ಸಿಬಿಐ ಅಧಿಕಾರಿಗಳು ಎಂದು ಹೇಳಿ ಲಕ್ಷಾಂತರ ರೂ. ನಗದು, ಚಿನ್ನಾಭರಣ ದರೋಡೆ - Mahanayaka
8:24 PM Wednesday 5 - February 2025

ಸಿಬಿಐ ಅಧಿಕಾರಿಗಳು ಎಂದು ಹೇಳಿ ಲಕ್ಷಾಂತರ ರೂ. ನಗದು, ಚಿನ್ನಾಭರಣ ದರೋಡೆ

kollara
01/03/2022

ಕೋಲಾರ: ಸಿಬಿಐ ಅಧಿಕಾರಿಗಳು ಎಂದು ಮನೆಯೊಳಗೆ ನುಗ್ಗಿದ ಲಕ್ಷಾಂತರ ರೂಪಾಯಿ ನಗದು ಮತ್ತು ಚಿನ್ನಾಭರಣ ದರೋಡೆಗೈದಿರುವ ಘಟನೆ ಕೋಲಾರದಲ್ಲಿ ಬೆಳಕಿಗೆ ಬಂದಿದೆ.

ನಗರದ ಸಿ.ಭೈರೇಗೌಡ ಬಡಾವಣೆಯ ನಿವಾಸಿ ರಮೇಶ್ ಮನೆಯಲ್ಲಿ ಈ ದರೋಡೆ ನಡೆದಿದೆ. ನಿನ್ನೆ ರಾತ್ರಿ 11 ಗಂಟೆ ಸಮಯಕ್ಕೆ ಐದರಿಂದ ಆರು ಮಂದಿ ದರೋಡೆಕೊರರ ತಂಡ ರಮೇಶ್ ಅವರ ಮನೆ ಬಳಿ ಬಂದಿದ್ದಾರೆ. ಗೇಟ್ ಬಳಿಯೇ ಇದ್ದ ಮನೆ ಮಾಲಕ ರಮೇಶ್‍ಗೆ ನಾವು ಸಿಬಿಐನಿಂದ ಬಂದಿದ್ದೇವೆ ಎಂದು ಐಡಿ ಕಾರ್ಡ್ ತೋರಿಸಿ ಮನೆಯೊಳಗೆ ನುಗ್ಗಿದ್ದಾರೆ. ಒಳಗೆ ಹೋಗುತ್ತಿದಂತೆ ಆರೋಪಿಗಳು ರಮೇಶ್ ಹಾಗೂ ಆತನ ಪತ್ನಿಯನ್ನು ಕೈಕಟ್ಟಿಹಾಕಿದ್ದಾರೆ.

ಅಲ್ಲದೆ, ದಂಪತಿಗೆ ಪಿಸ್ತೂಲ್‍ಗಳನ್ನು ತೋರಿಸಿ ಲಾಕರ್‌ ಗಳ ಕೀಗಳನ್ನು ಒಡೆದು, ಲಕ್ಷಾಂತರ ರೂಪಾಯಿ ನಗದು ಹಾಗೂ ಒಂದು ಕೆಜಿಗೂ ಹೆಚ್ಚು ಚಿನ್ನವನ್ನು ದೋಚಿದ್ದಾರೆ.

ದಂಪತಿ ಮತ್ತು ಪುತ್ರನನ್ನು ದೇವರ ಕೋಣೆಯೊಳಗೆ ಕೂಡಿಹಾಕಿರುವ ದರೋಡಕೋರರು ಅಲ್ಲಿಂದ ಪರಾರಿಯಾಗಿದ್ದಾರೆ. ಮನೆಯ ಸಿಸಿಟಿವಿಗೆ ಸಂಬಂಧಿಸಿದ ಹಾರ್ಡ್ ಡಿಸ್ಕ್‌ನ್ನು ಹೊತ್ತೊಯ್ದಿದ್ದಾರೆ.
ಸ್ಥಳಕ್ಕೆ ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೇವರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

 ಜಾರ್ಖಂಡ್ ದೋಣಿ ದುರಂತ: ಸಾವಿನ ಸಂಖ್ಯೆ 14ಕ್ಕೆ ಏರಿಕೆ

ವುಡ್​ ಕಾಂಪ್ಲೆಕ್ಸ್​​ ಬಳಿ ನಿಲ್ಲಿಸಿದ್ದ ಖಾಸಗಿ ಬಸ್​​​ಗಳಿಗೆ ಬೆಂಕಿ

ಉಕ್ರೇನ್ ಮೇಲೆ ರಷ್ಯಾ ವೈಮಾನಿಕ ದಾಳಿ: ಕರ್ನಾಟಕ ಮೂಲದ ವಿದ್ಯಾರ್ಥಿಯ ಸಾವು

ಕೆಂಪುಕೋಟೆ ಮೇಲೆ ಭಗವಧ್ವಜ ಹಾರಿಸಿಯೇ ಸಿದ್ದ: ಬಿಜೆಪಿ ಶಾಸಕ ಹರೀಶ್ ಪೂಂಜಾ ವಿವಾದಾತ್ಮಕ ಹೇಳಿಕೆ

ಪ್ರೀತಿಗೆ ಪೋಷಕರ ವಿರೋಧ: ರೈಲಿಗೆ ತಲೆಕೊಟ್ಟು ಪ್ರೇಮಿಗಳು ಆತ್ಮಹತ್ಯೆ

 

ಇತ್ತೀಚಿನ ಸುದ್ದಿ