ಕರ್ಫ್ಯೂ ನಡುವೆಯೇ ತೆರೆದ ಬಿಜೆಪಿ ಶಾಸಕರ ಒಡೆತನದ ಶಾಲೆ!
ಶಿವಮೊಗ್ಗ: ರಾಜ್ಯದೆಲ್ಲೆಡೆ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿದ್ದರೂ, ಶಿವಮೊಗ್ಗದ ಶಿಕ್ಷಣ ಸಂಸ್ಥೆಯೊಂದು ಸರ್ಕಾರದ ನಿಯಮವನ್ನು ದಿಕ್ಕಿರಿಸಿ, ಶಾಲೆ ನಡೆಸಿದ ಘಟನೆ ನಡೆದಿದೆ.
ಶಿವಮೊಗ್ಗ ಗ್ರಾಮಾಂತರ ಶಾಸಕ ಅಶೋಕ್ ನಾಯ್ಕ ಒಡೆತನದ ಅಕ್ಷರ ಸ್ಕೂಲ್ ಮತ್ತು ಕಾಲೇಜು ಇಂದು ಸಹ ತೆರೆದಿದ್ದು, ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಯತ್ತ ತೆರಳುತ್ತಿರುವ ದೃಶ್ಯ ಕಂಡುಬಂದಿದೆ. ಊರೆಲ್ಲಾ ಕರ್ಫ್ಯೂ ಹೇರಿ, ಬಿಜೆಪಿ ನಾಯಕರ ಸಂಸ್ಥೆಗಳು ಮಾತ್ರ ಯಾವುದೇ ನಿಯಮವೂ ಇಲ್ಲವೇ ಎಂದು ಸಾರ್ವಜನಿಕರು ಇದೀಗ ಕೇಳುವಂತಾಗಿದೆ.
ಶಾಲಾ ಆಡಳಿತ ಮಂಡಳಿಯೇ ವಿದ್ಯಾರ್ಥಿಗಳನ್ನು ಶಾಲಾ ಬಸ್ನಲ್ಲಿ ಕರೆದೊಯ್ಯುತ್ತಿದ್ದು, ಬಿಜೆಪಿ ಶಾಸಕರ ಒಡೆತನ ಶಿಕ್ಷಣ ಸಂಸ್ಥೆಯೇ ಸರ್ಕಾರದ ಕೊರೊನಾ ನಿಯಮಗಳನ್ನು ಉಲ್ಲಂಘಿಸಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ದುಡಿದು ಬದುಕುವ ಕೂಲಿ ಕಾರ್ಮಿಕರಿಗೆ ಸಂಬಳದ ದಿನವಾದ ಇಂದು ಕರ್ಫ್ಯೂನಿಂದಾಗಿ ತೊಂದರೆಯಾಗಿದೆ. ನಿಮಗೊಂದು ನ್ಯಾಯ, ಬೇರೆಯವರಿಗೊಂದು ನ್ಯಾಯವೇ? ಯಾವ ಪುರುಷಾರ್ಥಕ್ಕೆ ಈ ಕರ್ಫ್ಯೂ ಹೇರಬೇಕಿತ್ತು? ಎಂದು ಜನ ಪ್ರಶ್ನಿಸುತ್ತಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DbJM9kayC1K4utc3ntXPdh
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ನಟಿಗೆ ಕೊವಿಡ್ ಪಾಸಿಟಿವ್: ಸತ್ತು ಹೋಗಲು ಬೇಡಿದ ವಿಕೃತರು
ಮೊಬೈಲ್ ನುಂಗಿದ ಕೈದಿ: ಜೈಲು ಅಧಿಕಾರಿಗಳ ಕಣ್ತಪ್ಪಿಸಲು ಹೋಗಿ ಯಡವಟ್ಟು
ಕುಲ್ಕುಂದದ ಜಾತ್ರೆ / ಎರುಕನಡನ ಬೇಟಿ/ ಕಾರಿ ಕಬಿಲ ಜೋಡಿ | ತುಳುನಾಡಿನ ಅವಳಿ ವೀರರು ಕಾನದ-ಕಟದರು | ಸಂಚಿಕೆ: 13
6ನೇ ತರಗತಿ ವಿದ್ಯಾರ್ಥಿನಿ ಮೇಲೆ ಶಿಕ್ಷಕನಿಂದಲೇ ಅತ್ಯಾಚಾರ
ಶಾಕಿಂಗ್ ನ್ಯೂಸ್: ಫಿರಾನಾ ಮೀನಿನ ದಾಳಿಗೆ 4 ಮಂದಿ ಸಾವು | ಹಲವರು ನಾಪತ್ತೆ