ಜಾತಿ ತಾರತಮ್ಯ, ಕಿರುಕುಳ: ಅಪ್ರಾಪ್ತ ಆತ್ಮಹತ್ಯೆ; ಯೋಗಿಯ ನಾಡಲ್ಲಿ ದುರಂತ ಕಥನ - Mahanayaka

ಜಾತಿ ತಾರತಮ್ಯ, ಕಿರುಕುಳ: ಅಪ್ರಾಪ್ತ ಆತ್ಮಹತ್ಯೆ; ಯೋಗಿಯ ನಾಡಲ್ಲಿ ದುರಂತ ಕಥನ

24/12/2024

ತೀವ್ರ ಜಾತಿ ತಾರತಮ್ಯ ಮತ್ತು ಕಿರುಕುಳವನ್ನು ಎದುರಿಸಿದ ಅಪ್ರಾಪ್ತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಬಸ್ತಿ ಪ್ರದೇಶದ ಹಳ್ಳಿಯೊಂದರಲ್ಲಿ ನಡೆದಿದೆ. ಆತನನ್ನು ವಿವಸ್ತ್ರಗೊಳಿಸಿ ಥಳಿಸಿ ಮೂತ್ರ ವಿಸರ್ಜನೆ ಮಾಡಿದ್ದಾರೆ. ದೂರು ನೀಡಲು ಪೊಲೀಸ್ ಠಾಣೆಗೆ ಹೋದಾಗ ನಮ್ಮ ದೂರು ದಾಖಲಿಸಿಕೊಂಡಿಲ್ಲ‌ ಎಂದು ಮೃತ ಬಾಲಕನ ಚಿಕ್ಕಪ್ಪ ಆರೋಪಿಸಿದ್ದಾರೆ.


Provided by

ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಸರ್ಕಲ್ ಆಫೀಸರ್ ಪ್ರದೀಪ್ ಕುಮಾರ್ ತ್ರಿಪಾಠಿ, “ಆದಿತ್ಯ ಎಂಬ ಬಾಲಕ ನೇಣು ಬಿಗಿದುಕೊಂಡಿದ್ದಾನೆ; ಪಿಎಸ್ ಕಪ್ತಂಗಂಜ್‌ನಲ್ಲಿ ಪ್ರಕರಣ ದಾಖಲಿಸಲಾಗಿದೆ. ಪರಸ್ಪರ ಭಿನ್ನಾಭಿಪ್ರಾಯ ಕಾರಣ ಎಂದು ಶಂಕಿಸಲಾಗಿದೆ” ಎಂದು ಹೇಳಿದ್ದಾರೆ.

ಆದರೆ, ಸಾವಿಗೂ ಮುನ್ನ ಆದಿತ್ಯನಿಗೆ ತೀವ್ರ ಕಿರುಕುಳ ನೀಡಿದ್ದರು ಎಂದು ಸಂತ್ರಸ್ತನ ಕುಟುಂಬದವರು ಆರೋಪಿಸಿದ್ದಾರೆ.


Provided by

“ಗ್ರಾಮದಲ್ಲಿ ನಡೆದ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಆತನನ್ನು ಆಹ್ವಾನಿಸಲಾಗಿತ್ತು, ಇದೆಲ್ಲ ಪೂರ್ವ ಯೋಜಿತವೋ ಗೊತ್ತಿಲ್ಲ. ಆದರೆ, ಆತನನ್ನು ವಿವಸ್ತ್ರಗೊಳಿಸಿ ಥಳಿಸಿ ಮೂತ್ರ ವಿಸರ್ಜನೆ ಮಾಡಿದ್ದಾರೆ. ದೂರು ನೀಡಲು ಪೊಲೀಸ್ ಠಾಣೆಗೆ ಹೋದಾಗ ನಮ್ಮ ದೂರು ದಾಖಲಿಸಿಕೊಂಡಿಲ್ಲ” ಎಂದು ಮೃತ ಬಾಲಕನ ಚಿಕ್ಕಪ್ಪ ವಿಜಯ್ ಕುಮಾರ್ ಆರೋಪಿಸಿದ್ದಾರೆ.

“ಡಿಸೆಂಬರ್ 20 ರಂದು ಘಟನೆ ಸಂಭವಿಸಿದೆ. ಆದರೆ, ಮರುದಿನ ನಮಗೆ ವಿಷಯ ತಿಳಿಯಿತು. ಆದಿತ್ಯ ತಡರಾತ್ರಿ ಮನೆಗೆ ಬಂದು ಮರುದಿನ ಬೆಳಿಗ್ಗೆ ಕಿರುಕುಳದ ಬಗ್ಗೆ ವಿವರಿಸಿದ್ದಾನೆ. ನಾವು ಪ್ರಯತ್ನಪಟ್ಟರೂ ಅಧಿಕಾರಿಗಳು ಮೂರು ದಿನಗಳಾದರೂ ನಮ್ಮ ದೂರು ದಾಖಲಿಸಲಿಲ್ಲ. ಅವರು ಮತ್ತೆ ಕಿರುಕುಳ ನೀಡಿದ್ದು, ಅದು ಬಾಲಕನ ಆತ್ಮಹತ್ಯೆಗೆ ಕಾರಣವಾಯಿತು” ಎಂದು ಹೇಳಿದರು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ