ಕಾರಿನಲ್ಲೇ ಬೆಂಕಿ ಹಚ್ಚಿಕೊಂಡು ಯುವಕ ಯುವತಿ ಆತ್ಮಹತ್ಯೆಗೆ ಶರಣು!
ಉಡುಪಿ: ಯುವಕ ಯುವತಿ ಇಬ್ಬರು ಕಾರಿನೊಳಗೆ ಪೆಟ್ರೋಲ್ ಸುರಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದ್ದು, ಕಾರಿನೊಳಗಿದ್ದ ಇಬ್ಬರು ಕೂಡ ಸಜೀವ ದಹನವಾಗಿದ್ದಾರೆ.
ಭಾನುವಾರ ಮುಂಜಾನೆ ಉಡುಪಿ ಜಿಲ್ಲೆಯ ಬ್ರಹ್ಮಾವರದ ಹೆಗ್ಗುಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊತ್ತೂರು ಎಂಬಲ್ಲಿ ಕಾರು ಬೆಂಕಿ ಹತ್ತಿಕೊಂಡು ಉರಿಯುತ್ತಿರುವುದು ಕಂಡು ಬಂದಿತ್ತು. ಬೆಂಕಿ ನಂದಿಸಿದಾಗ ಯುವಕ ಯುವತಿಯ ಮೃತದೇಹ ಕಾರಿನಲ್ಲಿ ಕಂಡು ಬಂದಿದೆ ಎಂದು ತಿಳಿದು ಬಂದಿದೆ.
ಶನಿವಾರ ಮಂಗಳೂರಿನ ಹುಸೇನ್ ಎಂಬವರ ಸ್ವಿಫ್ಟ್ ಕಾರನ್ನು ಬಾಡಿಗೆಗೆ ಪಡೆದುಕೊಂಡಿದ್ದ ಜೋಡಿ, ವಿವಿಧ ಸ್ಥಳಗಳಿಗೆ ಹೋಗಿ ಬಂದಿದ್ದಾರೆಂದು ಹೇಳಲಾಗಿದೆ. ಇವರಿಬ್ಬರೂ ಬೆಂಗಳೂರಿನ ಆರ್.ಟಿ. ನಗರದವರಾಗಿದ್ದು, ಯುವಕನನ್ನು ಯಶವಂತ ಯಾದವ್ ಎಂದು ಗುರುತಿಸಲಾಗಿದ್ದು, ಯುವತಿಯನ್ನು ಜ್ಯೋತಿ ಎಂದು ಗುರುತಿಸಲಾಗಿದೆ. ಇವರಿಬ್ಬರು ಕಾರಿನಲ್ಲಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ.
ಮೃತರು ಸಂಬಂಧಿಕರೇ ಎನ್ನುವುದು ತಿಳಿದು ಬಂದಿಲ್ಲ. ಬ್ರಹ್ಮಾವರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಬೆಳ್ಳಂ ಬೆಳಗ್ಗೆ ನಡೆದ ೀ ಘಟನೆಯಿಂದ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಬಸ್ ರಿಪೇರಿ ಮಾಡುತ್ತಿದ್ದ ವೇಳೆ ಮೆಕಾನಿಕ್ ನ ದಾರುಣ ಸಾವು
ಬಾತ್ ರೂಮ್ ನಲ್ಲಿ ಪತ್ತೆಯಾಯ್ತು 60 ಹಾವುಗಳು!
ತೂಕ ಇಳಿಸಲು ಸಹಕಾರಿಯಾಗಿರುವ 3 ಬಗೆಯ ಚಹಾಗಳು!
ಪ್ರೇಯಸಿಯನ್ನು ಗೋವಾ ಬೀಚ್ ಗೆ ಕರೆದೊಯ್ದು ಬರ್ಬರವಾಗಿ ಹತ್ಯೆ ಮಾಡಿದ ಯುವಕ!