ವೇಣೂರು: ಕಾರಿನಲ್ಲಿ ಬಂದು ವ್ಯಕ್ತಿಯ ಮೇಲೆ ತಲವಾರಿನಿಂದ ದಾಳಿ
ಬೆಳ್ತಂಗಡಿ: ವೇಣೂರಿನಲ್ಲಿ ವ್ಯಕ್ತಿಯೊಬ್ಬರ ಮೇಲೆ ತಂಡವೊಂದು ತಲವಾರು ದಾಳಿ ನಡೆಸಿದ ಘಟನೆ ನಡೆದಿದ್ದು, ಪ್ರಕರಣದ ಆರೋಪಿಗಳನ್ನು ವೇಣೂರು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ಹಾವೇರಿ ನಿವಾಸಿಗಳಾಗಿರುವ ಲಿಂಗಪ್ಪ ಗುರುಪಾದಯ್ಯ ಹಿರೇಮಠ ಹಾಗೂನಾಗರಾಜ ಬಸಪ್ಪ ಎಂಬವರಾಗಿದ್ದಾರೆ.
ಗಾಯಾಳು ಅಂಡಂಜೆ ಗ್ರಾಮದ ನಿವಾಸಿ ರಾಜೇಂದ್ರ ಜೈನ್ ಎಂಬವರಾಗಿದ್ದಾರೆ. ಇವರು ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ವೇಳೆ ಕಾರಿನಲ್ಲಿ ಬಂದ ತಂಡ ತಲವಾರಿನಿಂದ ಹಲ್ಲೆ ನಡೆಸಿತ್ತು. ಬೊಬ್ಬೆ ಕೇಳಿ ಸ್ಥಳೀಯರು ಇವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಪ್ರಕರಣ ದಾಖಲಿಸಿ ಕೊಂಡ ವೇಣೂರು ಪೊಲೀಸರು ಹುಡುಕಾಟ ನಡೆಸಿ ಇದೀಗ ಆರೋಪಿಗಳನ್ನು ಬಂಧಿಸಿದ್ದಾರೆ.
ರಾಜೇಂದ್ರ ಅವರು ಇತ್ತೀಚೆಗೆ ಹಾವೇರಿ ಮೂಲದ ಯುವತಿಯನ್ನು ವಿವಾಹವಾಗಿದ್ದು ಹಲ್ಲೆಗೆ ಸ್ಪಷ್ಟವಾದ ಕಾರಣಗಳು ಇನ್ನಷ್ಟೇ ತಿಳಿದು ಬರಬೇಕಾಗಿದೆ. ವೇಣೂರು ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka