1997ರ ಮುಂಬೈನ ಖ್ಯಾತ ಟ್ರೇಡ್ ಯೂನಿಯನ್ ನಾಯಕನ‌ ಹತ್ಯೆ ಕೇಸ್: ಛೋಟಾ ರಾಜನ್‌ ಗೆ ಬಿಗ್ ರಿಲೀಫ್ - Mahanayaka
8:07 AM Tuesday 17 - December 2024

1997ರ ಮುಂಬೈನ ಖ್ಯಾತ ಟ್ರೇಡ್ ಯೂನಿಯನ್ ನಾಯಕನ‌ ಹತ್ಯೆ ಕೇಸ್: ಛೋಟಾ ರಾಜನ್‌ ಗೆ ಬಿಗ್ ರಿಲೀಫ್

28/07/2023

1997ರಲ್ಲಿ ಹತ್ಯೆಗೀಡಾದ ಮುಂಬೈನ ಖ್ಯಾತ ಟ್ರೇಡ್ ಯೂನಿಯನ್ ನಾಯಕ ಡಾ.ದತ್ತಾ ಸಾಮಂತ್ ಹತ್ಯೆ ಪ್ರಕರಣದಲ್ಲಿ ಗ್ಯಾಂಗ್‌ ಸ್ಟರ್ ರಾಜೇಂದ್ರ ಸದಾಶಿವ್ ನಿಕಾಲ್ಜೆ ಅಕಾ ಛೋಟಾ ರಾಜನ್‌ ನನ್ನು ಸಿಬಿಐ ವಿಶೇಷ ನ್ಯಾಯಾಲಯ ಖುಲಾಸೆಗೊಳಿಸಿದೆ.

ಜನವರಿ 16, 1997 ರಂದು ಘಾಟ್‌ ಕೋಪರ್‌ನ ಪಂತ್ ನಗರಕ್ಕೆ ಜೀಪ್ ನಲ್ಲಿ ಪೊವೈನಲ್ಲಿ ಪ್ರಯಾಣಿಸುತ್ತಿದ್ದಾಗ ಪದ್ಮಾವತಿ ರಸ್ತೆಯ ನರೇಶ್ ಜನರಲ್ ಸ್ಟೋರ್ ಬಳಿ ಸಮಂತ್ ಮೇಲೆ ಹಲ್ಲೆ ನಡೆದಿತ್ತು. ಆತನ ಮೇಲೆ ನಾಲ್ವರು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಟ್ರೇಡ್ ಯೂನಿಯನ್ ನಾಯಕನ ಮೇಲಿನ ದಾಳಿಯನ್ನು ಸಂಘಟಿಸಿದ ಆರೋಪ ಛೋಟಾ ರಾಜನ್ ಮೇಲಿತ್ತು.

ಪ್ರಾಸಿಕ್ಯೂಷನ್ ಪ್ರಕರಣದ ಪ್ರಕಾರ ನಾಲ್ವರು ಮೋಟಾರು ಸೈಕಲ್‌ ಗಳಲ್ಲಿ ಬಂದು ಟ್ರೇಡ್ ಜೂನಿಯನ್ ನಾಯಕನ ಜೀಪನ್ನು ಅಡ್ಡಗಟ್ಟಿ ಕನಿಷ್ಠ 17 ಗುಂಡುಗಳನ್ನು ಹಾರಿಸಿದ್ದಾರೆ. ತಕ್ಷಣವೇ ಅವರನ್ನು ಸಮೀಪದ ಅನಿಕೇತ್ ನರ್ಸಿಂಗ್ ಹೋಮ್‌ ಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ಸಾವಿಗೀಡಾಗಿದ್ದಾರೆ ಎಂದು ಘೋಷಿಸಲಾಯಿತು.

ಈ ದಾಳಿಯಲ್ಲಿ ಅವರ ಮುಖ ಮತ್ತು ಕುತ್ತಿಗೆಗೆ ಗಾಯವಾಗಿರುವ ಸಮಂತ್ ಅವರ ಚಾಲಕ ಭೀಮರಾವ್ ಸೋನಕಾಂಬಳೆ ಅವರು ನೀಡಿದ ದೂರಿನ ಆಧಾರದ ಮೇಲೆ ನಾಲ್ವರು ಅಪರಿಚಿತ ದಾಳಿಕೋರರ ವಿರುದ್ಧ ಸಾಕಿನಾಕಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ