ರಮೇಶ್ ಜಾರಕಿಹೊಳಿ ಸಿಡಿ ಬಿಡುಗಡೆಗೂ ಮುನ್ನ ಪಿಜಿ ತೊರೆದ್ದ ಮಹಿಳೆ | ಪೊಲೀಸರಿಗೆ ಸಿಕ್ಕ ಮಾಹಿತಿ ಏನು? - Mahanayaka
7:20 AM Thursday 12 - December 2024

ರಮೇಶ್ ಜಾರಕಿಹೊಳಿ ಸಿಡಿ ಬಿಡುಗಡೆಗೂ ಮುನ್ನ ಪಿಜಿ ತೊರೆದ್ದ ಮಹಿಳೆ | ಪೊಲೀಸರಿಗೆ ಸಿಕ್ಕ ಮಾಹಿತಿ ಏನು?

07/03/2021

ಬೆಂಗಳೂರು: ಬಿಜೆಪಿ ನಾಯಕ ರಮೇಶ್ ಜಾರಕಿಹೊಳಿ ಜೊತೆಗೆ ರಾಸಲೀಲೆಯಲ್ಲಿ ನಿರತವಾಗಿದ್ದ ಮಹಿಳೆಯ ಬಗ್ಗೆ ಕಬ್ಬನ್ ಪಾರ್ಕ್ ಪೊಲೀಸರು ಶೋಧ ನಡೆಸಿದ್ದಾರೆ. ಇನ್ನೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ರಮೇಶ್ ಜಾರಕಿಹೊಳಿ ಅವರನ್ನೇ ಭೇಟಿ ಮಾಡಿ ಮಹಿಳೆಯ ಬಗ್ಗೆ ವಿಚಾರಿಸಿದಾಗ ಅವರು ಮಾಹಿತಿ ನೀಡಲು ನಿರಾಕರಿಸಿದ್ದಾರೆ.

ರಮೇಶ್ ಜಾರಕಿಹೊಳಿ ದೂರವಾಣಿ ಕರೆಗಳು, ಕಾಲ್ ರೆಕಾರ್ಡ್ ಮೊದಲಾದವುಗಳ ಆಧಾರದ ಮೇಲೆ ಸೆಕ್ಸ್ ಟೇಪ್ ನಲ್ಲಿರುವ ಮಹಿಳೆ ಆರ್ ಟಿ ನಗರದಲ್ಲಿರುವ ವಸತಿ ಗೃಹದಲ್ಲಿದ್ದಳು ಎನ್ನುವುದು ಪೊಲೀಸರಿಗೆ ತಿಳಿದು ಬಂದಿದೆ.

2018ರಲ್ಲಿ ಈ ಮಹಿಳೆ ಪಿಜಿ ಸೇರಿದ್ದಳು. ಇಲ್ಲಿನ ಐಟಿ ಕಂಪೆನಿಯೊಂದರಲ್ಲಿ ಆಕೆ ಕೆಲಸ ಮಾಡುತ್ತಿದ್ದಳು ಎಂದು ಆಕೆ ಹೇಳಿಕೊಂಡಿದ್ದಳಾದರೂ ಯಾವ ಕಂಪೆನಿ ಎಂದು ಹೇಳಿಕೊಂಡಿಲ್ಲ ಎಂದು ಹೇಳಲಾಗಿದೆ. ಮಾಹಿತಿಗಳ ಪ್ರಕಾರ ಸೆಕ್ಸ್ ಸಿಡಿ ಬಿಡುಗಡೆಯಾಗುವವರೆಗೂ ಆಕೆ ಪಿಜಿಯಲ್ಲಿದ್ದಳು. ಆ ಬಳಿಕ ಆಕೆ ಎಲ್ಲಿ ಹೋಗಿದ್ದಾಳೆ ಎನ್ನುವುದು ಯಾರಿಗೂ ತಿಳಿದಿಲ್ಲ.  ಸೋಮವಾರ ಕೊನೆಯದಾಗಿ ಆಕೆಯನ್ನು ಆಕೆಯ ಸ್ನೇಹಿತೆಯರು ನೋಡಿದ್ದರು ಎಂದು ಹೇಳಲಾಗಿದೆ.

ಇತ್ತೀಚಿನ ಸುದ್ದಿ