ಶುಂಠಿ—ಬೆಳ್ಳುಳ್ಳಿಯನ್ನು ರೆಫ್ರಿಜರೇಟರ್ ನಲ್ಲಿ ಇಡಬಹುದೇ?
ಶುಂಠಿ ಮತ್ತು ಬೆಳ್ಳುಳ್ಳಿ ಬಹುಪಯೋಗಿಯಾಗಿದೆ. ಶುಂಠಿಯನ್ನು ಚಹಾದಿಂದ ಹಿಡಿದು ತರಕಾರಿ, ಮಾಂಸ ಖಾದ್ಯಗಳನ್ನು ತಯಾರಿಸುವವರೆಗೆ ಬಳಸಲಾಗುತ್ತದೆ. ಬೆಳ್ಳುಳ್ಳಿ ಕೂಡ ಬಹುಪಯೋಗಿಯಾಗಿದ್ದು, ಯಾವುದೇ ಪದಾರ್ಥಗಳಲ್ಲಿ ಕೂಡ ಬೆಳ್ಳುಳ್ಳಿ ಇಲ್ಲವಾದರೆ ಅದರ ರುಚಿ, ಘಮಲು ಕಡಿಮೆಯಾಗುತ್ತದೆ. ಸಾಕಷ್ಟು ಜನರಿಗೆ ಒಂದು ಅನುಮಾನವಿದೆ. ಶುಂಠಿ, ಬೆಳ್ಳುಳ್ಳಿಯನ್ನು ಫ್ರಿಡ್ಜ್‌ನಲ್ಲಿ ಇಡುವುದು ಸರಿಯೋ, ತಪ್ಪೋ? ಹಾಗೆಯೇ ಶುಂಠಿ, ಬೆಳ್ಳುಳ್ಳಿಯನ್ನು ಕೆಡದಂತೆ ರಕ್ಷಿಸುವುದು ಹೇಗೆ ಅಂತ.
ಶುಂಠಿಯನ್ನು ರೆಫ್ರಿಜರೇಟರ್ ನಲ್ಲಿ ಇಡಬಹುದೇ?
ಶುಂಠಿಯನ್ನು ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಬಹುದು. ಆದರೆ, ದೀರ್ಘಾವಧಿಯ ಸಂಗ್ರಹಣೆ ಅವಧಿಯನ್ನು ಖಚಿತಪಡಿಸಿಕೊಳ್ಳಲು ಮತ್ತು ಹಾಳಾಗುವುದನ್ನು ತಡೆಯಲು, ಶುಂಠಿಯನ್ನು ತೊಳೆದು ಒಣಗಿಸಿ ಮತ್ತು ಗಾಳಿಯಾಡದ ಡಬ್ಬದಲ್ಲಿ ಸಂಗ್ರಹಿಸಿಡಬೇಕು.
ಶುಂಠಿಯನ್ನು ಹೆಚ್ಚು ಹೊತ್ತು ತೆರೆದರೆ ಒಣಗುತ್ತದೆ. ಕೆಲವರು ಒದ್ದೆಯಾದ ಶುಂಠಿಯನ್ನು ಫ್ರಿಡ್ಜ್‌ನಲ್ಲಿ ಇಡುತ್ತಾರೆ. ಈ ರೀತಿ ಮಾಡುವುದರಿಂದ ಶುಂಠಿ ಕರಗಲು ಪ್ರಾರಂಭವಾಗುತ್ತದೆ ಅಥವಾ ಬೂಸ್ಟ್ ಹಿಡಿಯುತ್ತದೆ. ಶುಂಠಿಯನ್ನು ಸಂಗ್ರಹಿಸಲು ಉತ್ತಮ ಮಾರ್ಗವೆಂದರೆ ಅದನ್ನು ಚೆನ್ನಾಗಿ ತೊಳೆದು ಒಣಗಲು ಬಿಡಬೇಕು. ಶುಂಠಿ ಒಣಗಿದ ನಂತರ ಡಬ್ಬದಲ್ಲಿ ಕಾಗದವನ್ನು ಹಾಕಿ ಶುಂಠಿಯನ್ನು ಇರಿಸಬೇಕು. ಈ ರೀತಿ ಮಾಡುವುದರಿಂದ ಶುಂಠಿ ತಿಂಗಳುಗಟ್ಟಲೆ ಕೆಡುವುದಿಲ್ಲ.
ಬೆಳ್ಳುಳ್ಳಿಯನ್ನು ರೆಫ್ರಿಜರೇಟರ್‌ನಲ್ಲಿ ಇಡಬಹುದೇ?
ಅಪ್ಪಿತಪ್ಪಿಯೂ ಬೆಳ್ಳುಳ್ಳಿಯನ್ನು ರೆಫ್ರಿಜರೇಟರ್ ನಲ್ಲಿ ಇಡಬಾರದು. ರೆಫ್ರಿಜಿರೇಟರ್ ನಲ್ಲಿ ಬೆಳ್ಳುಳ್ಳಿಯನ್ನು ಇರಿಸಿದರೆ ಅದು ರಬ್ಬರ್ ನಂತಾಗುತ್ತದೆ. ರೆಫ್ರಿಜಿರೇಟರ್ ನಲ್ಲಿ ಬೆಳ್ಳುಳ್ಳಿಯನ್ನು ಸಂಗ್ರಹಿಸುವುದರಿಂದ ಬೂಸ್ಟ್ ಹಿಡಿಯಲು ಕಾರಣವಾಗಬಹುದು. ಬೆಳ್ಳುಳ್ಳಿಯನ್ನು ತರಕಾರಿಗಳೊಂದಿಗೆ ಇಟ್ಟುಕೊಂಡರೆ, ಅದು ಇತರ ತರಕಾರಿಗಳಲ್ಲಿ ಬೆಳ್ಳುಳ್ಳಿಯ ವಾಸನೆಯನ್ನು ಉಂಟುಮಾಡಬಹುದು.
ಇನ್ನು ಸಿಪ್ಪೆ ಸುಲಿದ ಬೆಳ್ಳುಳ್ಳಿಯನ್ನು ಎಂದಿಗೂ ರೆಫ್ರಿಜರೇಟರ್‌ನಲ್ಲಿ ತೆರೆದಿಡಬೇಡಿ. ಇದರಿಂದ ಫ್ರಿಡ್ಜ್‌ನಲ್ಲಿಟ್ಟ ವಸ್ತುಗಳಲ್ಲಿ ಬೆಳ್ಳುಳ್ಳಿ ವಾಸನೆ ಬರಲಾರಂಭಿಸುತ್ತದೆ. ನೀವು ಸಿಪ್ಪೆ ಸುಲಿದ ಬೆಳ್ಳುಳ್ಳಿಯನ್ನು ಫ್ರಿಜ್‌ನಲ್ಲಿ ಇಡಲು ಬಯಸಿದರೆ, ಅದನ್ನು ಗಾಳಿಯಾಡದ ಬಿಗಿಯಾದ ಡಬ್ಬದಲ್ಲಿ ಮುಚ್ಚಿಡಿ. ಬೆಳ್ಳುಳ್ಳಿಯನ್ನು ರೆಫ್ರಿಜರೇಟರ್‌ನಲ್ಲಿ ಹೆಚ್ಚು ಕಾಲ ಇಡುವುದರಿಂದ ಮೊಳಕೆಯೊಡೆಯಬಹುದು. ಬೆಳ್ಳುಳ್ಳಿಯನ್ನು ರುಬ್ಬಿಕೊಂಡು ಪೇಸ್ಟ್ ಮಾಡಿ ಶೇಖರಿಸಿಟ್ಟರೆ ಉತ್ತಮ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj