ಇವರೇನು ಜನರನ್ನು ಕೊಂದೇ ಬಿಡ್ತಾರಾ?: ಟೋಲ್ ಸಿಬ್ಬಂದಿಯಿಂದ ಕಾರು ಚಾಲಕನಿಗೆ ಹಿಗ್ಗಾಮುಗ್ಗಾ ಥಳಿತ!
ನಾವೇನು ಡಿಜಿಟಲ್ ಇಂಡಿಯಾದಲ್ಲಿದ್ದೇವಾ? ಇಲ್ಲ ಈಸ್ಟ್ ಕಂಪೆನಿ ಕಾಲದಲ್ಲಿದ್ದೇವಾ? ಅನ್ನೋ ಅನುಮಾನ ಸೃಷ್ಟಿಸುವ ಅನುಭವವನ್ನು ಇತ್ತೀಚೆಗೆ ದೇಶದ ಜನತೆಗೆ ಟೋಲ್ ಗೇಟ್ ಗಳು ನೀಡುತ್ತಿದ್ದು, ಟೋಲ್ ಸಿಬ್ಬಂದಿ ಆಡಿದ್ದೇ ಆಟ, ಮಾಡಿದ್ದೇ ಶಾಸನ ಅನ್ನೊವಂತಾಗಿದೆ. ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋವೊಂದು ಸಾರ್ವಜನಿಕರ ಆಕ್ರೋಶದ ಬೆಂಕಿಗೆ ತುಪ್ಪ ಸುರಿದಿದೆ.
ಟೋಲ್ ಸಿಬ್ಬಂದಿಯಿಂದ ಕಾರು ಚಾಲಕನ ಮೇಲೆ ಹಲ್ಲೆ ನಡೆಸಲಾಗಿದೆ ಎನ್ನಲಾದ ಘಟನೆ ಮಂಗಳೂರಿನ ತಲಪಾಡಿ ಟೋಲ್ ಪ್ಲಾಜಾದಲ್ಲಿ ನಡೆದಿದೆ ಎನ್ನಲಾಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತ ವೀಡಿಯೋ ವೈರಲ್ ಆಗಿದೆ.
ಕೇರಳ ಗಡಿಭಾಗದ ತಲಪಾಡಿ ಟೋಲ್ ಗೇಟ್ ನಲ್ಲಿ ಘಟನೆ ನಡೆದಿದ್ದು ಕರ್ನಾಟಕ –ಕೇರಳ ಗಡಿಭಾಗ ತಲಪಾಡಿಯಲ್ಲಿರುವ ಕೊನೆಯ ಟೋಲ್ ಗೇಟ್ ಇದಾಗಿದೆ.
ಹಲ್ಲೆ ಮಾಡುವ ದೃಶ್ಯವನ್ನು ವಾಹನ ಸವಾರರು ಸೆರೆಹಿಡಿದಿದ್ದು, ಕಾರು ಚಾಲಕರು ಕೇರಳ ಮೂಲದವರೆಂದು ತಿಳಿದುಬಂದಿದೆ.
ಕಾರ್ ನಲ್ಲಿದ ಕುಟುಂಬಸ್ಥರ ಮುಂದೇನೇ ಟೋಲ್ ಸಿಬ್ಬಂದಿ ಹಲ್ಲೆ ನಡೆಸಿದ್ದು ಇವರ ವರ್ತನೆಗೆ ವಾಹನ ಸವಾರರು ಹಾಗೂ ಸಾರ್ವಜನಿಕರು ಟೋಲ್ ಸಿಬ್ಬಂದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆದು ಪರಸ್ಪರ ಹಲ್ಲೆ ನಡೆದಿದ್ದು ಕಾರು ಚಾಲಕನನ್ನ ಹಿಡಿದು ಸಿಬ್ಬಂದಿಗಳು ಥಳಿಸಿದ್ದಾರೆ. ಈ ಘಟನೆ ಉಳ್ಳಾಲ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೀಡೀಯೋ ವೈರಲ್ ಆಗಿದೆ. ಈ ಘಟನೆ ಕುರಿತು ಈ ವರೆಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ವರದಿಯಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw