ಜಾತಿ ನಿಂದನೆ ಪ್ರಕರಣ: ಬಿಜೆಪಿ ಶಾಸಕ ಮುನಿರತ್ನಗೆ ಜಾಮೀನು ಮಂಜೂರು
ಬೆಂಗಳೂರು: ಜಾತಿನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಮುನಿರತ್ನಗೆ ಜಾಮೀನು ಮಂಜೂರಾಗಿದೆ. ಬುಧವಾರ ಈ ಕೇಸ್ ಗೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ವಾದ, ಪ್ರತಿವಾದ ಆಲಿಸಿತ್ತು. ಇಂದು ತೀರ್ಪು ನೀಡಿದೆ.
ವಾದ ಮಂಡಿಸಿದ ಮುನಿರತ್ನ ಪರ ವಕೀಲ ಅಶೋಕ್ ಹಾರನಹಳ್ಳಿ, ಇದು ಆರೇಳು ವರ್ಷಗಳ ಹಳೆಯ ಪ್ರಕರಣ, ಚಲುವರಾಜು ಉಪಸ್ಥಿತಿಯಲ್ಲಿ ನಡೆದ ಘಟನೆ, ಸಾರ್ವಜನಿಕವಾಗಿ ನಡೆದ ನಿಂದನೆ ಅಲ್ಲ. ಇದಕ್ಕೆ ಅಟ್ರಾಸಿಟಿ ಕಾಯ್ದೆ ಅನ್ವಯವಾಗುವುದಿಲ್ಲ. ಈ ಸೆಕ್ಷನ್ ಪ್ರಕಾರ ನಿಂದನೆ ಮಾಡುವಾಗ ಇಬ್ಬರಿಗಿಂತ ಹೆಚ್ಚು ಜನ ಇರಬೇಕು. ಗುಂಪಿನಲ್ಲಿ ಜಾತಿನಿಂದನೆ ಮಾಡಿರಬೇಕು ಎಂದು ವಾದಿಸಿದರು.
ರಾಜಕೀಯಕ್ಕಾಗಿ ಮುನಿರತ್ನ ಅವರನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಆರೋಪಿಯ ವಾಯ್ಸ್ ಸ್ಯಾಂಪಲ್ ಪಡೆಯಲಾಗಿದೆ, ಸಾಕ್ಷಿದಾರರ ಹೇಳಿಕೆಯೂ ದಾಖಲಾಗಿದೆ. ಈಗ ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಸಾಧ್ಯವಿಲ್ಲ. ಹಾಗಾಗಿ ಜಾಮೀನು ನೀಡಬಹುದು ಎಂದು ವಕೀಲರು ಕೋರಿದ್ದರು. ಅಂತಿಮವಾಗಿ ವಾದ ವಿವಾದಗಳನ್ನು ಆಲಿಸಿದ ಕೋರ್ಟ್ ಮುನಿರತ್ನಗೆ ಜಾಮೀನು ಮಂಜೂರು ಮಾಡಿದೆ.
ಇನ್ನೂ ಮುನಿರತ್ನಗೆ ಜಾಮೀನು ಮಂಜೂರು ಆದರೂ ಅತ್ಯಾಚಾರ ಪ್ರಕರಣದಲ್ಲಿ ಅವರನ್ನು ಮತ್ತೆ ಬಂಧಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: