ಬೇಸಿಗೆ ಕಾಲದಲ್ಲಿ ಹೆಚ್ಚು ಬೆಳ್ಳುಳ್ಳಿ  ಸೇವಿಸಿದರೆ ಏನಾಗುತ್ತದೆ? - Mahanayaka
12:49 AM Sunday 22 - December 2024

ಬೇಸಿಗೆ ಕಾಲದಲ್ಲಿ ಹೆಚ್ಚು ಬೆಳ್ಳುಳ್ಳಿ  ಸೇವಿಸಿದರೆ ಏನಾಗುತ್ತದೆ?

garlic
30/04/2022

ಬೆಳ್ಳುಳ್ಳಿ ಸೇವನೆಯಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಆದರೆ, ಬೇಸಿಗೆ ಕಾಲದಲ್ಲಿ ಬೆಳ್ಳುಳ್ಳಿ ಸೇವನೆ ಮಾಡಬಹುದೇ ಎನ್ನುವ ಪ್ರಶ್ನೆಗಳನ್ನು ಸಾಕಷ್ಟು ಜನರು ಕೇಳುತ್ತಿರುತ್ತಾರೆ.

ಬೇಸಿಗೆ ಕಾಲದಲ್ಲಿಯೂ ಬೆಳ್ಳುಳ್ಳಿ ಸೇವನೆ ಮಾಡಬಹುದು. ಅದರಲ್ಲಿ ಯಾವುದೇ ಅನುಮಾನಗಳು ಬೇಡ. ಆದರೆ ಬೇಸಿಗೆ ಕಾಲದಲ್ಲಿ  ಮಸಾಲೆ,  ಎಣ್ಣೆಯಂತಹ ಪದಾರ್ಧಗಳೊಮದಿಗೆ ಬೆಳ್ಳುಳ್ಳಿಯನ್ನು  ಅತಿಯಾಗಿ  ಸೇವನೆ ಮಾಡಬಾರದು.

ಬೇಸಿಗೆ ಕಾಲದಲ್ಲಿ ಹಸಿ ಬೆಳ್ಳುಳ್ಳಿ ಸೇವನೆ ಉತ್ತಮ.  ಇದರಿಂದ ಹಲವಾರು ರೋಗಗಳಿಗೆ ಮುಕ್ತಿ ಸಿಗುತ್ತದೆ. ಮಲಬದ್ಧತೆಗೆ ಇದು ಬಹಳಷ್ಟು ಸಹಕಾರಿಯಾಗಿದೆ ಮಾತ್ರವಲ್ಲದೇ, ದೇಹದ ಕೆಟ್ಟ ಕೊಲೆಸ್ಟ್ರಾಲ್ ಗಳನ್ನು ನಿಯಂತ್ರಿಸಲು ಬೆಳ್ಳುಳ್ಳಿ ಪ್ರಯೋಜನಕಾರಿಯಾಗಿದೆ.

ಬೇಸಿಗೆಯಲ್ಲಿ ಸಾಕಷ್ಟು ಜನರು ಮಲಬದ್ಧತೆಯಿಂದ ಬಳಲುತ್ತಾರೆ. ಅಂತಹವರು ಬೆಳ್ಳುಳ್ಳಿ ಸೇವನೆ ಮಾಡುವುದು ಉತ್ತಮ. ಯಾಕೆಂದರೆ, ಬೆಳ್ಳುಳ್ಳಿ ಸೇವನೆಯಿಂದ ಮಲ ವಿಸರ್ಜನೆ ಪ್ರಕ್ರಿಯೆ ಸರಾಗವಾಗಿ ನಡೆಯಲು ಸಾಧ್ಯವಾಗುತ್ತದೆ.

ಇನ್ನೂ ರಕ್ತದಲ್ಲಿರುವ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುವಲ್ಲೂ ಬೆಳ್ಳುಳ್ಳಿ ಸಹಕಾರಿಯಾಗಿದ್ದು, ಸಕ್ಕರೆ ಕಾಯಿಲೆ ಇರುವವರಿಗೆ ಬೆಳ್ಳುಳ್ಳಿ ಅತ್ಯುತ್ತಮವಾಗಿದೆ.

ಇತ್ತೀಚೆಗೆ ನಮ್ಮ ಜೀವನ ಶೈಲಿಗಳು ಬದಲಾದಂತೆ ಹೃದಯದ ಕಾಯಿಲೆಗಳು ಹೆಚ್ಚಾಗಿ ಯುವ ಜನರನ್ನೇ ಕಾಡುತ್ತಿದೆ. ಇಂತಹ ಸಂದರ್ಭದಲ್ಲಿ ಬೆಳ್ಳುಳ್ಳಿಯ ಬಳಕೆ ಉತ್ತಮವಾಗಿದೆ ಯಾಕೆಂದರೆ, ಇದು ಹೃದಯವನ್ನು ಸದೃಡವಾಗಿಡಲು ಸಹಕಾರಿಯಾಗಿದೆ.  ನಿತ್ಯ 1-2 ಹಸಿ ಬೆಳ್ಳುಳ್ಳಿ ಎಸಳುಗಳನ್ನು ತಿಂದರೆ ನಿಮ್ಮ ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಣದಲ್ಲಿರುತ್ತದೆ. ಇದರಿಂದ ಹೃದಯಾಘಾತದಂತಹ ಅಪಾಯಗಳು ಸಂಭವಿಸುವುದಿಲ್ಲ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1duNIQRfXnJcfQKWPzNqD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ರೈಲಿನಲ್ಲಿ ಯುವತಿಗೆ ಲೈಂಗಿಕ ಕಿರುಕುಳ: ವಿರೋಧಿಸಿದ್ದಕ್ಕೆ ರೈಲಿನಿಂದ ಕೆಳಗೆ  ಎಸೆದ ಪಾಪಿ!

ಕೋಟ್ಯಂತರ ರೂಪಾಯಿಯ ಪಾನ್ ಮಸಾಲ ಜಾಹೀರಾತಿನ ಆಫರ್ ನಿರಾಕರಿಸಿದ ಯಶ್!

ಮಹಿಳೆಯರು ನಮಾಝ್ ಮಾಡುವ ಕೊಠಡಿಗೆ ನುಗ್ಗಿ ಅಸಭ್ಯ ವರ್ತನೆ: ಯುವಕ ಅರೆಸ್ಟ್

ಪಿಎಸ್ ಐ ಮರು ಪರೀಕ್ಷೆ ನಿರ್ಧಾರದ ಬೆನ್ನಲ್ಲೇ ಸರ್ಕಾರಕ್ಕೆ ಮತ್ತೊಂದು ತಲೆನೋವು!

ಇತ್ತೀಚಿನ ಸುದ್ದಿ