯಿಂದ ತಯಾರಿಸಿದ ಬೆರಣೀ ಅಥವಾ ಕೌಡಂಗ್ ಕೇಕ್ ಬಂದ ಕೂಡಲೇ ಈತ ಅದನ್ನು ತಿಂದಿದ್ದಾನೆ. ರುಚಿ ಚೆನ್ನಾಗಿಲ್ಲ ಎಂದು ಆಕ್ರೋಶಗೊಂಡು ವೆಬ್ ಸೈಟ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾನೆ.