ಕುವೈತ್ ದಿನಾರ್ ವಿಶ್ವದ ಅತ್ಯಂತ ಮೌಲ್ಯಯುತ ಕರೆನ್ಸಿ ಎಂದು ವರದಿಯಾಗಿದೆ. ಕುವೈತ್ ದಿನಾರ್ ನಂತರ ಬಹ್ರೇನಿ ದಿನಾರ್, ಒಮಾನಿ ರಿಯಾಲ್, ಜೋರ್ಡಾನ್ ದಿನಾರ್, ಜಿಬ್ರಾಲ್ಟರ್ ಪೌಂಡ್ ಮತ್ತು ಬ್ರಿಟಿಷ್ ಪೌಂಡ್ ಮೌಲ್ಯಯುತ ಕರೆನ್ಸಿಯ ಪಟ್ಟಿಯಲ್ಲಿವೆ. ಇದನ್ನು ಫೋರ್ಬ್ಸ್ ಇಂಡಿಯಾ ಮತ್ತು ಇನ್ವೆಸ್ಟೋಪೀಡಿಯಾದಂತಹ ಮಾಧ್ಯಮಗಳು ವರದಿ ಮಾಡಿವೆ. ಒಂದ...
ಕದನ ವಿರಾಮಕ್ಕೆ ಇಸ್ರೇಲ್ ಮತ್ತು ಹಮಾಸ್ ಎರಡೂ ಕಡೆಯವರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಮಧ್ಯಸ್ಥಿಕೆ ವಹಿಸಿದ ಕತಾರ್ ಘೋಷಣೆ ಮಾಡುತ್ತಿದ್ದಂತೆ ಯುದ್ಧ ಪೀಡಿತ ಗಾಝಾ ಜನತೆ ಸಂಭ್ರಮಾಚರಣೆ ಮಾಡಿದ್ದಾರೆ. ಈ ನಡುವೆ ಇಸ್ರೇಲ್ ತನ್ನ ಆಕ್ರಮಣ ಮುಂದುವರೆಸಿದೆ. ಕದನ ವಿರಾಮ ಜನವರಿ 19ರಿಂದ ಜಾರಿಗೆ ಬರುವ ಸಾಧ್ಯತೆ ಇದೆ ಎಂದು ವರದಿಗಳು ಹೇಳಿವೆ. ...
ಆರು ದಿನಗಳು ಕಳೆದ ಬಳಿಕವೂ ಅಮೆರಿಕಾದ ಲಾಸ್ ಎಂಜಲೀಸ್ ನಲ್ಲಿ ಉಂಟಾಗಿರುವ ಬೆಂಕಿ ಅನಾಹುತ ನಿಯಂತ್ರಣಕ್ಕೆ ಬಂದಿಲ್ಲ. ಈಗಾಗಲೇ 24 ಮಂದಿ ಸಾವಿಗೀಡಾಗಿದ್ದಾರೆ. 40,000 ಎಕರೆಗಿಂತಲೂ ಅಧಿಕ ಪ್ರದೇಶವನ್ನು ಬೆಂಕಿ ಆವರಿಸಿಕೊಂಡಿದೆ. ಇದರಿಂದಾಗಿ 13 ದಶಲಕ್ಷ ಜನರು ಸಂಕಟಕ್ಕೆ ಒಳಗಾಗಿದ್ದಾರೆ. 92,000 ಕ್ಕಿಂತಲೂ ಅಧಿಕ ಮಂದಿಯನ್ನು ಬೇರೆಡೆಗೆ ಸ್ಥಳ...
ಭಾರತೀಯ ವಿಮಾನ ಕಂಪನಿಗಳು ಹ್ಯಾಂಡ್ ಬ್ಯಾಗ್ ನ ಭಾರವನ್ನು 7 ಕಿಲೋಗೆ ಮಿತಿಗೊಳಿಸಿದೆ. ಅದಕ್ಕಿಂತ ಹೆಚ್ಚಿನ ಭಾರಕ್ಕೆ ಅದು ದಂಡವನ್ನು ವಿಧಿಸುತ್ತದೆ. ಇದರ ಮಧ್ಯೆಯೇ ಏರ್ ಅರೇಬಿಯಾ ವಿಮಾನ ಯಾನ ಕಂಪನಿಯು ಈ ವಿಷಯದಲ್ಲಿ ಉದಾರನೀತಿಯನ್ನು ಘೋಷಿಸಿದೆ. ಹತ್ತು ಕಿಲೋ ಭಾರವಿರುವ ಹ್ಯಾಂಡ್ ಬ್ಯಾಗಿಗೆ ಅದು ಅನುಮತಿಯನ್ನು ನೀಡುವುದಾಗಿ ಘೋಷಿಸಿದೆ. ...
ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರ ಪ್ರಮಾಣವಚನ ಸಮಾರಂಭದಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಭಾಗವಹಿಸಲಿದ್ದಾರೆ. ವೇಟರ್ಗೆ ಆಹ್ವಾನ ನೀಡಲಾಗಿದೆ. ಆದರೆ ಪ್ರಧಾನಿಗೆ ಆಹ್ವಾನ ನೀಡಲಾಗಿಲ್ಲ ಎಂದು ಹಿರಿಯ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ವ್ಯಂಗ್ಯವಾಡಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಸ...
ಅಮೆರಿಕದ ಲಾಸ್ ಏಂಜಲೀಸ್ ವ್ಯಾಪಿಸಿರುವ ಕಾಳ್ಗಿಚ್ಚು ಇನ್ನು ಕೂಡ ಹತೋಟಿಗೆ ಬಂದಿಲ್ಲ. ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡುತ್ತಿದ್ದು, ಮೃತರ ಸಂಖ್ಯೆ 24ಕ್ಕೆ ಏರಿಕೆಯಾಗಿದೆ. ಸಾವಿರಾರು ಮನೆಗಳು ಸುಟ್ಟು ಕರಕಲಾಗಿದ್ದು, ಭಾರೀ ಪ್ರಮಾಣದ ಅರಣ್ಯ ಸುಟ್ಟುಹೋಗಿದೆ. ಬುಧವಾರದವರೆಗೆ ಕಾಳ್ಗಿಚ್ಚು ಮತ್ತಷ್ಟು ವ್ಯಾಪಿಸುವ ಬಗ್ಗೆ...
ಶ್ರೀಲಂಕಾ ನೌಕಾಪಡೆಯು ದ್ವೀಪ ರಾಷ್ಟ್ರದ ಪ್ರಾದೇಶಿಕ ಜಲಪ್ರದೇಶದಲ್ಲಿ ಮೀನುಗಾರಿಕೆ ನಡೆಸಿದ ಆರೋಪದ ಮೇಲೆ ಎಂಟು ಭಾರತೀಯ ಮೀನುಗಾರರನ್ನು ಬಂಧಿಸಿದೆ ಮತ್ತು ಎರಡು ಮೀನುಗಾರಿಕಾ ಟ್ರಾಲರ್ ಗಳನ್ನು ವಶಪಡಿಸಿಕೊಂಡಿದೆ ಎಂದು ಭಾನುವಾರ ತಿಳಿಸಿದೆ. ಶನಿವಾರ ರಾತ್ರಿ ಮನ್ನಾರ್ ನ ಉತ್ತರದ ಸಮುದ್ರ ಪ್ರದೇಶದಲ್ಲಿ ನಡೆಸಿದ ವಿಶೇಷ ಕಾರ್ಯಾಚರಣೆಯ ಸಮಯ...
ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಮುಂಬರುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸುವ ಸಾಧ್ಯತೆ ಇದೆ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮ ವರದಿ ತಿಳಿಸಿದೆ. ಈ ಬಗ್ಗೆ ಅಧಿಕೃತ ದೃಢೀಕರಣಕ್ಕಾಗಿ ಕಾಯಲಾಗುತ್ತಿದೆ. 73 ವರ್ಷದ ಮಾಜಿ ಸೇನಾ ಜನರಲ್ ಸುಬಿಯಾಂಟೊ 2024 ರ ಅಕ್ಟೋಬರ್ ನಲ್ಲಿ ಇಂಡೋನೇಷ್ಯಾದ ಅಧ್ಯಕ್...
ಇಸ್ರೇಲ್ ಪ್ರಧಾನಿ ನೆತನ್ಯಾಹು ಮತ್ತು ಅಮೆರಿಕದ ಚುನಾಯಿತ ಅಧ್ಯಕ್ಷ ಟ್ರಂಪ್ ನಡುವೆ ಎಲ್ಲವೂ ಸರಿ ಇಲ್ಲ ಎಂದು ವರದಿಯಾಗಿದೆ. ಟ್ರಂಪ್ ಅವರ ಪ್ರತಿಜ್ಞಾ ಸಮಾರಂಭಕ್ಕೆ ನೆತನ್ಯಾಹು ಅವರಿಗೆ ಆಹ್ವಾನ ನೀಡಲಾಗಿಲ್ಲ ಎಂದು ಮಾತ್ರವಲ್ಲ ಅವರನ್ನು ತೀವ್ರವಾಗಿ ವಿರೋಧಿಸುವ ವಿಡಿಯೋವನ್ನು ದಿನಗಳ ಹಿಂದೆ ಟ್ರಂಪ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವುದ...
ಜನಸಂಖ್ಯೆಯನ್ನು ಹೆಚ್ಚಿಸುವ ಗುರಿಯೊಂದಿಗೆ ರಷ್ಯಾ ಹೊಸ ಪ್ರಯೋಗಕ್ಕೆ ಇಳಿದಿದೆ. ಆರೋಗ್ಯಪೂರ್ಣ ಮಗುವಿಗೆ ಜನನ ನೀಡುವ 25 ವರ್ಷದ ಕೆಳಗಿನ ವಿದ್ಯಾರ್ಥಿನಿಯರಿಗೆ ಸುಮಾರು 81 ಸಾವಿರ ರೂಪಾಯಿ ನೀಡುವುದಾಗಿ ರಷ್ಯಾದ ಕರೇಲಿಯಾ ರಾಜ್ಯದ ಸರ್ಕಾರ ಘೋಷಿಸಿದೆ. ಜನವರಿ ಒಂದರಿಂದ ಈ ಹೊಸ ಯೋಜನೆ ಜಾರಿಗೆ ಬರಲಿದೆ. ತಾಯಿ ಯಾವುದಾದರೂ ಯೂನಿವರ್ಸಿಟಿಯಲ್ಲಿ ...