ಮಣಿಪಾಲ: ಎರಡು ತಂಡಗಳ ಮಧ್ಯೆ ಚೂರಿ ಇರಿತ, ಹಲ್ಲೆ ಪ್ರಕರಣ: ಏಳು ಮಂದಿ ಬಂಧನ
ಮಣಿಪಾಲ: ಎರಡು ತಂಡಗಳ ಮಧ್ಯೆ ಮಣಿಪಾಲದಲ್ಲಿ ಅ.1ರಂದು ರಾತ್ರಿ ವೇಳೆ ನಡೆದ ಚೂರಿ ಇರಿತ ಹಾಗೂ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು ಏಳು ಮಂದಿಯನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.
ಸೈಫ್ ಕುಕ್ಕಿಕಟ್ಟೆ, ಉದಾಫ್ ಚಿಟ್ಪಾಡಿ, ರಾಹುಲ್ ಶೆಟ್ಟಿ ಕಟಪಾಡಿ ಮತ್ತು ಅಫ್ರಿದಿ ದೊಡ್ಡಣಗುಡ್ಡೆ, ಬೈಕಾಡಿಯ ಹರ್ಷಿತ್, ತಿಲಕ್ ಹಾಗೂ ರಿತೇಷ್ ಬಂಧಿತ ಆರೋಪಿಗಳು. ಚೂರಿ ಇರಿತಕ್ಕೆ ಒಳಗಾದ ಪ್ರತಾಪ್(19) ಎಂಬವರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಳಿಕ ಪ್ರತಾಪ್, ತಿಲಕ್ ಮತ್ತು ಹರ್ಷಿತ್‌ನೊಂದಿಗೆ ರಾತ್ರಿ ಮಣಿಪಾಲದ ಎಡ್ಜ್ ಹೊಟೇಲ್ ಬಳಿ ಹೋದಾಗ ಕಾರಿನಲ್ಲಿ ಬಂದ ಇದೇ ಮೂರು ಜನ ಹಾಗೂ ಇತರರು ಪ್ರತಾಪ್‌ಗೆ ಕೈಯಿಂದ ಹೊಡೆದು ಚೂರಿಯಿಂದ ಕೈಗೆ ಇರಿದು ಗಾಯಗೊಳಿಸಿದ್ದಾರೆ ಎಂದು ದೂರಲಾಗಿದೆ.
ಪ್ರತಿದೂರು: ಹೆರ್ಗಾ ಗ್ರಾಮದ ಈಶ್ವರ ನಗರ ಎಂಬಲ್ಲಿ ಹೋಟೇಲ್ ಆಶ್ಲೇಷದ ಎದುರು ಹುದೈಪ್ (19) ತನ್ನ ಮಿತ್ರರೊಂದಿಗೆ ಕಾರಿನಲ್ಲಿ ಉಡುಪಿಗೆ ಹೋಗುತ್ತಿದ್ದಾಗ ಐದು ಜನ ಹಾಗೂ ಇತರರು ಕಾರನ್ನು ತಡೆದು ನಿಲ್ಲಿಸಿ ಕಾರಿನಲ್ಲಿದ್ದವರನ್ನು ಕಾರಿನಿಂದ ಹೊರಗೆ ಎಳೆದು ಕೈಯಿಂದ ಹೊಡೆದು, ಕಲ್ಲಿನಿಂದ ಕುತ್ತಿಗೆಗೆ ಹಲ್ಲೆ ಮಾಡಿರುವುದಾಗಿ ಪ್ರತಿದೂರಿನಲ್ಲಿ ತಿಳಿಸಲಾಗಿದೆ.ಈ ಎರಡೂ ಪ್ರಕರಣಗಳು ಮಣಿಪಾಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.