ಹೆಲ್ಮೆಟ್ ಧರಿಸಿಲ್ಲ ಎಂದು ಕಾರು ಚಾಲಕನಿಗೆ ದಂಡ ಹಾಕಿದ ಪೊಲೀಸರು!
ಹೆಲ್ಮೆಟ್ ಹಾಕದಿದ್ರೆ ಬೈಕ್ ಸವಾರನಿಗೆ ದಂಡ ಹಾಕೋದು ಸಾಮಾನ್ಯ. ಆದ್ರೆ ಹೆಲ್ಮೆಟ್ ಹಾಕಿಲ್ಲ ಅಂತಾ ಕಾರು ಚಾಲಕನಿಗೆ ನೋಟಿಸ್ ನೀಡಿದ್ರೆ ಹೇಗೆ..? ಹೌದು. ಹೆಲ್ಮೆಟ್ ಹಾಕಿಲ್ಲ ಅಂತಾ ಕಾರು ಚಾಲಕನಿಗೆ ದಂಡ ಹಾಕಿರೋ ಘಟನೆ ಮಂಗಳೂರಲ್ಲಿ ನಡೆದಿದೆ.
ಮಂಗಳೂರು ನಗರದ ಮಂಗಳಾದೇವಿಯಲ್ಲಿ ನವೆಂಬರ್ 29ರಂದು ಕಾರಿನ ಮಾಲಕರೊಬ್ಬರು ಸಂಚಾರ ಮಾಡಿದ್ದರು. ಇವರಿಗೆ ಸಂಚಾರ ಠಾಣೆಯಿಂದ ಸಹ ಸವಾರ ಹೆಲ್ಮೆಟ್ ಹಾಕಿಲ್ಲ ಎಂಬ ಕಾರಣವೊಡ್ಡಿ ಡಿಸೆಂಬರ್ 22ರಂದು 500 ರೂಪಾಯಿ ದಂಡ ಪಾವತಿಸಬೇಕೆಂದು ನೋಟಿಸ್ ಹೋಗಿದೆ. ಇದರಿಂದ ವಿಚಲಿತರಾದ ಕಾರಿನ ಮಾಲಕರು ಪರಿಶೀಲನೆ ನಡೆಸಿದಾಗ ಅಟೋಮೇಶನ್ ಸೆಂಟರ್‌ನಲ್ಲಿ ಎಡವಟ್ಟಾಗಿರುವುದು ಬಯಲಾಗಿದೆ.
ಕಾರಿನ ಮಾಲಕರು ತೆರಳುತ್ತಿದ್ದಾಗ ಇಬ್ಬರು ಯುವಕರು ಬೈಕ್ ನಲ್ಲಿ ತೆರಳುತ್ತಿದ್ದರು ಎನ್ನಲಾಗಿದೆ. ಇವರಲ್ಲಿ ಒಬ್ಬ ಹೆಲ್ಮೆಟ್ ಧರಿಸಿರಲಿಲ್ಲ. ಆ ವಾಹನದ ಮೇಲೆ ದಂಡ ಹಾಕುವ ಬದಲು ಕಾರಿನ ಮಾಲಕರಿಗೆ ದಂಡದ ನೋಟಿಸು ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw