ಬಾತ್ ರೂಮ್ ಗೆ ನುಗ್ಗಿ ಮತಯಾಚಿಸಿದ ಬಿಜೆಪಿ ಶಾಸಕ: ಮತದಾರ ಕಂಗಾಲು!
ಉತ್ತರಪ್ರದೇಶ: ಬಿಜೆಪಿ ಶಾಸಕನಿಗೆ ಮತಯಾಚನೆ ಮಾಡುವ ಆತುರ, ಮತದಾರನಿಗೆ ಸ್ನಾನ ಮುಗಿಸುವ ಆತುರ, ಬಾತ್ ರೂಮ್ ಗೆ ನುಗ್ಗಿದ ಶಾಸಕರು ಮತದಾರನಿಗೆ ಅದು, ಇದು ಪ್ರಶ್ನೆ ಕೇಳಿದಾಗ ಮತದಾರ ಕಕ್ಕಾಬಿಕ್ಕಿಯಾಗಿದ್ದಾನೆ.
ಹೌದು…! ಇದು ಉತ್ತರ ಪ್ರದೇಶದಲ್ಲಿ ಬಿಜೆಪಿ ಅಭ್ಯರ್ಥಿಯೊಬ್ಬರು ಮತಯಾಚನೆ ಮಾಡಿದ ಪರಿ. ಉತ್ತರ ಪ್ರದೇಶದ ಬಿಜೆಪಿ ಶಾಸಕ ಸುರೇಂದ್ರ ಮೈಥಾನಿ ವ್ಯಕ್ತಿಯೋರ್ವರ ಮನೆಗೆ ಮತ ಕೇಳಲು ಬಂದಿದ್ದಾರೆ. ಈ ವೇಳೆ ವ್ಯಕ್ತಿ ಬಾತ್ ರೂಮ್ ನಲ್ಲಿ ಸ್ನಾನ ಮಾಡುವುದರಲ್ಲಿ ಮಗ್ನರಾಗಿದ್ದರು. ಶಾಸಕರು ತಡ ಮಾಡದೇ ನೇರವಾಗಿ ಬಾತ್ ರೂಮ್ ಗೆ ನುಗ್ಗಿದ್ದು, ನಮಗೆ ಮತದಾನ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಇನ್ನೊಂದೆಡೆ ಶಾಸಕರ ಜೊತೆಗಿದ್ದವರು ಕೂಡ ಬಾತ್ ರೂಮ್ ಗೆ ನುಗ್ಗಿದ್ದು, ವ್ಯಕ್ತಿ ಕಂಗಾಲಾಗಿದ್ದಾನೆ. ಸ್ನಾನ ಮಾಡೋದಾ ಮಾನ ಕಾಪಾಡಿಕೊಳ್ಳೋದ ಎನ್ನುವ ಸಂಕಷ್ಟದಲ್ಲಿ ವ್ಯಕ್ತಿ ಸಿಲುಕಿದ್ದಾರೆ.
ಬಾತ್ ರೂಮ್ ಗೆ ನುಗ್ಗಿದ ಶಾಸಕರು, ನಿನ್ನ ಬಳಿ ರೇಷನ್ ಕಾರ್ಡ್ ಇದೆಯೇ? ಎಂದೆಲ್ಲ ಪ್ರಶ್ನೆ ಕೇಳಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಏನಿದು ಹುಚ್ಚಾಟ ಎಂದು ಜನ ಪ್ರಶ್ನಿಸುವಂತಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಬೆಳಗಾವಿ: ಮೂವರು ಕಂದಮ್ಮಗಳ ಸಾವು ಪ್ರಕರಣ; ತನಿಖೆಗೆ ಆದೇಶಿಸಿದ ಡಿಎಚ್ ಒ
ಸಾಲಬಾಧೆ: ವಿಜಯಪುರದಲ್ಲಿ ನಿವೃತ್ತ ಯೋಧ ಆತ್ಮಹತ್ಯೆ
ಬೆಳಗಾವಿ: ರೂಬೆಲ್ಲಾ ಚುಚ್ಚುಮದ್ದು ಪಡೆದ ಮೂವರು ಕಂದಮ್ಮಗಳು ಸಾವು
ಬಾತ್ ರೂಮ್ ನಲ್ಲೇ ತಾಯಿ, ಮಗು ದಾರುಣ ಸಾವು | ಸ್ನಾನದ ಕೋಣೆಯಲ್ಲಿ ದುರಂತ ಸಾವು