ಬೈಕ್ ನ್ನು ಎಳೆದುಕೊಂಡೇ ಹೋದ ಕಾರು: ಬೈಕ್ ಸವಾರ ರಸ್ತೆಯಲ್ಲಿ ಉಜ್ಜಿಕೊಂಡು ಹೋದರು ತಿರುಗಿ ನೋಡದ ಚಾಲಕ!

15/08/2023
ಚಿಕ್ಕಮಗಳೂರು: ಕಾರು ಬೈಕ್ ಗೆ ಡಿಕ್ಕಿಯಾಗಿ ಸುಮಾರು 100 ಮೀಟರ್ ವರೆಗೂ ಬೈಕ್ ನ್ನು ಎಳೆದೊಯ್ದ ಘಟನೆ ರಾಷ್ಟ್ರೀಯ ಹೆದ್ದಾರಿ 173ರಲ್ಲಿ ನಡೆದಿದೆ.
ಚಿಕ್ಕಮಗಳೂರು ನಗರದ ಬೈಪಾಸ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಘಟನೆಯ ದೃಶ್ಯ ಕಂಡು ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ.
ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಗುದ್ದಿದ ರಭಸಕ್ಕೆ ಬೈಕಿನಲ್ಲಿ ಬೆಂಕಿ ಹತ್ತಿದರೂ ಕಾರು ಚಾಲಕ ಕಾರು ನಿಲ್ಲಿಸುವ ಪ್ರಯತ್ನಕ್ಕೆ ಮುಂದಾಗಿಲ್ಲ, ಬೈಕ್ ಸವಾರ ರಸ್ತೆಯಲ್ಲಿ ಉಜ್ಜಿಕೊಂಡು ಹೋದರು ಕಾರು ಚಾಲಕ ತಿರುಗಿಯೂ ನೋಡಿಲ್ಲ.
ಹಿಟ್ ಅಂಡ್ ರನ್ ಮಾಡಿರುವ ಕಾರು ಚಾಲಕನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕಾರು ಚಾಲಕನ ಅತಿರೇಕದ ವರ್ತನೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.