30 ಅಡಿ ಎತ್ತರದಿಂದ ಹಾರಿ ಪಂಚಾಯಿತಿ ಆವರಣಕ್ಕೆ ಬಿದ್ದ ಕಾರು!
ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ಗ್ರಾಮ ಪಂಚಾಯಿತಿ ಆವರಣಕ್ಕೆ ಕಾರು ಪಲ್ಟಿಯಾದ ಘಟನೆ ಮೂಡಿಗೆರೆ ತಾಲೂಕಿನ ಸುಂಕಸಾಲೆ ಬಳಿ ನಡೆದಿದೆ.
30 ಅಡಿ ಎತ್ತರದಿಂದ ಹಾರಿ ಪಂಚಾಯಿತಿ ಆವರಣಕ್ಕೆ ಪ್ರವಾಸಿ ಕಾರು ಬಿದ್ದಿದೆ. ದಟ್ಟ ಮಂಜಿನಿಂದಾಗಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಮಗುಚಿ ಬಿದ್ದಿದೆ ಎಂದು ಹೇಳಲಾಗಿದೆ.
ಬೆಂಗಳೂರಿನಿಂದ ಹೊರನಾಡಿಗೆ ಪ್ರವಾಸಿ ಕಾರು ಹೋಗುತ್ತಿತ್ತು. ಕಾರಿನಲ್ಲಿದ್ದ ಐವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೂವರಿಗೆ ಗಂಭೀರ ಗಾಯಗಳಾಗಿವೆ.
ಗಾಯಾಳುಗಳು ಮೂಡಿಗೆರೆ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದಾರೆ. 30 ಅಡಿ ಎತ್ತರದ ಪ್ರದೇಶದಿಂದ ಕಾರು ಬಿದ್ದ ರಭಸಕ್ಕೆ ಕಾರು ಬಹುತೇಕ ಜಖಂ ಆಗಿದೆ.
ಎತ್ತರದ ಪ್ರದೇಶದ ಮೇಲಿನ ರಸ್ತೆಯಿಂದ ಕೆಳಗಡೆ ಇದ್ದ ಪಂಚಾಯಿತಿ ಒಳಕ್ಕೆ ಕಾರು ಪಲ್ಟಿಯಾಗಿದೆ. ರಸ್ತೆಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ. ಘಟನೆ ಸಂಬಂಧ ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: