ಕಾರು ಮೇಲೆ ಮಗುಚಿ ಬಿದ್ದ ಅಮೃತಶಿಲೆ ಸಾಗಿಸುತ್ತಿದ್ದ ಲಾರಿ | ನಾಲ್ವರು ಸಾವು

rajasthana news
02/04/2021

ಜೈಪುರ: ಅಮೃತಶಿಲೆ ಕಲ್ಲು ಸಾಗಿಸುತ್ತಿದ್ದ ಟ್ರಕ್ ಕಾರಿನ ಮೇಲೆ ಮಗುಚಿ ಬಿದ್ದ ಪರಿಣಾಮ ದಂಪತಿ ಸೇರಿದಂತೆ ನಾಲ್ವರು ಸಾವಿಗೀಡಾಗಿರುವ ಘಟನೆ ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿ ನಡೆದಿದೆ.

 ಜಿಲ್ಲೆಯ ಬಲರೈ ಗ್ರಾಮದ ಬಳಿ ಎನ್‌ಎಚ್ -62 ರಲ್ಲಿ ಟ್ರಕ್ ಪಲ್ಟಿಯಾಗಿದೆ ಎಂದು ಗುಡಾ ಆಂಡ್ಲಾ ಪೊಲೀಸ್ ಠಾಣೆಯ ಎಸ್‌ ಎಚ್‌ ಒ ಬಿಹಾರಿ ಲಾಲ್ ಶರ್ಮಾ ತಿಳಿಸಿದ್ದು, ಅಶ್ವನಿ ಶರ್ಮಾ, ಅವರ ಪತ್ನಿ ರಶ್ಮಿ, ಸಂಬಂಧಿ ಅಜ್ಮೀರ್ ವೈದ್ಯಕೀಯ ಕಾಲೇಜಿನ ಹಣಕಾಸು ಸಲಹೆಗಾರ ಮನೋಜ್ ಕುಮಾರ್ ಶರ್ಮಾ ಮತ್ತು ಚಾಲಕ ಬುದ್ಧ ರಾಮ್ ಮೃತಪಟ್ಟವರು ರಂದು ತಿಳಿಸಿದ್ದಾರೆ.

ಗುಂಡೋಜ್‌ನ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯ ನಂತರ ಮೃತ ದೇಹಗಳನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದ್ದು, ಈ ವಿಷಯದಲ್ಲಿ ಟ್ರಕ್ ಚಾಲಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ. ಜಿಲ್ಲಾ ಎಸ್‌ಪಿ ರಾವತ್, ಸಿಬ್ಬಂದಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದರು.

ಇತ್ತೀಚಿನ ಸುದ್ದಿ

Exit mobile version