ಕಾರುಗಳ ಮುಖಾಮುಖಿ ಡಿಕ್ಕಿ: ಓಮಿನಿ ಕಾರಿನಲ್ಲಿದ್ದ ದಂಪತಿಯ ದಾರುಣ ಸಾವು - Mahanayaka
5:05 PM Thursday 12 - December 2024

ಕಾರುಗಳ ಮುಖಾಮುಖಿ ಡಿಕ್ಕಿ: ಓಮಿನಿ ಕಾರಿನಲ್ಲಿದ್ದ ದಂಪತಿಯ ದಾರುಣ ಸಾವು

tumakuru accident
13/03/2022

ತುಮಕೂರು: ಕಾರುಗಳೆರಡು ಮುಖಾಮುಖಿಯಾಗಿ ಡಿಕ್ಕಿಯಾದ ಪರಿಣಾಮ ದಂಪತಿ ಸ್ಥಳದಲ್ಲೇ ಮೃತಪಟ್ಟ ಘಟನೆ ತುಮಕೂರು ಹೊರವಲಯದ ನಾಮದಚಿಲುಮೆ ರಸ್ತೆಯ ಸಿದ್ದಗಂಗಾ ಕ್ರಾಸ್ ಬಳಿ ನಡೆದಿದೆ.

ಕೊರಟಗೆರೆ ತಾಲ್ಲೂಕಿನ ಇರಕಸಂದ್ರ ಕಾಲೋನಿ ಮೂಲದ ದಂಪತಿ ಮೃತಪಟ್ಟವರು ಎಂದು ಗುರುತಿಸಲಾಗಿದ್ದು, ಇವರು ಓಮಿನಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗಿದೆ.

ಅಪಘಾತಕ್ಕೀಡಾದ ಮತ್ತೊಂದು ಕಾರಿನಲ್ಲಿ ಬಜರಂಗದಳದ ಜಿಲ್ಲಾ ಸಂಚಾಲಕ ಮಂಜು ಭಾರ್ಗವ್  ಎಂಬವರು ಇದ್ದರು. ಅವರಿಗೆ ತೀವ್ರವಾಗಿ ಗಾಯವಾಗಿದ್ದು, ಅವರನ್ನು ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.

ಅತಿಯಾದ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯಿಂದಾಗಿ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ.  ಘಟನಾ ಸ್ಥಳಕ್ಕೆ ಕ್ಯಾತ್ಸಂದ್ರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಬೈಕ್ ನಲ್ಲಿ ತೆರಳುತ್ತಿದ್ದ ಯುವಕನ ಮೇಲೆ ಕಾಡಾನೆ ದಾಳಿ

ಒಂದೇ ದಿನ 81 ಮಂದಿಯನ್ನು ಗಲ್ಲಿಗೇರಿಸಿದ ಸೌದಿ ಅರೇಬಿಯಾ ಸರ್ಕಾರ!

ದೆಹಲಿಯಲ್ಲಿ ಭಾರೀ ಅಗ್ನಿ ಅವಘಡ: 60 ಗುಡಿಸಲು ಭಸ್ಮ, 7 ಮಂದಿ ಸಾವು

ಪಂಚರಾಜ್ಯ ಚುನಾವಣೆ: ಇವಿಎಂ ಹ್ಯಾಕ್ ಆಗಿರಬಹುದು; ಡಾ.ಜಿ.ಪರಮೇಶ್ವರ್

ಇತ್ತೀಚಿನ ಸುದ್ದಿ