ಎಟಿಎಂನಿಂದ ಹಣ ಡ್ರಾ ಮಾಡಬೇಕಾದರೆ ಕಾರ್ಡ್ ಬೇಕಾಗಿಲ್ಲ!: ಏನಿದು ಕಾರ್ಡ್ ಲೆಸ್ ಕ್ಯಾಶ್? - Mahanayaka
8:08 PM Wednesday 11 - December 2024

ಎಟಿಎಂನಿಂದ ಹಣ ಡ್ರಾ ಮಾಡಬೇಕಾದರೆ ಕಾರ್ಡ್ ಬೇಕಾಗಿಲ್ಲ!: ಏನಿದು ಕಾರ್ಡ್ ಲೆಸ್ ಕ್ಯಾಶ್?

card less cash
09/04/2022

ನವದೆಹಲಿ: ದೇಶಾದ್ಯಂತ ಎಲ್ಲ ಬ್ಯಾಂಕುಗಳ ಎಟಿಎಂಗಳಲ್ಲೂ ಶೀಘ್ರ ಕಾರ್ಡ್ ಲೆಸ್ ಕ್ಯಾಶ್ ಸೇವೆ ಲಭ್ಯವಾಗಲಿದೆ ಎಂದು ಆರ್ ಬಿಐ ಗವರ್ನರ್ ಶಕ್ತಿಕಾಂತ ದಾಸ್ ಶುಕ್ರವಾರ ಪ್ರಕಟಿಸಿದರು.

ಇದರೊಂದಿಗೆ ಕಾರ್ಡ್ ಬಳಕೆ ಸಂಪೂರ್ಣ ಕೊನೆಗೊಳ್ಳಲಿದ್ದು, ಗ್ರಾಹಕನಿಗೆ ಹೆಚ್ಚಿನ ಉಪಯೋಗ ಪಡೆದುಕೊಳ್ಳಬಹುದು.

ಈ ಹಣಕಾಸು ಸೇವೆಯು ಯೂನಿಫೈಡ್ ಪೇಮೆಂಟ್ ಇಂಟರ್​ ಫೇಸ್ (ಯುಪಿಐ) ಆಧಾರಿತವಾದುದು ಇಷ್ಟರವರೆಗೆ ಕೆಲವೊಂದು ಬ್ಯಾಂಕುಗಳು ಮಾತ್ರ ಈ ಸೇವೆಯನ್ನು ಎಟಿಎಂ ಮೂಲಕ ನೀಡುತ್ತಿದ್ದವು. ಇನ್ಮುಂದೆ ಇದು ಎಲ್ಲ ಬ್ಯಾಂಕುಗಳ, ಎಲ್ಲ ಎಟಿಎಂಗಳಲ್ಲೂ ಲಭ್ಯವಿದೆ.

ಕಾರ್ಡ್​ಲೆಸ್ ಕ್ಯಾಶ್ ಎಂಬ ಹೆಸರೇ ಸೂಚಿಸುವಂತೆ ಎಟಿಎಂ ಕೇಂದ್ರಗಳಲ್ಲಿ ಹಣ ನಗದೀಕರಿಸುವುದಕ್ಕೆ ಗ್ರಾಹಕರು ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸಬೇಕಾಗಿಲ್ಲ.

ಬಳಕೆ ಹೇಗೆ?: ಕಾರ್ಡ್​ಲೆಸ್ ಕ್ಯಾಶ್ ಸೇವೆ ಬಳಸಲು ಆಯಾ ಬ್ಯಾಂಕಿನ ಮೊಬೈಲ್ ಆಪ್ ಅನ್ನು ಗ್ರಾಹಕರು ಹೊಂದಿರಬೇಕು. ಅದರ ಮೂಲಕ ವಿತ್​ಡ್ರಾ ಕ್ಯಾಶ್ ಸೌಲಭ್ಯ ಬಳಸಬೇಕು. ಇದರಲ್ಲಿ ಮೊಬೈಲ್ ಪಿನ್ ಬಳಸಿಕೊಂಡು 10,000 ರೂ.ನಿಂದ 25,000 ರೂ.ತನಕ ಹಣ ಗ್ರಾಹಕರಿಗೆ ವ್ಯವಹಾರ ಮಾಡಬಹುದು.

ಎಸ್​ ಬಿಐ, ಐಸಿಐಸಿಐ ಬ್ಯಾಂಕ್, ಏಕ್ಸಿಸ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಮುಂತಾದ ಬ್ಯಾಂಕುಗಳ ಎಟಿಎಂಗಳಲ್ಲಿ ಈವಾಗಲೇ ಇದರ  ಸೇವೆ ಲಭ್ಯವಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1duNIQRfXnJcfQKWPzNqD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಯೋಗಿ ಆದಿತ್ಯನಾಥ್ ಟ್ವಿಟ್ಟರ್ ಪ್ರೊಫೈಲ್ ನಲ್ಲಿ ಕಾರ್ಟೂನ್! | ರಾತ್ರೋ ರಾತ್ರಿ ನಡೆದದ್ದೇನು?

ಅಸಾರಾಂ ಬಾಪು ಬೆಂಬಲಿಗರ ಆಶ್ರಮದ ಬಳಿ ಬಾಲಕಿಯ ಮೃತದೇಹ ಪತ್ತೆ!

ಎಸಿ ಬ್ಲಾಸ್ಟ್: ಒಂದೇ ಮನೆಯ ನಾಲ್ವರು ಸಜೀವ ದಹನ

ರೈಲು ಹಳಿಯ ಬಳಿ ನಿಂತು ಸೆಲ್ಫಿ: ಮೂವರು ಯುವಕರ ದಾರುಣ ಸಾವು

ಉಕ್ರೇನ್ ರೈಲು ನಿಲ್ದಾಣಕ್ಕೆ ರಾಕೆಟ್ ದಾಳಿ ನಡೆಸಿದ ರಷ್ಯಾ: 30 ಜನರ ದುರ್ಮರಣ

ಇತ್ತೀಚಿನ ಸುದ್ದಿ