ಕಾರು ಮಗುಚಿ ಬಿದ್ದು, ಪತಿ ಮತ್ತು ಮೂವರು ಮಕ್ಕಳ ಕಣ್ಣೆದುರೇ ಸಾವಿಗೀಡಾದ ಮಹಿಳೆ!
30/03/2021
ಉಡುಪಿ: ಚಲಿಸುತ್ತಿದ್ದ ಕಾರಿನ ಚಕ್ರ ಸ್ಫೋಟಗೊಂಡ ಪರಿಣಾಮ ಕಾರು ಮಗುಚಿ ಬಿದ್ದಿದ್ದು, ಮೂವರು ಮಕ್ಕಳು ಹಾಗೂ ಪತಿಯ ಕಣ್ಣೆದುರೇ ತಾಯಿ ಸಾವನ್ನಪ್ಪಿದ್ದಾರೆ.
ಹೆಮ್ಮಾಡಿ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಈ ಘಟನೆ ನಡೆದಿದೆ. ಸುಹಾನ ಮತ್ತು ಸಿಬ್ಗತುಲಾ ದಂಪತಿ ತಮ್ಮ ಮೂವರು ಮಕ್ಕಳೊಂದಿಗೆ ಕಾರಿನಲ್ಲಿ ಭಟ್ಕಳದಿಂದ ವಾಪಸ್ ಆಗುತ್ತಿದ್ದರು. ಹೆಮ್ಮಾಡಿಗೆ ಕಾರು ಬರುತ್ತಿದ್ದಂತೆ ಮುಂದಿನ ಚಕ್ರ ಸ್ಫೋಟಗೊಂಡು ಕಾರು ಪಲ್ಟಿಯಾಗಿದೆ.
ಘಟನೆಯಲ್ಲಿ ಸುಹಾನಾ ಅವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ತಾಯಿ ಸಾವಿಗೀಡಾದ ವಿಚಾರ ತಿಳಿಯದ ಮಗು ಅಮ್ಮನ ಕಡೆಗೆ ಕೈ ತೋರಿಸಿ ಕರೆಯುತ್ತಿದ್ದ ದೃಶ್ಯ ಎಲ್ಲರ ಹೃದಯ ಕರಗಿಸಿತು.
ಘಟನೆಯಲ್ಲಿಯಲ್ಲಿ ಸುಹಾನ ಅವರ ಪತಿ, ಹಾಗೂ ಮೂವರು ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಆದರೆ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಸಂಬಂಧ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.