ನವದೆಹಲಿ: ದುಬೈನ ಐಸಿಸಿ ಅಕಾಡೆಮಿಯಲ್ಲಿ ಅಭ್ಯಾಸದ ಸಮಯದಲ್ಲಿ ಭಾರತದ ಹಿರಿಯ ಬ್ಯಾಟ್ ಮ್ಯಾನ್ ವಿರಾಟ್ ಕೊಹ್ಲಿಗೆ ಸಣ್ಣ ಗಾಯವಾಗಿದೆ ಎಂದು ಪಾಕಿಸ್ತಾನದ ಜಿಯೋ ನ್ಯೂಸ್ ವರದಿ ಮಾಡಿದೆ. ನೆಟ್ಸ್ ನಲ್ಲಿ ವೇಗದ ಬೌಲರ್ ಅನ್ನು ಎದುರಿಸುವಾಗ ಭಾರತೀಯ ತಾರೆಯ ಮೊಣಕಾಲಿಗೆ ಗಾಯವಾಗಿದೆ. ಇದು ಸೆಷನ್ ಅನ್ನು ತಕ್ಷಣ ನಿಲ್ಲಿಸಲು ಕಾರಣವಾಯಿತು. ತಂಡದ ಫಿಸಿ...
ಕದನ ವಿರಾಮ ಒಪ್ಪಂದದ ಒಂದನೇ ಹಂತವನ್ನು ಇನ್ನಷ್ಟು ವಿಸ್ತರಿಸುವ ಬಗ್ಗೆ ಹಮಾಸ್ ನ ಜೊತೆ ಅಮೆರಿಕ ಮುಖಾಮುಖಿ ಮಾತಾಡಿರುವುದಕ್ಕೆ ಇಸ್ರೇಲ್ ಅಸಂತೋಷ ವ್ಯಕ್ತಪಡಿಸಿದೆ. ಹಮಾಸ್ ನೊಂದಿಗೆ ಅಮೆರಿಕ ನೇರಾ ನೇರ ಮಾತುಕತೆ ನಡೆಸುವುದಕ್ಕೆ ಇಸ್ರೇಲ್ ವಿರುದ್ಧವಾಗಿದೆ ಎಂದು ಇಸ್ರೇಲ್ ಉನ್ನತ ಮುಖಂಡರು ಹೇಳಿರುವುದಾಗಿ ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ...
ಮದೀನಾದ ವಿಮಾನ ನಿಲ್ದಾಣದಿಂದ ಮಸ್ಜಿದುನ್ನಬವಿಗೆ ಎಲ್ಲಾ ಸಮಯದಲ್ಲೂ ಬಸ್ ವ್ಯವಸ್ಥೆಯನ್ನು ಮಾಡಲಾಗಿದೆ. ಅಮೀರ್ ಮುಹಮ್ಮದ್ ಬಿನ್ ಅಬ್ದುಲ್ ಅಝೀಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಮಝಾನ್ ತಿಂಗಳ ಉದ್ದಕ್ಕೂ ಮಸ್ಜಿದುನ್ನಬವಿಗೆ 24 ಗಂಟೆಯೂ ಬಸ್ ಸೇವೆ ಲಭ್ಯವಿದೆ ಎಂದು ತಿಳಿದು ಬಂದಿದೆ. ಇದು ಬಹಳ ಪ್ರಯೋಜನಕಾರಿ ವ್ಯವಸ್ಥೆಯಾಗಿದ್ದು ...
ಲಂಡನ್ ಪ್ರವಾಸದಲ್ಲಿರುವ ವಿದೇಶಾಂಗ ಸಚಿವ ಎಸ್.ಜೈಶಂಕರ್ ರ ಮೇಲೆ ಖಲಿಸ್ತಾನಿ ಉಗ್ರರು ದಾಳಿಗೆ ಯತ್ನಿಸಿರುವ ಘಟನೆ ನಡೆದಿದೆ. ಲಂಡನ್ ಪೊಲೀಸ್ ಅಧಿಕಾರಿಗಳ ಮುಂದೆಯೇ ವ್ಯಕ್ತಿಯೊಬ್ಬ ಜೈಶಂಕರ್ ರ ವಾಹನದ ಕಡೆಗೆ ನುಗ್ಗಿ ಭಾರತದ ರಾಷ್ಟ್ರಧ್ವಜವನ್ನು ಹರಿದು ಹಾಕುತ್ತಿರುವುದು ಕಂಡುಬಂದಿದೆ. ಚಾಥಮ್ ಹೌಸ್ ಚಿಂತಕರ ಚಾವಡಿಯಲ್ಲಿ ನಡೆದ ಕಾರ್ಯ...
ಗಾಝಾವನ್ನು ವಶಪಡಿಸುತ್ತೇನೆ ಎಂಬ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಯೋಜನೆಗೆ ಈಜಿಪ್ಟ್ ಬದಲಿ ಯೋಜನೆಯನ್ನು ಪ್ರಸ್ತಾಪಿಸಿದೆ. ಗಾಝಾದಿಂದ ಹಮಾಸನ್ನು ಹೊರಗಿಡುವುದು ಈಜಿಪ್ಟಿನ ಯೋಜನೆಯ ಮುಖ್ಯ ಭಾಗವಾಗಿದೆ. ಗಾಝಾದಲ್ಲೀಗ ಹಮಾಸ್ ಆಡಳಿತ ವಿದ್ದು ಇದರ ಬದಲು ಅರಬ್ ಮತ್ತು ಪಾಶ್ಚಾತ್ಯ ರಾಷ್ಟ್ರಗಳ ನಿಯಂತ್ರಣದ ಮಧ್ಯಂತರ ಸರಕಾರವನ್ನು ಗಾಝಾ...
ಪ್ರವಾದಿ ಇಬ್ರಾಹಿಮರ ಕಾಲದಿಂದ ಆರಂಭವಾಗಿ ಈವರೆಗೆ ವಿವಿಧ ಕಾಲಘಟ್ಟಗಳಲ್ಲಿ ಕಾಬಾದ ನಿರ್ಮಾಣ, ಪುನರ್ ನಿರ್ಮಾಣ ಇತ್ಯಾದಿಗಳ ಕಡೆಗೆ ಬೆಳಕು ಚೆಲ್ಲುವ ಫಸ್ಟ್ ಹೌಸ್ ಎಂಬ ಪ್ರದರ್ಶನಕ್ಕೆ ಮಕ್ಕಾದ ಮಸ್ಜಿದುಲ್ ಹರಾಮ್ ನಲ್ಲಿ ಚಾಲನೆ ನೀಡಲಾಗಿದೆ. ಮಸ್ಜಿದುಲ್ ಹರಾಂನ ಮೂರನೇ ಅಂತಸ್ತಿನಲ್ಲಿರುವ ನಿರ್ದಿಷ್ಟ ಭಾಗದಲ್ಲಿ ಈ ಇತಿಹಾಸದ ಮರು ನಿರೂಪಣೆಯ...
"ಭಾರತ, ಚೀನಾ ಸೇರಿದಂತೆ ಇತರೆ ದೇಶಗಳು ನಮ್ಮ ಉತ್ಪನ್ನಗಳಿಗೆ ಹೆಚ್ಚು ಸುಂಕ ವಿಧಿಸುತ್ತಿರುವುದು ನ್ಯಾಯವಲ್ಲ" ಎಂದು ಟೀಕಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದೀಗ ಇದಕ್ಕೆ ಪ್ರತಿ ಸುಂಕ ವಿಧಿಸುವ ಘೋಷಣೆ ಮಾಡಿದ್ದಾರೆ. ಈ ಸುಂಕಗಳು ಏಪ್ರಿಲ್ 2ರಿಂದ ಜಾರಿಗೆ ಬರಲಿವೆ ಎಂದಿದ್ದಾರೆ. "ನಮ್ಮಿಂದ ಆಮದು ಮಾಡಿಕೊಳ್ಳುತ್ತಿರುವ ಸರ...
ಈಜಿಪ್ಟ್ನ ರಾಜಧಾನಿ ಕೈರೋದಲ್ಲಿ ನಡೆದ ತುರ್ತು ಶೃಂಗಸಭೆಯಲ್ಲಿ ಅರಬ್ ನಾಯಕರು ಗಾಝಾ ಪುನರ್ ನಿರ್ಮಾಣ ಯೋಜನೆಯನ್ನು ಅಂಗೀಕರಿಸಿದ್ದಾರೆ. 53 ಶತಕೋಟಿ ಅಮೆರಿಕನ್ ಡಾಲರ್ ವೆಚ್ಚದ ಯೋಜನೆ ಇದಾಗಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವರ ಫೆಲೆಸ್ತೀನಿಯನ್ನರ ಸಾಮೂಹಿಕ ಸ್ಥಳಾಂತರದ ʼಮಧ್ಯಪ್ರಾಚ್ಯ ರಿವೇರಿಯಾ" ದೃಷ್ಟಿಕೋನದ ಪ್ರಸ್ತಾಪಕ್...
ವಾಯುವ್ಯ ಪಾಕಿಸ್ತಾನದ ಬನ್ನುವಿನ ಮುಖ್ಯ ಕಂಟೋನ್ಮೆಂಟ್ ನ ಗಡಿ ಗೋಡೆಗೆ ಸ್ಫೋಟಕ ತುಂಬಿದ ಎರಡು ವಾಹನಗಳು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಮಕ್ಕಳು ಸೇರಿದಂತೆ ಕನಿಷ್ಠ 12 ಜನರು ಸಾವನ್ನಪ್ಪಿದ್ದಾರೆ ಮತ್ತು 30 ಜನರು ಗಾಯಗೊಂಡಿದ್ದಾರೆ. ಪೇಶಾವರದಿಂದ ನೈಋತ್ಯಕ್ಕೆ 200 ಕಿ.ಮೀ ದೂರದಲ್ಲಿರುವ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಬನ್ನು ಕಂಟೋ...
ಇಸ್ರೇಲ್ ನ ಪಶ್ಚಿಮದ ನಗರವಾದ ಹೈಫಾದಲ್ಲಿ ಚೂರಿ ಇರಿತಕ್ಕೆ 70 ವರ್ಷದ ವ್ಯಕ್ತಿ ಸಾವಿಗೀಡಾಗಿ ಮೂವರಿಗೆ ಗಾಯವಾಗಿದೆ ಎಂದು ವರದಿಯಾಗಿದೆ. ಆರೋಪಿಯನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 30 ವರ್ಷ ವಯಸ್ಸಿನ ಓರ್ವ ಪುರುಷ, ಓರ್ವ ಮಹಿಳೆ ಮತ್ತು ಹದಿನೈದು ವರ್ಷದ ಬಾಲಕನಿಗೆ ಗಂಭೀರ ಗಾಯವಾಗಿದೆ. ಬಸ್ ನಿಲ್ದಾಣದ ...