ಮಕ್ಕಳಿಂದ ಕುಡುಕರ ಪಾತ್ರ: ಡ್ರಾಮಾ ಜ್ಯೂನಿಯರ್ಸ್ ಬಗ್ಗೆ ವೀಕ್ಷಕರಿಂದ ಬೇಸರ - Mahanayaka

ಮಕ್ಕಳಿಂದ ಕುಡುಕರ ಪಾತ್ರ: ಡ್ರಾಮಾ ಜ್ಯೂನಿಯರ್ಸ್ ಬಗ್ಗೆ ವೀಕ್ಷಕರಿಂದ ಬೇಸರ

drama
18/11/2023

ಸದಾ ಉತ್ತಮ ಕಾರ್ಯಕ್ರಮಗಳನ್ನು ನೀಡುವ ‘ಝೀ ಕನ್ನಡ’ ಚಾನೆಲ್  ಪ್ರತಿಬಾರಿಯೂ ಡ್ರಾಮಾ ಜ್ಯೂನಿಯರ್ಸ್  ಕಾರ್ಯಕ್ರಮದ ಮೂಲಕ ಹಲವು ಬಾಲ ಪ್ರತಿಭೆಗಳನ್ನು ಬೆಳೆಸಿದೆ. ಆದ್ರೆ, ಈ ಬಾರಿ ಡ್ರಾಮಾ ಜ್ಯೂನಿಯರ್ಸ್ ಬಗ್ಗೆ ವೀಕ್ಷಕರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.


Provided by

ಡ್ರಾಮಾ ಜ್ಯೂನಿಯರ್ಸ್-5ನಲ್ಲಿ ಬಾಲ ನಟರಿಂದ ಕುಡುಕರ ಪಾತ್ರ ಮಾಡಿಸಿರುವ ಬಗ್ಗೆ ಸಾರ್ವಜನಿಕರು ತೀವ್ರ ಬೇಸರ ಹೊರ ಹಾಕಿದ್ದಾರೆ. ಮಕ್ಕಳು ಇಂತಹ ಪಾತ್ರಗಳನ್ನು ಮಾಡುವುದನ್ನು ನೋಡಲು ಸಾಧ್ಯವಾಗುತ್ತಿಲ್ಲ. ಜೊತೆಗೆ ಇದು ಮಕ್ಕಳನ್ನು ದುಷ್ಚಟದತ್ತ ಸೆಳೆಯುವ ಅಪಾಯವಿದೆ. ಕಾರ್ಯಕ್ರಮ ಆಯೋಜಕರು ಇಂತಹ ಸ್ಕಿಟ್ ಗಳನ್ನು ಪ್ರದರ್ಶಿಸಬಾರದು ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.

ಕುಣಿಗಲ್ ನ ಡ್ರಾಮಾ ಜ್ಯೂನಿಯರ್ ವಿಷ್ಣು ಕುಡಿಯೋಕೆ ಕಾರಣವೇ ಬೇಕಾಗಿಲ್ಲ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವೊಂದನ್ನು ಝೀ ಕನ್ನಡ ಪೋಸ್ಟ್ ಮಾಡಿದೆ.  ವಿಡಿಯೋ ವೀಕ್ಷಕರಿಗೆ ಶಾಕ್ ನೀಡಿದೆ. ಮಕ್ಕಳಿಂದ ಕುಡುಕರ ಪಾತ್ರ ಮಾಡಿಸುವ ಮೂಲಕ ಸಮಾಜಕ್ಕೆ ಏನು ಸಂದೇಶ ನೀಡುತ್ತೀರಿ ಎನ್ನುವ ಪ್ರಶ್ನೆಗಳಿಗೆ ಕಾರಣವಾಗಿದೆ.


Provided by

ನಟನೆ ತುಂಬಾ ತುಂಬಾ ಚೆನ್ನಾಗಿದೆ. ಆದರೆ ನಗಿಸೋಕೆ ಇದೊಂದೇ ವಿಷಯ ಇಲ್ಲ.ಇನ್ನೂ ಬೇಕಾದಷ್ಟಿವೆ.ಇನ್ನೂ ಚಿಗುರುತ್ತಿರುವ ಪ್ರತಿಭೆಗಳಿಗೆ ಒಳ್ಳೆಯ ಹಾಗೂ ಉದಾತ್ತವಾದ ವಿಷಯಗಳನ್ನು ಕಲಿಸಿ.ಇದನ್ನು ಪ್ರೋತ್ಸಾಹಿಸಬೇಡಿ, ಚಿಕ್ಕ‌ಮಕ್ಕಳಿಗೆ ಕುಡುಕನ ಪಾತ್ರ ಮಾಡಿಸಬಾರದು. ಬೇರೆ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ  ಎಂದು ವೀಕ್ಷಕರು ಕಾಮೆಂಟ್ ಮಾಡಿದ್ದಾರೆ.

ಮಕ್ಕಳಿಗೆ ಮದ್ಯಪಾನ ಬಗ್ಗೆ ಮಾಹಿತಿ ಇಲ್ಲ ಅದರೂ ಇಂಥ ಕೆಟ್ಟ ಡ್ರಾಮಾ ಮಾಡಲು ಅನುಮತಿ ಕೊಟ್ಟವರು ಯಾರು?  ಮಕ್ಕಳಿಗೆ ಈ ತರದ ಅಭಿನಯವನ್ನು ಹೇಳಿಕೊಡುವುದು ಮತ್ತೆ ಪ್ರೋತ್ಸಾಹಿಸುವುದು ಸೂಕ್ತ ಅಲ್ಲ ಅಂತ ಅನ್ಸುತ್ತೆ ಎಂದು ಕೆಲವು ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ.

ಅಭಿನಯದ ವಿಷಯಗಳಿಗೆ ಯಾವುದೇ ಬೇಲಿಗಳಿಲ್ಲ, ಆದರೆ ಮುಂದಿನ ಪೀಳಿಗೆಯನ್ನು ಮಾದಕ ವಸ್ತುಗಳಿಂದ ದೂರವಿಡಬೇಕಾದಂತ ಜವಾಬ್ದಾರಿಯನ್ನು ಚಾನೆಲ್ ಅರಿತುಕೊಳ್ಳಬೇಕು. ಹಾಗಾಗಿ ಕುಡಿತವೊಂದೇ ಕಾಮಿಡಿ, ಡ್ರಾಮಾ ಅಲ್ಲ ಅಂತಹ ವಿಷಯಗಳಿಗೆ ಹೆಚ್ಚು ಪ್ರೋತ್ಸಾಹ ನೀಡುವುದು ಸರಿಯಲ್ಲ, ಮಕ್ಕಳು ಮಾಡುವ ಡ್ರಾಮ ಮಕ್ಕಳಿಗೆ ಪ್ರೇರಕವಾಗಿರುತ್ತದೆ. ಈ ವಿಷಯವನ್ನು ಚಾನೆಲ್ ನವರು ಗಮನದಲ್ಲಿಟ್ಟುಕೊಳ್ಳಬೇಕಿದೆ ಎನ್ನುವ ಅಭಿಪ್ರಾಯಗಳು ಕೇಳಿ ಬಂದಿದೆ.

ಇತ್ತೀಚಿನ ಸುದ್ದಿ