ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್ ನಲ್ಲಿ ನಿವೃತ್ತರಾಗೋಕೇ ಯೋಜಿಸುತ್ತಿದ್ದಾರೆ ಮತ್ತು ನಾಗ್ಪುರದ ಆರ್ ಎಸ್ಎಸ್ ಪ್ರಧಾನ ಕಚೇರಿಗೆ ಅವರು ಇತ್ತೀಚೆಗೆ ಭೇಟಿ ನೀಡಿದ್ದಕ್ಕೂ ಅದಕ್ಕೂ ಸಂಬಂಧವಿದೆ ಎಂದು ಶಿವಸೇನೆ (ಯುಬಿಟಿ) ಮುಖಂಡ ಸಂಜಯ್ ರಾವತ್ ಹೇಳಿದ್ದಾರೆ. ಕಳೆದ 10-11 ವರ್ಷಗಳಲ್ಲಿ ಪ್ರಧಾನಿ ಮೋದಿ ಆರ್ ಎಸ್ಎಸ್ ಪ್ರಧಾನ ಕಚೇರಿಗೆ ಭೇಟಿ ...
ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಚಲನಚಿತ್ರ ನಿರ್ದೇಶಕ ಸನೋಜ್ ಕುಮಾರ್ ಮಿಶ್ರಾ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ವೈರಲ್ ಆಗಿದ್ದ ಮಹಾಕುಂಭಮೇಳದ ಹುಡುಗಿ ಮೊನಾಲಿಸಾಗೆ ಇತ್ತೀಚಿಗೆ ಸಿನಿಮಾ ಆಫರ್ ನೀಡಲು ಮುಂದಾಗಿ ಮಿಶ್ರಾ ಸುದ್ದಿಯಲ್ಲಿದ್ದರು. ಇದೀಗ ಈ ಕೇಸ್ ಗೆ ಸಂಬಂಧಿಸಿದಂತೆ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ದೆಹಲಿ ...
ಮುಂಬೈ ಪೊಲೀಸ್ ಬಂದರು ವಲಯದ ಉಪ ಆಯುಕ್ತ ಸುಧಾಕರ್ ಪಠಾರೆ ಅವರು ಇಂದು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಹೈದರಾಬಾದ್ ನಲ್ಲಿ ಮಧ್ಯಾಹ್ನದ ಸುಮಾರಿಗೆ ಅಪರಿಚಿತ ವಾಹನವು ಅವರ ಕಾರಿಗೆ ಡಿಕ್ಕಿ ಹೊಡೆದಾಗ ಈ ಘಟನೆ ಸಂಭವಿಸಿದೆ. ಅವರು ತರಬೇತಿಗಾಗಿ ನಗರದಲ್ಲಿದ್ದರು. ಅಲ್ಲದೇ ಇಂದು ರಜಾದಿನವಾದ್ದರಿಂದ ಹೊರಗೆ ಹೋಗಿದ್ದರು. ಮುಂದಿನ ದಿನಗ...
ನಕಲಿ ಬ್ಯಾಂಕ್ ಗ್ಯಾರಂಟಿಗಳ ಮೂಲಕ ಮದ್ಯದ ಒಪ್ಪಂದಗಳನ್ನು ಹಂಚಿಕೆ ಮಾಡುವ ಹಗರಣವನ್ನು ಮಧ್ಯಪ್ರದೇಶದ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. 15.32 ಕೋಟಿ ರೂ.ಗಳ ಹಣಕಾಸು ಅಕ್ರಮದಲ್ಲಿ ಭಾಗಿಯಾಗಿರುವ ಅಬಕಾರಿ ಅಧಿಕಾರಿಗಳು, ಬ್ಯಾಂಕ್ ಅಧಿಕಾರಿಗಳು ಮತ್ತು ಮದ್ಯ ಗುತ್ತಿಗೆದಾರರ ವಿರುದ್ಧ ಆರ್ಥಿಕ ಅಪರಾಧಗಳ ವಿಭಾಗ (ಇಒಡಬ್ಲ್ಯೂ) ಪ್ರಕರಣ ದಾಖಲಿಸಿ...
ಛತ್ತೀಸ್ ಗಢದಲ್ಲಿ 50 ನಕ್ಸಲರು ಶರಣಾಗಿರುವುದನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಶ್ಲಾಘಿಸಿದ್ದಾರೆ. ಹಾಗೆಯೇ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಅಭಿವೃದ್ಧಿಯ ಹಾದಿಯನ್ನು ಅಳವಡಿಸಿಕೊಳ್ಳುವವರಿಗೆ ಪುನರ್ವಸತಿ ಕಲ್ಪಿಸಲಾಗುವುದು ಎಂದು ಹೇಳಿದ್ದಾರೆ. ಶರಣಾಗಲು ಮುಂದೆ ಬರದವರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಮುಖ್ಯವಾಹಿನಿಗೆ ಸೇರ...
ಒಡಿಶಾದ ಕಟಕ್ ಜಿಲ್ಲೆಯಲ್ಲಿ ಭಾನುವಾರ ಎಕ್ಸ್ ಪ್ರೆಸ್ ರೈಲು ಹಳಿ ತಪ್ಪಿದ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎಸ್ಎಂವಿಟಿ ಬೆಂಗಳೂರು-ಕಾಮಾಕ್ಯ ಎಸಿ ಎಕ್ಸ್ ಪ್ರೆಸ್ ನ 11 ಬೋಗಿಗಳು ಬೆಳಿಗ್ಗೆ 11.54 ಕ್ಕೆ ಮಂಗುಲಿ ಬಳಿಯ ನಿರ್ಗುಂಡಿಯಲ್ಲಿ ಹಳಿ ತಪ್ಪಿವೆ ಎಂದು ಪೂ...
ಹಿಮಾಚಲ ಪ್ರದೇಶದ ಕುಲ್ಲುವಿನ ಮಣಿಕರಣ್ ಗುರುದ್ವಾರದ ಪಾರ್ಕಿಂಗ್ ಬಳಿ ಮರಗಳು ಉರುಳಿಬಿದ್ದ ಪರಿಣಾಮ ಆರು ಜನರು ಸಾವನ್ನಪ್ಪಿದ್ದಾರೆ ಮತ್ತು ಐದು ಮಂದಿ ಗಾಯಗೊಂಡಿದ್ದಾರೆ. ಪೊಲೀಸರು ಮತ್ತು ರಕ್ಷಣಾ ತಂಡಗಳು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿವೆ. ಪೊಲೀಸರು ಮತ್ತು ಜಿಲ್ಲಾಡಳಿತದ ರಕ್ಷಣಾ ತಂಡಗಳು ಗಾಯಗೊಂಡ ಐವರನ್ನು ಜಾರಿಯ ಸ್ಥಳೀಯ ಸಮು...
ಪೂರ್ವ ದೆಹಲಿಯ ಫ್ಲ್ಯಾಟ್ ನಲ್ಲಿ ಬೆಡ್ ಬಾಕ್ಸ್ ನಲ್ಲಿ ತುಂಬಿದ ಮಹಿಳೆಯ ಕೊಳೆತ ಶವ ಪತ್ತೆಯಾದ ಒಂದು ದಿನದ ನಂತರ, ಪೊಲೀಸರು ಫ್ಲಾಟ್ ಮಾಲೀಕನನ್ನು ಮತ್ತು ಸಂತ್ರಸ್ತೆಯ ಪತಿಯ ಸಹಾಯಕನನ್ನು ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ಘಟನೆಯ ನಂತರ ಪತಿ ಇನ್ನೂ ಪತ್ತೆಯಾಗಿಲ್ಲ. ಆರೋಪಿಗಳಲ್ಲಿ ಓರ್ವನಾದ ಫ್ಲಾಟ್ ಮಾಲೀಕ ವಿವೇಕಾನಂದ ಮಿಶ್ರಾ ಅವರನ್ನು...
ಜೈಪುರದಿಂದ ಹೊರಟಿದ್ದ ಸ್ಪೈಸ್ ಜೆಟ್ ವಿಮಾನವು ತಾಂತ್ರಿಕ ದೋಷದಿಂದಾಗಿ ಭಾನುವಾರ ಮುಂಜಾನೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ತಾಂತ್ರಿಕ ದೋಷವನ್ನು ಪೈಲಟ್ ಪತ್ತೆ ಹಚ್ಚಿದ ನಂತರ ವಿಮಾನವು ಮಧ್ಯದಲ್ಲಿ ಹಿಂದಿರುಗಿತು ಮತ್ತು ಬೆಳಿಗ್ಗೆ 5: 46 ಕ್ಕೆ ಸುರಕ್ಷಿತವಾಗಿ ಇಳಿಯಿತು ಎಂದು ಮೂಲಗಳು ತಿಳಿಸಿವೆ. ಲ್ಯಾಂಡಿಂ...
ಜೆಮ್ ಶೆಡ್ ಪುರದಲ್ಲಿ ಉತ್ತರ ಪ್ರದೇಶ ವಿಶೇಷ ಕಾರ್ಯಪಡೆ (ಯುಪಿ ಎಸ್ಟಿಎಫ್) ಮತ್ತು ಜಾರ್ಖಂಡ್ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ ಸಂದರ್ಭದಲ್ಲಿ ಶನಿವಾರ ತಡರಾತ್ರಿ ನಡೆದ ಪೊಲೀಸ್ ಎನ್ ಕೌಂಟರ್ ನಲ್ಲಿ ಮುಖ್ತಾರ್ ಅನ್ಸಾರಿ ಗ್ಯಾಂಗ್ ನ ಶಾರ್ಪ್ ಶೂಟರ್ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶಾರ್ಪ್ ಶೂಟರ್ ಅನ್ನು 5...