ಸಿಡಿ ಬಿಡುಗಡೆಯ ಬಗ್ಗೆ ರಮೇಶ್ ಜಾರಕಿಹೊಳಿ ನೀಡಿದ ಸ್ಪಷ್ಟನೆ ಏನು? - Mahanayaka
8:43 AM Saturday 21 - September 2024

ಸಿಡಿ ಬಿಡುಗಡೆಯ ಬಗ್ಗೆ ರಮೇಶ್ ಜಾರಕಿಹೊಳಿ ನೀಡಿದ ಸ್ಪಷ್ಟನೆ ಏನು?

09/03/2021

ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಪತ್ರಿಕಾಗೋಷ್ಠಿಯ ಕರೆದ ರಮೇಶ್ ಜಾರಕಿಹೊಳಿ, ಸಿಡಿ ವಿಚಾರವಾಗಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

ಸಿಡಿ ಬಿಡುಗಡೆಯಾಗುವ 26 ಗಂಟೆಗಿಂತ ಮೊದಲೇ ನನಗೆ ಬಿಜೆಪಿ ಹೈಕಮಾಂಡ್ ಫೋನ್ ಮಾಡಿ ತಿಳಿಸಿತ್ತು. ಜೊತೆಗೆ ನೀನು ಧೈರ್ಯವಾಗಿರು, ಕಾನೂನು ಹೋರಾಟ ಮಾಡೋಣ ಎಂದು ಹೇಳಿತ್ತು ಎಂದು ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.

ನನ್ನ ರಾಜಕೀಯ ಏಳಿಗೆ ಸಹಿಸದ ಜನರು ಸಿಡಿ ಬಿಡುಗಡೆ ಮಾಡಿದ್ದಾರೆ. ಸಿಡಿಯ ವಿಚಾರವು ನನಗೆ ನಾಲ್ಕು ತಿಂಗಳ ಮೊದಲೇ ತಿಳಿದಿತ್ತು. ನಾನು ಬಹಳ ದುಖದಲ್ಲಿದ್ದೇನೆ. ಸಿಡಿ ಬಿಡುಗಡೆ ಆಗಿದ್ದ ದಿನವೇ ಮೈಸೂರಿನಲ್ಲಿ ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆಯುತ್ತಿದ್ದೆ. ನಾನು ತಪ್ಪು ಮಾಡಿದ್ರೇ.. ಆ ತಾಯಿಯೇ ಶಿಕ್ಷೆ ವಿಧಿಸಲಿ. ಅಲ್ಲಿಂದ ಬಂದು ಒಂದು ದಿನ ತಡೆದು, ರಾತ್ರಿ 9.30ಕ್ಕೆ ಸಿಡಿ ಬಿಡುಗಡೆ ನಂತ್ರ ರಾಜೀನಾಮೆ ಸಲ್ಲಿಸಿದ್ದೇನೆ ಎಂದು ರಮೇಶ್ ಹೇಳಿದರು.


Provided by

ಓರಿಯನ್ ಮಾಲ್ ಸಮೀಪ ಹಾಗೂ ಹುಳಿಮಾವಿನಲ್ಲಿರುವ ಅಪಾರ್ಟ್ಮೆಂಟ್ ಗಳಲ್ಲಿ ಸಿಡಿ ಬಿಡುಗಡೆಯ ಷಡ್ಯಂತ್ರ ನಡೆಸಲಾಗಿದೆ. ಸಿಡಿ ಬಿಡುಗಡೆ ಮಾಡಿದ ನಂತ್ರ, ನಾನು ಮಾನಸೀಕವಾಗಿ ನೊಂದಿದ್ದೇನೆ. ಷಡ್ಯಂತ್ರ ಮಾಡಿದವರನ್ನು ಸುಮ್ಮನೇ ಬಿಡೋದಿಲ್ಲ. ರಾಜಕೀಯವಾಗಿ ಮುಗಿಸಲು ನನ್ನ ವಿರುದ್ಧ ಇಂತಹ ಷಡ್ಯಂತ್ರ ನಡೆದಿದೆ. ಸಿಡಿ 100% ನಕಲಿಯಾಗಿದೆ. ನನಗೆ ಎಲ್ಲಾ ಪಕ್ಷದ ಮೇಲೆ ಗೌರವ ಇದೆ. ಈ ಪ್ರಕರಣದಲ್ಲಿ ನಾನು ನಿರಪರಾಧಿಯಾಗಿದ್ದೇನೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು. ಜೊತೆಗೆ ತನ್ನನ್ನು ರಾಜಕೀಯವಾಗಿ ಮುಗಿಸಲು 2+3+4 ಜನರ ಷಡ್ಯಂತ್ರವಿದೆ ಎಂದು ಅವರು ಹೇಳಿದರು.

ಇತ್ತೀಚಿನ ಸುದ್ದಿ