ಅಂಬಾನಿ-ಅದಾನಿ ವಸ್ತುಗಳ ಬಾಯ್ ಕಾಟ್ ಗೆ ಕರೆ - Mahanayaka
9:53 AM Wednesday 15 - January 2025

 ಅಂಬಾನಿ-ಅದಾನಿ ವಸ್ತುಗಳ ಬಾಯ್ ಕಾಟ್ ಗೆ ಕರೆ

10/12/2020

ಬೆಂಗಳೂರು: ನೂತನ ಕೃಷಿ ಕಾನೂನು ವಿರೋಧಿಸಿ ಐಕ್ಯ ಸಮಿತಿ ವಿನೂತನ ಪ್ರತಿಭಟನೆ ಆರಂಭಿಸಿದ್ದು, ರೈತರ ಪರವಾಗಿ ನಿಂತು, ಜಿಯೋ ಸಿಮ್ ಮೊಬೈಲ್ ಪೋರ್ಟ್ ಮಾಡಿ ವಿದ್ಯಾರ್ಥಿಗಳು ಹೊಸ ಕ್ರಾಂತಿಗೆ ಮುಂದಾಗಿದ್ದಾರೆ

ಅಂಬಾನಿ, ಅದಾನಿ ಕಂಪೆನಿಯ ವಸ್ತುಗಳನ್ನು ಬಾಯ್ ಕಾಟ್ ಮಾಡಲು ವಿದ್ಯಾರ್ಥಿಗಳು ತೀರ್ಮಾನಿಸಿದ್ದು, ರಿಲಯನ್ಸ್ ಜಿಯೋ ಕಂಪೆನಿಯ ಮೊಬೈಲ್ ನಂಬರ್ ಗಳನ್ನು  ಪೋರ್ಟ್ ಮಾಡಲು ಕರೆ ನೀಡಲಾಗಿದೆ.


ADS

ಅಂಬಾನಿ ಅದಾನಿ ಮಾಲಕತ್ವದ ವಸ್ತುಗಳನ್ನು ನಾವು  ಬಳಸುವುದಿಲ್ಲ ಎಂದು ಪ್ರತಿಭಟನೆಯ ವೇಳೆ ವಿದ್ಯಾರ್ಥಿಗಳು ಪ್ರತಿಜ್ಞೆ ಸ್ವೀಕರಿಸಿದರು. ಸರ್ಕಾರಿ ಸ್ವಾಮ್ಯದ ಒಂದೊಂದೇ ಸಂಸ್ಥೆಗಳನ್ನು ಅಂಬಾನಿ ಅದಾನಿಗೆ ಪರೋಕ್ಷವಾಗಿ ಮಾರಲಾಗುತ್ತಿದೆ ಎಂಬ ಬಗ್ಗೆ ದೇಶದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಈ ನಡುವೆ ರೈತ ಚಳುವಳಿಗಾರರು ಕೂಡ ಅಂಬಾನಿ ಅದಾನಿ ಮಾಲಕತ್ವಕ್ಕೆ ಇಡೀ ದೇಶವನ್ನು ನೂಕುತ್ತಿರುವ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇತ್ತೀಚಿನ ಸುದ್ದಿ