ನ್ಯಾನೋ ಕಾರಿನಲ್ಲಿ ಗೋಮಾಂಸ ಸಾಗಾಟ: ಓರ್ವನ ಬಂಧನ ಮತ್ತೋರ್ವ ಪರಾರಿ
ಕುಂದಾಪುರದಿಂದ ಭಟ್ಕಳಕ್ಕೆ ಗೋ ಮಾಂಸ ಸಾಗಾಟ ಮಾಡುತ್ತಿದ್ದ ನ್ಯಾನೋಕಾರನ್ನು ತಡೆದು ನಿಲ್ಲಿಸಿದ ಬೈಂದೂರು ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದು, ಇನ್ನೋರ್ವ ಕಾರಿನಿಂದ ಇಳಿದು ಪರಾರಿಯಾಗಿರುವ ಘಟನೆ ಬೈಂದೂರು ತಾಲೂಕಿನ ಯಡ್ತರೆ ಗ್ರಾಮದ ಹೊಸ ಬಸ್ ನಿಲ್ದಾಣದ ಬಳಿ ಆ.20ರಂದು ನಡೆದಿದೆ.
ಭಟ್ಕಳ ನಿವಾಸಿ 37ವರ್ಷದ ಮಹಮ್ಮದ್ ಗೌಸ್ ಗವಾಯಿ ಬಂಧಿತ ಆರೋಪಿ. ಪರಾರಿಯಾದ ಆರೋಪಿಯನ್ನು ನಜ್ಮುಲ್ ಎಂದು ತಿಳಿದುಬಂದಿದೆ. ಕಾರನ್ನು ಪರಿಶೀಲನೆ ನಡೆಸಿದಾಗ ಹಿಂಬದಿಯಲ್ಲಿ ನೀಲಿ ಬಣ್ಣದ ಪಾಲಿಥೀನ್ ಶೀಟ್ ನಲ್ಲಿ ಗೋ ಮಾಂಸ ಇರುವುದು ಕಂಡುಬಂದಿದೆ.
22ಸಾವಿರ ಮೌಲ್ಯದ 150 ಕೆ.ಜಿ. ಗೋಮಾಂಸ ಪತ್ತೆಯಾಗಿದೆ. ಆರೋಪಿಗಳು ಇದನ್ನು ಭಟ್ಕಳದಲ್ಲಿ ಮದುವೆ ಕಾರ್ಯಕ್ರಮವೊಂದಕ್ಕೆ ತೆಗೆದುಕೊಂಡು ಹೋಗುತ್ತಿದ್ದರು ಎಂದು ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka