ಅಕೌಂಟೆಂಟ್ ನ ಮೇಲೆ ರಾಸಾಯನಿಕವನ್ನು ಚೆಲ್ಲಿದ ಪ್ರಕರಣ: ವಿಚಿತ್ರ ತಿರುವು

ಹೈದರಾಬಾದ್ ಮಂದಿರದ ಅಕೌಂಟೆಂಟ್ ನ ಮೇಲೆ ರಾಸಾಯನಿಕವನ್ನು ಚೆಲ್ಲಿದ ಪ್ರಕರಣ ತಿರುವು ಪಡೆದುಕೊಂಡಿದೆ. ಈ ಘಟನೆಯಲ್ಲಿ ಇಬ್ಬರು ಅರ್ಚಕರನ್ನು ಹೈದರಾಬಾದ್ ಸಿಟಿ ಪೊಲೀಸರು ಬಂಧಿಸಿದ್ದಾರೆ.
ದಿನದ ಹಿಂದೆ ಹೈದರಾಬಾದಿನ ಭೂಲಕ್ಷ್ಮಿ ಮಾತ ಮಂದಿರದಲ್ಲಿ ಈ ಘಟನೆ ನಡೆದಿತ್ತು. ಮಂದಿರದ ಅರ್ಚಕರಾದ ಮೇದಕ್ ಜಿಲ್ಲೆಯ 31 ವರ್ಷದ ಹರಿ ಪುತ್ರ ಮತ್ತು 41 ವರ್ಷದ ರಾಜಶೇಖರ್ ಶರ್ಮ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಈ ಮಂದಿರದ ಅಕೌಂಟೆಂಟ್ ಆಗಿದ್ದ ಮತ್ತು ಗೋಶಾಲೆ ಕಮಿಟಿಯ ಸದಸ್ಯರೂ ಆಗಿದ್ದ 60 ವರ್ಷದ ಚಿಂತಲ ನರಸಿಂಹ ರಾವ್ ಎಂಬವರ ಮೇಲೆ ರಾಸಾಯನಿಕಗಳನ್ನು ಎರಚಲಾಗಿತ್ತು. ಮಂದಿರದ ರಿಸೆಪ್ಶನ್ ಕೌಂಟರ್ನಲ್ಲಿ ಕುಳಿತಿದ್ದ ರಾವ್ ಅವರಿಗೆ ಹ್ಯಾಪಿ ಹೋಳಿ ಎಂದು ಹೇಳಿ ತಲೆಗೆ ರಾಸಾಯನಿಕವನ್ನು ಆಗಂತುಕರು ಸುರಿದಿದ್ದರು. ತಕ್ಷಣ ಅವರ ಮುಖ ಕಣ್ಣು ತಲೆಯಲ್ಲಿ ಬೊಬ್ಬೆಗಳು ಎದ್ದುವು. ಪ್ರಕರಣವನ್ನು ಭೇದಿಸುವುದಕ್ಕೆ ಪೊಲೀಸರು ಆರು ತಂಡಗಳನ್ನು ರಚಿಸಿದರು.
ಇದೀಗ ಈ ಅರ್ಚಕರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.. ವೈಯಕ್ತಿಕ ಜಗಳವೇ ಅವರ ಮೇಲೆ ದಾಳಿಗೆ ಕಾರಣ ಎಂದವರು ಹೇಳಿದ್ದಾರೆ.
ಈ ರಾಸಾಯನಿಕವನ್ನು ಎರಚುವುದಕ್ಕೆ ಎರಡು ಸಾವಿರ ರೂಪಾಯಿಯನ್ನು ನಿಗದಿಪಡಿಸಿದ್ದರು ಮತ್ತು ಅದರಲ್ಲಿ ಒಂದು ಸಾವಿರ ರೂಪಾಯಿಯನ್ನು ಮುಂಗಡವಾಗಿ ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj