“ಕಾರ್ ನನ್ನದು, ಯಾಕ್ರಿ ಟೋಯಿಂಗ್ ಮಾಡ್ತಿದ್ದೀರಿ” | ಟ್ರಾಫಿಕ್ ಪೊಲೀಸರನ್ನು ಗದರಿದ ಮಹಿಳೆ - Mahanayaka
5:29 AM Tuesday 10 - December 2024

“ಕಾರ್ ನನ್ನದು, ಯಾಕ್ರಿ ಟೋಯಿಂಗ್ ಮಾಡ್ತಿದ್ದೀರಿ” | ಟ್ರಾಫಿಕ್ ಪೊಲೀಸರನ್ನು ಗದರಿದ ಮಹಿಳೆ

toing
09/09/2021

ಬೆಂಗಳೂರು: ಕಾರ್ ನನ್ನದು ಯಾಕ್ರಿ ಟೋಯಿಂಗ್ ಮಾಡ್ತಿದ್ದೀರಿ ಎಂದು ಮಹಿಳೆಯೊಬ್ಬರು ಪೊಲೀಸರನ್ನು ಗದರಿದ ಘಟನೆ ಬುಧವಾರ ನಡೆದಿದ್ದು, ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಏರ್ ಟೆಲ್ ಮಳಿಗೆಗೆ ಬಂದಿದ್ದ ಮಹಿಳೆ ನೋ ಪಾರ್ಕಿಂಗ್ ಸ್ಥಳದಲ್ಲಿ ಕಾರು ನಿಲ್ಲಿಸಿದ್ದರಿಂದಾಗಿ ಟ್ರಾಫಿಕ್ ಪೊಲೀಸರು ಟೋಯಿಂಗ್ ಗೆ ಮುಂದಾಗಿದ್ದಾರೆ.

ಪೊಲೀಸರ ಕ್ರಮವನ್ನು ವಿರೋಧಿಸಿದ ಮಹಿಳೆ, ಟೋಯಿಂಗ್‌ ಮಾಡುವ ಮುನ್ನ ಪೊಲೀಸರು ವಾಹನ ಸಂಖ್ಯೆಯನ್ನು ಕೂಗಬೇಕಿತ್ತು. ಕಾರಿನ ಮಾಲಿಕರು ಯಾರು ಎಂಬುದನ್ನೂ ಕೇಳಬೇಕಿತ್ತು. ಈ ಕೆಲಸವನ್ನು ಮಾಡಿಲ್ಲ. ಕೆಲಸದ ಮೇಲೆ ಏರ್‌ ಟೆಲ್‌ ಕಚೇರಿಗೆ ಬಂದಿದ್ದೇನೆ. ಒಂದು ಗಂಟೆಯವರೆಗೂ ಇಲ್ಲಿ ಕಾಯಬೇಕು. ಅಲ್ಲಿಯವರೆಗೂ ಕಾರು ನಿಲ್ಲಿಸುವುದು ಎಲ್ಲಿ ಎಂದು ಪೊಲೀಸರನ್ನು ಪ್ರಶ್ನಿಸಿದ್ದಾರೆ.

ನೋಪಾರ್ಕಿಂಗ್ ಸ್ಥಳದಲ್ಲಿ ಕಾರು ನಿಲ್ಲಿಸಿದ್ದಕ್ಕೆ ದಂಡ ಪಾವತಿಸಿ. ನಾವು ವಾಹನ ಇಲ್ಲಿಯೇ ಬಿಟ್ಟು ಹೋಗುತ್ತೇವೆ ಎಂದು ಪೊಲೀಸರು ಹೇಳಿದ್ದಾರೆ. ಈ ವೇಳೆ ಎಷ್ಟು ಕೊಡಬೇಕು ಎಂದು ಮಹಿಳೆ ಪ್ರಶ್ನಿಸಿದ್ದಾರೆ. 500 ಅಥವಾ 1 ಸಾವಿರ ಆಗಬಹುದು ಎಂದು ಸಿಬ್ಬಂದಿ ಹೇಳಿದ್ದು, ಈ ವೇಳೆ ದಂಡ ನಾನ್ಯಾಕೆ ಪಾವತಿಸಬೇಕು? ಏರ್ ಟೆಲ್ ಕಂಪೆನಿಯವರನ್ನು ಕೇಳಿ ಎಂದು ಮಹಿಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳ ನಗರಗಳಲ್ಲಿ ಸರಿಯಾದ ಪಾರ್ಕಿಂಗ್ ವ್ಯವಸ್ಥೆಗಳೇ ಇಲ್ಲ. ಹೀಗಾಗಿ ವಾಹನ ಚಾಲಕರು ಹಾಗೂ ಟ್ರಾಫಿಕ್ ಪೊಲೀಸರ ನಡುವೆ ಸಂಘರ್ಷ ಉಂಟಾಗುತ್ತಲೇ ಇರುತ್ತವೆ. ನಗರಗಳನ್ನು ಅವೈಜ್ಞಾನಿಕವಾಗಿ ನಿರ್ವಹಿಸಿ ಕಾನೂನು ಪಾಲಿಸಿ ಎಂದರೆ ಹೇಗೆ ?ಎನ್ನುವುದು ಬಹುತೇಕ ವಾಹನ ಚಾಲಕರ ಪ್ರಶ್ನೆಗಳಾಗಿವೆ. ವಾಹನಗಳಿಗೆ ಪಾರ್ಕಿಂಗ್ ಬಿಡಿ, ಕೆಲವು ಪ್ರದೇಶಗಳಲ್ಲಿ ಫುಟ್ಪಾತ್ ಕೂಡ ಇಲ್ಲವಾಗಿದೆ. ಕೆಲವು ಕಡೆಗಳಲ್ಲಿ ಫುಟ್ಪಾತ್ ಗಳು ಯಾವುದೋ ಅಂಗಡಿಗಳದ್ದೋ ಹೊಟೇಲ್ ಗಳದ್ದೋ ಒಳಗಿರುತ್ತವೆ. ನಗರವನ್ನು ಸಂಬಂಧ ಪಟ್ಟವರು ಸರಿಯಾಗಿ ನಿಭಾಯಿಸ ಬೇಕು. ಪಾರ್ಕಿಂಗ್ ಗೆ ಪ್ರತಿ ಏರಿಯಾಗಳಲ್ಲಿಯೂ ಜಾಗ ಕಲ್ಪಿಸಬೇಕು ಎನ್ನುವ ಒತ್ತಾಯಗಳು ಕೂಡ ಕೇಳಿ ಬಂದಿದೆ.

ಇನ್ನಷ್ಟು ಸುದ್ದಿಗಳು…

ವಾನರ ಸೇನೆಯ ದಾಳಿ: ಎರಡನೇ ಮಹಡಿಯಿಂದ ಬಿದ್ದು ಬಿಜೆಪಿ ನಾಯಕನ ಪತ್ನಿ ಸಾವು

2 ವರ್ಷದ ಮಗು ಕೊವಿಡ್ ಗೆ ಬಲಿ: 3ನೇ ಅಲೆಯ ಮುನ್ಸೂಚನೆಯೇ?

ಹೊಟೇಲ್ ನಲ್ಲಿ 16 ವರ್ಷ ವಯಸ್ಸಿನ ಬಾಲಕಿಯ ಅತ್ಯಾಚಾರ | ಬಿಜೆಪಿ, ಜೆಡಿಯು ಮುಖಂಡರ ಸಹಿತ ಮೂವರ ಬಂಧನ

ದೋಣಿ ಮಗುಚಿ ಮೂವರು ಮಕ್ಕಳು ಸೇರಿದಂತೆ 6 ಮಂದಿ ಜಲಸಮಾಧಿ!

ಪಕ್ಷ ಯಾವುದೇ ಇರಲಿ, ಮುಂದಿನ ಬಾರಿ ರಾಜ್ಯದಲ್ಲಿ ದಲಿತ ಸಿಎಂ ಆಗಬೇಕು | ಜೆಡಿಎಸ್ ಶಾಸಕ ಗೌರಿಶಂಕರ್ ಕರೆ

ಲೈಂಗಿಕ ಆಯಾಸ ಪರಿಹಾರ ಸೇರಿದಂತೆ ಹಲವು ಸಮಸ್ಯೆಗಳಿಗೆ ಖರ್ಜೂರದಲ್ಲಿದೆ ಪರಿಹಾರ

ತಾಲಿಬಾನ್ ಉಗ್ರನ ಬಂದೂಕಿಗೆ ಎದೆಯೊಡ್ಡಿದ ಅಫ್ಘಾನಿಸ್ತಾನದ ಮಹಿಳೆಯ ಧೈರ್ಯಕ್ಕೆ ಭೇಷ್ ಎಂದ ನೆಟ್ಟಿಗರು!

ಶಶಿಕಲಾಗೆ ಮತ್ತೆ ಶಾಕ್: 100 ಕೋಟಿ ರೂಪಾಯಿ ಬೆಲೆ ಬಾಳುವ 11 ಆಸ್ತಿಗಳು ಜಪ್ತಿ

ಲಿಫ್ಟ್ ನೀಡುವ ನೆಪದಲ್ಲಿ ಆಹಾರದಲ್ಲಿ ಅಮಲು ಪದಾರ್ಥ ಬೆರೆಸಿ, ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ!

ಇತ್ತೀಚಿನ ಸುದ್ದಿ