ಮನೆಗೆ ಬೆಂಕಿಯಿಟ್ಟು 8 ಮಂದಿಯ ಹತ್ಯೆ ಪ್ರಕರಣ: 21 ಆರೋಪಿಗಳ ಬಂಧನ | ತನಿಖೆ ಆರಂಭಿಸಿದ ಸಿಬಿಐ
ಬಿರ್ಭೂಮ್: ಟಿಎಂಸಿ ನಾಯಕ ಬಾದು ಶೇಖ್ ಹತ್ಯೆಗೆ ಪ್ರತೀಕಾರವಾಗಿ ಮನೆಗಳಿಗೆ ಬೆಂಕಿಯಿಟ್ಟು 8 ಜನರನ್ನು ಸಜೀವವಾಗಿ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದ್ದು, ಕೇಂದ್ರೀಯ ತನಿಖಾ ಸಂಸ್ಥೆಯು 21 ಆರೋಪಿಗಳನ್ನು ಗುರುತಿಸಿ, ಸೆಕ್ಷನ್ 147, 148, 149 ಮತ್ತು ಇತರ ಸೆಕ್ಷನ್ ಗಳ ಅಡಿಯಲ್ಲಿ ಬಂಧಿಸಿದೆ.
ಈ ಹಿಂಸಾಚಾರ ಪ್ರಕರಣದ ತನಿಖೆಗಾಗಿ ಕೇಂದ್ರೀಯ ತನಿಖಾ ದಳದ ಡಿಐಜಿ ಅಖಿಲೇಶ್ ಸಿಂಗ್ ನೇತೃತ್ವದ 15 ಸದಸ್ಯರು ವಿಧಿವಿಜ್ಞಾನ ತಜ್ಞರೊಂದಿಗೆ ಪಶ್ಚಿಮ ಬಂಗಾಳದ ರಾಮಪುರಹತ್ ಗ್ರಾಮಕ್ಕೆ ತಲುಪಿದ್ದಾರೆ.
ಶುಕ್ರವಾರ ಕಲ್ಕತ್ತಾ ಹೈಕೋರ್ಟ್ ಪಶ್ಚಿಮ ಬಂಗಾಳ ಸರ್ಕಾರ ರಚಿಸಿರುವ ಎಸ್‌ಐಟಿಗೆ ಕೇಸ್ ಪೇಪರ್‌ಗಳು ಮತ್ತು ಆರೋಪಿಗಳನ್ನು ಕೇಂದ್ರ ತನಿಖಾ ಸಂಸ್ಥೆಗೆ ಹಸ್ತಾಂತರಿಸುವಂತೆ ನಿರ್ದೇಶಿಸಿದ ನಂತರ ಶುಕ್ರವಾರ ಬಿರ್ಭೂಮ್ (ರಾಮ್‌ಪುರಹತ್) ಹಿಂಸಾಚಾರ ಪ್ರಕರಣದ ತನಿಖೆಯನ್ನು ಸಿಬಿಐ ವಹಿಸಿಕೊಂಡಿದೆ.
ಮಾರ್ಚ್ 21ರಂದು ಗ್ರಾಮದ 10 ಮನೆಗಳಿಗೆ ಬೆಂಕಿ ಹಚ್ಚಲಾಗಿತ್ತು. ಪರಿಣಾಮವಾಗಿ ಮಹಿಳೆಯರು ಹಾಗೂ ಮಕ್ಕಳು ಸೇರಿ ಕನಿಷ್ಠ 8 ಮಂದಿ ಸಾವನ್ನಪ್ಪಿದ್ದರು. ಇನ್ನೂ ತನಿಖೆ ಆರಂಭಿಸಿರುವ ಸಿಬಿಐ ಅಧಿಕಾರಿಗಳು ಈ ಬಗ್ಗೆ ಪ್ರತಿಕ್ರಿಯಿಸಿ, ಇಂದು ತನಿಖೆಯನ್ನು ಪ್ರಾರಂಭಿಸುತ್ತಿದ್ದೇವೆ. ಘಟನೆ ನಡೆದ ಮನೆಗಳನ್ನು ಪರಿಶೀಲನೆ ನಡೆಸಿದ್ದೇವೆ. ಯುದ್ದೋಪಾದಿಯಲ್ಲಿ ತನಿಖೆಯನ್ನು ಮುಂದುವರಿಸುತ್ತೇವೆ ಎಂದು ಹೇಳಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ನವಜಾತ ಶಿಶುವಿನ ಮೃತದೇಹವನ್ನು ಹೊಲದಲ್ಲಿ ಎಸೆದು ಹೋದ ಪಾಪಿಗಳು!
ಮಗಳ ಮೃತದೇಹವನ್ನು ಹೊತ್ತು 10 ಕಿ.ಮೀ. ನಡೆದ ತಂದೆ
ಸಂಚಾರಿ ವಿಜಯ್ ಅವರ ಮುಂದಿನ ಚಿತ್ರವನ್ನು ಎಲ್ಲರೂ ವೀಕ್ಷಿಸಿ: ಮಲಯಾಳಂ ಖ್ಯಾತ ನಟ ಮಮ್ಮುಟ್ಟಿ ಕರೆ
ಟಿಪ್ಪು ಹೆಸರಿನಲ್ಲಿ ನಿತ್ಯ ಸಲಾಂ ಮಂಗಳಾರತಿ ಬೇಡ: ಕೊಲ್ಲೂರು ದೇವಾಲಯಕ್ಕೆ ಮನವಿ