ಸೈಂಟ್ ಮೇರಿಸ್ ದ್ವೀಪದಲ್ಲಿ ಕ್ಯಾಮರಾ ಬಳಕೆಗೆ ನಿರ್ಬಂಧ ಇಲ್ಲ: ಪೌರಾಯುಕ್ತ
ಉಡುಪಿ: ಮಲ್ಪೆ ಅಭಿವೃದ್ಧಿ ಸಮಿತಿಯಿಂದ 2020ರ ಸಾಲಿನಲ್ಲಿ ಸೀವಾಕ್ ಪ್ರದೇಶ ಮತ್ತು ಸೈಂಟ್‌ಮೆರೀಸ್ ದ್ವೀಪ ಪ್ರದೇಶದ ನಿರ್ವಹಣೆ ಕುರಿತು ಕರೆಯಲಾದ ಟೆಂಡರಿನಲ್ಲಿ ದ್ವೀಪದಲ್ಲಿ ಕೈಗೊಳ್ಳುವ ಯಾವುದೇ ರೀತಿಯ ಚಿತ್ರೀಕರಣಕ್ಕೆ ಉಪಯೋಗಿಸುವಂತಹ ಡಿ.ಎಸ್.ಎಲ್.ಆರ್ ಕ್ಯಾಮರಾಗಳಿಗೆ ಶುಲ್ಕ ವಿಧಿಸಿ ನಿರ್ವಹಣಾದಾರರಿಗೆ ಆದಾಯಗಳಿಸುವ ಬಗ್ಗೆ ಅವಕಾಶವಿರುತ್ತದೆ ಹಾಗೂ ಇತರೆ ರೀತಿಯ ಕ್ಯಾಮರಗಳಾದ ಸೋನಿ ಹ್ಯಾಂಡಿ ಕ್ಯಾಮ್, ಕ್ಯಾನೋನ್ ಇ.ಒ.ಎಸ್, ಡಿಜಿಟಲ್ ಕ್ಯಾಮರಾ, ಸೋನಿ ಹೆಚ್.ಡಿ.ಆರ್.ಸಿ.ಎಕ್ಸ್ ಕ್ಯಾಮರಾಗಳನ್ನು ಮತ್ತು ಮೊಬೈಲ್‌ಗಳನ್ನು ಸೈಂಟ್ ಮೆರೀಸ್ ದ್ವೀಪದಲ್ಲಿ ಬಳಸಲು ಯಾವುದೇ ನಿರ್ಬಂಧ ಇರುವುದಿಲ್ಲ ಎಂದು ಉಡುಪಿ ನಗರ ಸಭೆ ತಿಳಿಸಿದೆ.
ಸೈಂಟ್ ಮೆರೀಸ್ ದ್ವೀಪದಲ್ಲಿ ಪ್ರವಾಸಿಗರೊಂದಿಗೆ ಅನುಚಿತವಾಗಿ ವರ್ತಿಸಿದ ಸಿಬ್ಬಂದಿಯ ಮೇಲೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ತಿಳಿಸಲಾಗಿದೆ.
ಸೈಂಟ್‌ಮೆರೀಸ್ ದ್ವೀಪದಲ್ಲಿ ಪ್ರವಾಸಿಗರಿಂದ ಕ್ಯಾಮರಾಗಳಿಗೆ ಪಡೆಯುವ ಶುಲ್ಕವನ್ನು ರದ್ದುಗೊಳಿಸುವಂತೆ ಹಲವಾರು ಕಡೆಗಳಿಂದ ಹಾಗೂ ಜಾಲತಾಣದಲ್ಲಿ ಆಗ್ರಹಿಸುತ್ತಿದ್ದು, ದ್ವೀಪದಲ್ಲಿ ಯಾವುದೇ ರೀತಿಯ ಚಿತ್ರೀಕರಣಕ್ಕೆ ಉಪಯೋಗಿಸುವಂತಹ ಡಿ.ಎಸ್.ಎಲ್.ಆರ್ ಕ್ಯಾಮರಾಗಳಿಗೆ ಪ್ರವಾಸಿಗರಿಂದ ಶುಲ್ಕ ವಸೂಲಿ ಮಾಡುವ ಕುರಿತು ಮರು ಪರಿಶೀಲಿಸಲಾಗುವುದು ಹಾಗೂ ಇತರೆ ಕ್ಯಾಮರಾಗಳಿಗೆ ದ್ವೀಪದಲ್ಲಿ ಉಪಯೋಗಿಸಲು ಯಾವುದೇ ನಿರ್ಬಂಧ ಇರುವುದಿಲ್ಲವೆಂದು ಉಡುಪಿ ನಗರಸಭೆಯ ಪೌರಾಯುಕ್ತರ ಪ್ರಕಟಣೆ ತಿಳಿಸಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw