ಇನೋವಾ ಕಾರುಗಳ ನಡುವೆ ಭೀಕರ ಅಪಘಾತ: ಇಬ್ಬರು ಅಧಿಕಾರಿಗಳು ಸೇರಿದಂತೆ ನಾಲ್ವರು ಸಾವು - Mahanayaka
1:55 AM Wednesday 11 - December 2024

ಇನೋವಾ ಕಾರುಗಳ ನಡುವೆ ಭೀಕರ ಅಪಘಾತ: ಇಬ್ಬರು ಅಧಿಕಾರಿಗಳು ಸೇರಿದಂತೆ ನಾಲ್ವರು ಸಾವು

hosapete news
01/04/2021

ಹೊಸಪೇಟೆ: ಎರಡು ಇನೋವಾ ಕಾರುಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕೇಂದ್ರ ನೀರಾವರಿ ಆಯೋಗದ ಇಬ್ಬರು ಅಧಿಕಾರಿಗಳು ಸೇರಿ ನಾಲ್ವರು ಮೃತಪಟ್ಟಿರುವ ಘಟನೆ ನಡೆದಿದೆ.

ಕುಷ್ಟಗಿಯಿಂದ ಬೆಂಗಳೂರಿಗೆ ಹೊರಟಿದ್ದ ಇನೋವಾ ಕಾರು, ರಸ್ತೆ ವಿಭಜಕ ದಾಟಿಕೊಂಡು ಮತ್ತೊಂದು ರಸ್ತೆಯಲ್ಲಿ ಎದುರಿನಿಂದ ಬರುತ್ತಿದ್ದ ಅಧಿಕಾರಿಗಳಿದ್ದ ಇನೋವಾ ಕಾರಿಗೆ ಡಿಕ್ಕಿಯಾಗಿದೆ. ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದು ಇಬ್ಬರು ಅಧಿಕಾರಿಗಳು ಸ್ಥಳದಲ್ಲೇ ಮೃತಪಟ್ಟಿದ್ದು ಇನ್ನಿಬ್ಬರು ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.

ನೀರಾವರಿ ಆಯೋಗದಲ್ಲಿ ನಿರ್ದೇಶಕರಾಗಿರುವ 50 ವರ್ಷ ವಯಸ್ಸಿನ ರಾಮಸ್ವಾಮಿ, ಜಿತೇಂದ್ರ(50), ಕಾವ್ಯ(ತಿಪಟೂರು) ಮತ್ತು 10 ವರ್ಷ ವಯಸ್ಸಿನ ಶರಣಬಸವ ಮೃತಪಟ್ಟವರಾಗಿದ್ದು, ಸರ್ಕಾರಿ ಇನೋವಾ ಕಾರಿನ ಚಾಲಕ ಅನ್ವರ್, ಚಾಲಕ ಗಿರೀಶ್, ಮಂಜುಶ್ರೀ, ಶಿವಲೀಲಾ, ಸಿದ್ದಲಿಂಗೇಶ್ ಮತ್ತು ಸುವರ್ಣ ಘಟನೆಯಲ್ಲಿ ಗಾಯಗೊಂಡಿದ್ದಾರೆ.

ಮರಿಯಮ್ಮನಹಳ್ಳಿಯ ಹಾರುವನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಮಧ್ಯಾಹ್ನ ಈ ಭೀಕರ ಘಟನೆ  ನಡೆದಿದ್ದು, ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದರು.

ಇತ್ತೀಚಿನ ಸುದ್ದಿ