ಕಾರಿನಲ್ಲಿಯೇ ಉದ್ಯಮಿಯನ್ನು ಕೊಚ್ಚಿ ಭೀಕರ ಹತ್ಯೆ

anekal
06/01/2022

ಆನೇಕಲ್:  ಉದ್ಯಮಿಯ ಕಾರನ್ನು ಅಡ್ಡಗಟ್ಟಿ  ಕಾರಿನಲ್ಲಿ ಕುಳಿತಲ್ಲಿಗೇ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ನಡೆಸಿದ ಭೀಕರ ಘಟನೆ ಆನೇಕಲ್ ಪಟ್ಟಣದ ವೆಂಕಟೇಶ್ವರ ಚಿತ್ರಮಂದಿರ ಬಳಿ ನಡೆದಿದೆ

ಬೆಂಗಳೂರು ಮೂಲದ ರಿಯಲ್ ಎಸ್ಟೇಟ್ ಉದ್ಯಮಿ ರಾಜಶೇಖರ್ ರೆಡ್ಡಿ ಹತ್ಯೆಗೀಡಾದ ವ್ಯಕ್ತಿ ಎಂದು ಗುರುತಿಸಲಾಗಿದ್ದು,  ಆನೇಕಲ್ ಪಟ್ಟಣದ ಕೋರ್ಟ್ ಗೆ ಬಂದಿದ್ದ ಉದ್ಯಮಿ ರಾಜಶೇಖರ್ ರೆಡ್ಡಿ ಸಂಜೆ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಮೂರು ಬೈಕ್ ಗಳಲ್ಲಿ ಬಂದಿದ್ದ ದುಷ್ಕರ್ಮಿಗಳು ಹತ್ಯೆ ನಡೆಸಿದ್ದಾರೆ ಎಂದು ವರದಿಯಾಗಿದೆ.

ಕಾರಿನ ಗಾಜನ್ನು ಒಡೆದು ಒಳಗಡೆ ಇದ್ದ ರಾಜಶೇಖರ್ ರೆಡ್ಡಿ ಅವರ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ . ಘಟನೆ ಕುರಿತು ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕೊಲೆಗಾರರಿಗೆ ಬಲೆ ಬೀಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಫುಡ್ ಡೆಲಿವರಿ ಬಾಯ್ ಗೆ ಹಿಗ್ಗಾಮುಗ್ಗಾ ಥಳಿಸಿದ ಪೊಲೀಸ್: ವಿಡಿಯೋ ವೈರಲ್

ದಕ್ಷಿಣ ಕೋರಿಯಾದ ಕಿಂಗ್ ಪಿನ್’ ನಂತೆ ಸಚಿವ ಮಾಧುಸ್ವಾಮಿ! | ಪತ್ರಿಕಾಗೋಷ್ಠಿಯಲ್ಲಿ ಪಿಸುಗುಟ್ಟಿದ ಬಿಜೆಪಿ ನಾಯಕರು

ತೋಟದ ಕೆಲಸಕ್ಕೆ ಹೊರಟಿದ್ದ ವೇಳೆ ಆನೆ ದಾಳಿ:  ಕಾರ್ಮಿಕ ಸಾವು

ಜಡೆಯಿಂದ ಡಬಲ್ ಡಕರ್ ಬಸ್ ಎಳೆದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಮಾಡಿದ ಮಹಿಳೆ

ಜೀವಂತವಾಗಿ ಬಂದಿದ್ದೇನೆ,  ನಿಮ್ಮ ಸಿಎಂಗೆ ಧನ್ಯವಾದ ತಿಳಿಸಿ ಎಂದ ಮೋದಿ | ಪಂಜಾಬ್  ನಲ್ಲಿ ನಡೆದದ್ದೇನು?

ಇತ್ತೀಚಿನ ಸುದ್ದಿ

Exit mobile version