ಕುಡಿದು ವಾಹನ ಚಲಾಯಿಸಿ ಸಿಕ್ಕಿ ಬಿದ್ದ: ಪೊಲೀಸರ ಮುಂದೆ ಸರ್ಕಾರಕ್ಕೆ ಬೈದ ಕುಡುಕ

08/01/2024
ಬೆಂಗಳೂರು: ಕುಡಿದು ವಾಹನ ಚಲಾಯಿಸಿ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಕುಡುಕನೋರ್ವ ರಾಜಕೀಯ ಮಾತನಾಡಿ, ಪೊಲೀಸರನ್ನು ಸುಸ್ತಾಗಿಸಿದ ಘಟನೆ ಹಲಸೂರು ಗೇಟ್ ಬಳಿ ನಡೆದಿದೆ.
ಪಾನಮತ್ತನಾಗಿದ್ದ ಚಾಲಕನ ಆಲ್ಕೋ ಮೀಟರ್ ಟೆಸ್ಟಿಂಗ್ ಮಾಡಲು ಪೊಲೀಸರು ಮುಂದಾದಾಗ ಸರ್ಕಾರವನ್ನು ಬೈದ ಚಾಲಕ ಗೃಹಸಚಿವರು ಪೊಲೀಸರನ್ನ ಬಿಟ್ಟು ಸಿಕ್ಕ ಸಿಕ್ಕವರನ್ನ ಡಿಡಿ ಚೆಕ್ ಮಾಡಿಸ್ತಿದ್ದಾರೆ. ನಮ್ಮ ಬಿಜೆಪಿ ಸರ್ಕಾರ ಹೀಗೆ ಮಾಡುತ್ತಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾನೆ.
ಆಲ್ಕೋ ಮೀಟರ್ ಟೆಸ್ಟಿಂಗ್ ಮಾಡಲು ಒಪ್ಪದ ಕುಡುಕ, ಸುಮಾರು 30 ನಿಮಿಷಗಳ ಕಾಲ ಪೊಲೀಸರನ್ನು ಸತಾಯಿಸಿದ್ದಾನೆ.
ಟೆಸ್ಟಿಂಗ್ ನಲ್ಲಿ 140% ಆಲ್ಕೋ ಹಾಲ್ ಸೇವನೆ ಮಾಡಿರೋದು ಪತ್ತೆಯಾಗಿದೆ. ಹೈಡ್ರಾಮದ ಬಳಿಕ ಹಲಸೂರು ಗೇಟ್ ಸಂಚಾರಿ ಪೊಲೀಸರು ಕಾರು ಸೀಜ್ ಮಾಡಿದ್ದಾರೆ.